-ನಾ-
ಕಡಲೆ ನಾವು, ಏಕೆ ಸಿಂಗರ
ಒಡಲಲಿಳೆಯ ಸರ್ವಸಾರ
ಮಂದಿರದಲಿ ಬೇಕಿಲ್ಲ
ಮಾನ್ಯತೆಗಳ ಸೋಗೆಲ್ಲಾ
ಧೃತಿಯೆ ನಮ್ಮ ಕಾವ ದೀಪ್ತಿ
ಸ್ತುತಿಗೆ ಸಿಗದು ಸುಳ್ಳೆ ಪ್ರಾಪ್ತಿ
ಸೃಷ್ಟಿ ನಮ್ಮ ಸದ್ಗತಿ
ಶಕ್ತಿ ನಮ್ಮ ಸಾರಥಿ
ಮೊಟ್ಟಮೊದಲ ಬಾರಿಗೆ!!!! ಅಂತರಾಷ್ಟ್ರೀಯ ಕನ್ನಡ ಓದುಗರಿಗೆ ಆಯಾಮದ ಹೊಸ ಕೊಡುಗೆ!
ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.