ನಾಲ್ಕು ಸೂರ್ಯರಶ್ಮಿ ನೂರು ಗೊಂಚಲು!
ನಿಂತಲ್ಲೇ ಕುಸಿದು ತಡವುವಷ್ಟು ಮುದ್ದು.
ನೇರಳೆ ಬ್ಲೂಬೆರಿಯಂತೆ ಆರಿಸಿ
ತಿಂದು ಬಿಡುವ ಆಸೆ.
ಬಿಡಬೇಕಲ್ಲಾ ಅವನ ಬಜಾರಿ ಗೆಳತಿಯರು
ಅರಳುವ ಮುನ್ನವೇ ಅವನ ಹೀರಿಬಿಡುವ ತವಕ.
ಇದೇ ಮುದ್ದಿಗೇ ಬಿದ್ದಿದ್ದ ಅನ್ನಿಸುತ್ತೆ
ಅವತ್ತು ಆ ಅಪೋಲೋ...
ಈ ನೀಲ ಹುಡುಗನ ನಿಲುವು ನಿಜವಂತಿಕೆಗೆ
ದೇವತಾನೆಂಬುದನ್ನೂ ಮರೆತು ಆಕರ್ಷಿತನಾಗಿದ್ದ.
ಅಂತ್ಯ ಬರಿಸಿದ್ದ, ಅತ್ತಿದ್ದ, ಮತ್ತೆ ಬಾ ಎಂದಿದ್ದ.
ನೆತ್ತರಲ್ಲೂ ಅರಳಿದ ಪುಟ್ಟನಿಗೆ ಪ್ರೀತಿ ಸುರಿದಿದ್ದ.
ಅವನಿಗಾಗೇ ಬರುತಾನೇನೋ
ಈ ಹಯಸಿಂತ!
ಮೊಟ್ಟಮೊದಲ ಬಾರಿಗೆ!!!! ಅಂತರಾಷ್ಟ್ರೀಯ ಕನ್ನಡ ಓದುಗರಿಗೆ ಆಯಾಮದ ಹೊಸ ಕೊಡುಗೆ!
ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.