ಬೇಕಾಗುವ ಪದಾರ್ಥಗಳು:
ಉಪ್ಪುಸಾರಿಗೆ:

ತೊಗರಿ ಬೇಳೆ-
೧ ಕಪ್

ಹರಿವೆ, ದಂಟು, ಸಬ್ಬಕ್ಕಿ ಅಥವಾ ನುಗ್ಗೆ ಸೊಪ್ಪು-
ಎರಡು ಕಟ್ಟು.
 
ಉಪ್ಪುಸಾರಿನ ಖಾರಕ್ಕೆ:
ಒಣಮೆಣಸಿನಕಾಯಿ-
೨೫ ಗ್ರಾಮ್
ಬೆಳ್ಳುಳ್ಳಿ-ಎರಡು ಗಡ್ಡೆ
ಜೀರಿಗೆ-೧ ಚಮಚ
ಕಾಳು ಮೆಣಸು-೧ ಚಮಚ
ಹುಣಸೆಹಣ್ಣು-ನೆಲ್ಲಿಕಾಯಿ ಗಾತ್ರದಷ್ಟು

ಕೊತ್ತಂಬರಿ ಸೊಪ್ಪು-
ಕಾಲು ಕಟ್ಟು ಅಥವಾ ೭-೮ ಕಡ್ಡಿ
ಒಣ ಕೊಬರಿ-ಅರ್ಧ ಮುಷ್ಟಿ ಅಥವಾ ೨ ಇಂಚು

ಹುಚ್ಚೆಳ್ಳು/ಗುರೆಳ್ಳು-೧ ಚಮಚ
ರುಚಿಗೆ ತಕ್ಕಷ್ಟು ಉಪ್ಪು
 
 
 

 

ಬಗೆ ೧
ಸೊಪ್ಪಿನ ಉಪ್ಪುಸಾರು
ಶ್ರೀಮತಿ ಶುಭಾ ಶಂಕರ್, ಬೆಂಗಳೂರು
 ವಿಧಾನ:
 
  • ಸೊಪ್ಪನ್ನು ಚನ್ನಾಗಿ ಸೋಸಿ, ತೊಳೆದು, ಸಣ್ಣದಾಗಿ ಹೆಚ್ಚಿಕೊಳ್ಳಿ. ಬೇಳೆಯನ್ನು ಸ್ವಲ್ಪ ಬೇಯಿಸಿಕೊಂಡು ಅದು ಬೆಂದ ಮೇಲೆ ಸೊಪ್ಪನ್ನು ಸೇರಿಸಿ, ಸ್ವಲ್ಪ ಉಪ್ಪು ಸೇರಿಸಿ ಮತ್ತೆ ಬೇಯಿಸಿಟ್ಟುಕೊಳ್ಳಬೇಕು.
  • ಒಣಮೆಣಸಿನಕಾಯಿ ಮತ್ತು ಹುಚ್ಚೆಳ್ಳನ್ನು ಬಾಣಲಿಯಲ್ಲಿ ಸ್ವಲ್ಪ ಹುರಿದುಕೊಳ್ಳಿ. ಮಿಕ್ಕೆಲ್ಲ ಪದಾರ್ಥಗಳ ಜೊತೆ ಮಿಕ್ಸಿಗೆ ಹಾಕಿ, ಸ್ವಲ್ಪ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಿಟ್ಟುಕೊಳ್ಳಿ. 
  • ಸೊಪ್ಪು ಬೇಳೆಯ ಕಟ್ಟಿಗೆ ನಿಮಗೆ ಬೇಕಾಗುವಷ್ಟು ಖಾರವನ್ನು ಕಲೆಸಿಕೊಂಡು ಮುದ್ದೆ ಅಥವಾ ಅನ್ನದ ಜೊತೆ ಊಟ ಮಾಡಿ. 
  • ಈ ಖಾರವನ್ನು ಬಿಸಿ ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಊಟ ಮಾಡಬಹುದು. ಅಕ್ಕಿ ರೊಟ್ಟಿ, ರಾಗಿ ರೊಟ್ಟಿಗಳ ಜೊತೆಗೂ ಉಪ್ಪು ಸಾರಿನ ಖಾರ ಮತ್ತು ತುಪ್ಪವನ್ನು ನೆಂಚಬಹುದು.

  

 

 





ಬಗೆ ೨
ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
 
 ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ-೨ (ಮಧ್ಯಮ ಗಾತ್ರದವು)
ದಪ್ಪ ಮೆಣಸಿನಕಾಯಿ-೨ (ಮಧ್ಯಮ ಗಾತ್ರದವು)

ಈರುಳ್ಳಿ-೧ ಸಣ್ಣದು
ಬೆಳ್ಳುಳ್ಳಿ-೩ ಹಿಕಳು
ಶುಂಟಿ-ಅರ್ಧ ಇಂಚು
ಟೊಮ್ಯಾಟೊ-೧ ಮಧ್ಯಮ ಗಾತ್ರದ್ದು
ಹಸಿಮೆಣಸಿನ ಕಾಯಿ-೨ ಸಣ್ಣಗೆ ಕತ್ತರಿಸಿದ್ದು
ಜೀರಿಗೆ-೧/೨ ಟೀ ಸ್ಪೂನ್
ಜೀರಿಗೆ ಪುಡಿ-೧/೨ ಟೀ ಸ್ಪೂನ್
ಕಾಳು ಮೆಣಸಿನ ಪುಡಿ-೧/೨ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ-೧/೨ ಟೀ ಸ್ಪೂನ್
ಅರಿಶಿನ ಪುಡಿ-೧/೨ ಟೀ ಸ್ಪೂನ್
ಗರಮ್ ಮಸಾಲ-೧/೪ ಟೀ ಸ್ಪೂನ್
ಕಸೂರಿ ಮೇಥಿ-೧/೨ ಟೀ ಸ್ಪೂನ್ (ಪುಡಿ ಮಾಡಿದ್ದು)
ಎಣ್ಣೆ-೨ ಟೇಬಲ್ ಸ್ಪೂನ್
ಉಪ್ಪು-ರುಚಿಗೆ ತಕ್ಕಷ್ಟು
ನೀರು-೧ ಕಪ್
ನಿಂಬೆಹಣ್ಣಿನ ರಸ-೧ ಚಮಚ 
 
 
ವಿ.ಸೂ-ಹೆಚ್ಚು ಖಾರ ಇಷ್ಟ ಪಡುವವರು ಇನ್ನಷ್ಟು ಕೆಂಪು ಮೆಣಸಿನ ಕಾಯಿಯನ್ನು ಬಳಸಬಹುದು.
 

 

ಬಗೆ ೨
ಉತ್ತರ ಭಾರತೀಯ ಖಾದ್ಯ

ಆಲೂ ಮತ್ತು ಶಿಮ್ಲಾ ಮಿರ್ಚ್ (ದಪ್ಪ ಮೆಣಸಿನಕಾಯಿ) ಪಲ್ಯ

ವಿಧಾನ:
  • ಆಲೂಗಡ್ಡೆ, ದಪ್ಪ ಮೆಣಸಿನ ಕಾಯನ್ನು ಕ್ಯೂಬ್ ಗಳಾಗಿ ಕತ್ತರಿಸಿಟ್ಟುಕೊಳ್ಳಿ. ಈರುಳ್ಳಿ, ಟೊಮ್ಯಾಟೊ, ಹಸಿಮೆಣಸಿನಕಾಯಿ ಅನ್ನು ಪ್ರತ್ಯೇಕವಾಗಿ ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಶುಂಟಿ-ಬೆಳ್ಳುಳ್ಳಿಯನ್ನು ಜಜ್ಜಿಟ್ಟುಕೊಳ್ಳಿ.
  • ಅಗಲ ಬಾಯಿಯ ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ, ಜೀರಿಗೆಯನ್ನು ಹಾಕಿ. ಅದು ಸಿಡಿದ ಮೇಲೆ ಕತ್ತರಿಸಿದ ಈರುಳ್ಳಿ ಹಾಕಿ ಅದು ಮೃದು ಆಗುವವರೆಗೂ ಹುರಿಯಿರಿ.
  • ಪಾತ್ರೆಗೆ ಶುಂಟಿ-ಬೆಳ್ಳುಳ್ಳು-ಹಸಿಮೆಣಸಿನಕಾಯಿಯನ್ನು ಹಾಕಿ. ಚನ್ನಾಗಿ ಫ್ರೈ ಮಾಡಿ.
  • ಅದಕ್ಕೆ ಉಪ್ಪನ್ನು ಬಿಟ್ಟು ಬೇರೆ ಎಲ್ಲಾ ಪುಡಿಗಳನ್ನೂ ಸೇರಿಸಿ ಮತ್ತಷ್ಟು ಹುರಿಯಿರಿ.
  • ನಂತರ ಅದಕ್ಕೆ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಮತ್ತೆ ಹುರಿಯಿರಿ.
  • ಈಗ ಆಲೂಗಡ್ಡೆಯನ್ನು ಹಾಕಿ, ಮಸಾಲೆಯೊಂದಿಗೆ ಕಲೆಸಿ, ಎರಡು ನಿಮಿಷ ಫ್ರೈ ಮಾಡಿ ೧ ಕಪ್ ನೀರು ಹಾಕಿ ಪಾತ್ರೆಯನ್ನು ಮುಚ್ಚಿ ೬-೭ ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. ತಳ ಹಿಡಿಯದಂತೆ ಎಚ್ಚರ ವಹಿಸಿ.
  • ಆಲೂ ಸ್ವಲ್ಪ ಬೆಂದ ಮೇಲೆ ದಪ್ಪ ಮೆಣಸಿನಕಾಯಿಯನ್ನು ಹಾಕಿ ಮತ್ತೆ ಎಲ್ಲವನ್ನೂ ಬೆರೆಸಿ, ಪಾತ್ರೆಯನ್ನು ಮುಚ್ಚಿ ೫ ನಿಮಿಷ ಬೇಯಲು ಬಿಡಿ.
  • ನಂತರ ಉಪ್ಪು ಸೇರಿಸಿ ೩-೪ ನಿಮಿಷ ಬೇಯಿಸಿ. ಒಲೆ ಆರಿಸಿ. (ತರಕಾರಿಗಳು ಅತಿಯಾಗಿಯೂ ಬೇಯದಂತೆ ನೋಡಿಕೊಳ್ಳಿ)
  • ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಚಿಮುಕಿಸಿ.
    ಇದನ್ನು ರೋಟಿ, ಫುಲ್ಕಾ ಅಥವಾ ಚಪಾತಿಯ ಜೊತೆ ಬಿಸಿಬಿಸಿಯಾಗಿ ಸೇವಿಸಿ.

 





 
 
 
 
 
Copyright © 2011 Neemgrove Media
All Rights Reserved