ಸಂಚಿಕೆ ೧೫ ಏಪ್ರಿಲ್ ೪ ೨೦೧೧ ಶ್ರೀ ಖರನಾಮ ಸಂವತ್ಸರದ ಮೊದಲ ದಿನ
ಆಯಾಮದ ಓದುಗರಿಗೆ ಖರನಾಮ ಸಂವತ್ಸರದ ಶುಭ ಹಾರೈಕೆಗಳು
ಹೊಸ ಯುಗದ ಆದಿಗೆ
ನಮ್ಮ ಹಾರೈಕೆ...
ಸಮೃದ್ಧ ಸ್ವಸ್ಥ ಇಳೆ
ಪ್ರವಾಹವಾಗದ ಮಳೆ
ಹುಳ ಹಿಡಿದು ಜೊಳ್ಳಾಗದೆ
ಒಡಲು ತುಂಬುವ ಬೆಳೆ
ಮುಖವೇ ಸಂತೃಪ್ತಿಯ ಕಳೆ
ಮನೆಯಲ್ಲಿ ಮರಿಗಳ
ಕಿಲಕಿಲ ಕೇಕೆಯ ಕಹಳೆ
ಮಂದಿ ತಲೆಒರಗಿಸುವ
ಮನೆಯೆಂಬ ಪ್ರತಿ ಸೂರಲ್ಲೂ
ಬೆಚ್ಚನೆಯ ಬೆಳಕು
ಬೆಲ್ಲದಚ್ಚಿನಂತ ಪ್ರೀತಿ
ಬೇಕಾಗುವಷ್ಟು ಸೀ ಉಣಿಸು
ಹಾರೈಸುವುದು, ಹರಸುವುದಕ್ಕೆ ಪಟ್ಟಿ ಬೇಕಾದಷ್ಟಿದೆ. ಇಷ್ಟು ಸದಾ ನಮ್ಮ ನಿಮ್ಮ ಜೊತೆಯಿರಲಿ. ಮತ್ತೆಲ್ಲವೂ ಬಾಲಂಗೋಚಿ.
ಮೊಟ್ಟಮೊದಲ ಬಾರಿಗೆ!!!! ಅಂತರಾಷ್ಟ್ರೀಯ ಕನ್ನಡ ಓದುಗರಿಗೆ ಆಯಾಮದ ಹೊಸ ಕೊಡುಗೆ!
ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.