ಅಂಗಳ      ಧರೆ ಹತ್ತಿ ಉರಿದೊಡೆ
Print this pageAdd to Favorite
 
 
 
  

ಆರ್ಕ್ಟಿಕ್ ನಲ್ಲಿ ದೈತ್ಯ ಗ್ಲೇಶಿಯರ್ಗಳ ಧಿಡೀರ್ ಕರಗುವಿಕೆ ಮತ್ತು ಕಾಣೆಯಾಗಿರುವ ಓಜೋನ್ ಪದರ

 
 
ಪ್ರತೀ ವರ್ಷವೂ ವಾತಾವರಣದ ಉಷ್ಣತೆ ಹೆಚ್ಚುತ್ತಿದೆ, ಇದು ನಿಮಗೆ ತಿಳಿದೇ ಇದೆ. ಈ ಬಾರಿ ಹಿಂದಿನ ವರ್ಷಕ್ಕಿಂತ ಹೆಚ್ಚು. ಆರ್ಕ್ಟಿಕ್ ನಲ್ಲೂ ಇದೇ ಕಥೆ. ಈ ಬಾರಿಯ ದಾಖಲೆಯ ಉಷಾಂಶಕ್ಕೆ ಆರ್ಕ್ಟಿಕ್ ಸಾಗರದಲ್ಲಿನ ನೀರ್ಗಲ್ಲು (ಗ್ಲೇಶಿಯರ್ಗಳು) ಅತ್ಯಂತ ಕ್ಷಿಪ್ರವಾಗಿ ಕರಗಿ ಮಾಯವಾಗಿವೆ ಎಂದು ಕೆಲದಿನಗಳ ಹಿಂದೆ ನಾಸಾ ವರದಿ ಮಾಡಿದೆ.
ಆರ್ಕ್ಟಿಕ್ ಸಮುದ್ರ ಈಗಾಗಲೇ ವಿಜ್ನಾನಿಗಳು ಊಹಿಸಿದ್ದಕ್ಕಿಂತ ವೇಗವಾಗಿ, ಅಂದರೆ ೪೦ ರಿಂದ ೭೦ ವರ್ಷಗಳ ಅಂದಾಜನ್ನೂ ದಾಟಿ ಕರಗತೊಡಗಿದೆ. ಆರ್ಕ್ಟಿಕ್ ನಲ್ಲಿನ ಚಳಿಗಾಲ ಈಗ ಒಂದು ತಿಂಗಳು ಕಡಿಮೆಯಾಗಿದೆ. ಉದಾಹರಣೆಗೆ: ೩೦ ವರ್ಷಗಳ ಹಿಂದೆ ಆರ್ಕ್ಟಿಕ್ ಪ್ರದೇಶದಲ್ಲಿ ೮ ತಿಂಗಳ ಚಳಿಗಾಲ ಇರುತ್ತಿತ್ತೆನ್ನಿ. ೩೦ ವರ್ಷಗಳಲ್ಲಿ ಅದು ೭ ತಿಂಗಳಿಗೆ ಇಳಿದಿದೆ. ೨೦ನೇ ಶತಮಾನದುದ್ದಕ್ಕೂ ಇದ್ದ ಭೂಮಿಯ ಸಮುದ್ರಗಳ ಮಟ್ಟ ಈಗ ಧಿಡೀರನೆ ೩೦ ಪಟ್ಟು ಹೆಚ್ಚಾಗಿದೆ. ಕಳೆದ ೨೪ ವರ್ಷಗಳಲ್ಲಿ ಸಮುದ್ರ ಮಟ್ಟ ೬ ರಿಂದ ೧೦ ಅಡಿ ಏರಿರುವುದಕ್ಕೆ ಪಷ್ಚಿಮ ಅಂಟಾರ್ಟಿಕ್ ಬೃಹತ್ ಶೀತಕಲ್ಲಿನ ಕುಸಿಯುವಿಕೆ ಕಾರಣವೆನ್ನಲಾಗಿದೆ.

ಸಮುದ್ರದ ಮಟ್ಟ ಸ್ವಲ್ಪ ಹೆಚ್ಚಾದರೂ ಮಾಲ್ಡೀವ್ಸ್ ಎಂಬ ಪುಟ್ಟ ದ್ವೀಪದ ಕಥೆ ಏನಾಗಬಹುದೆಂದು ನೆನಪಿಸಿಕೊಳ್ಳಿ...
ಇದಲ್ಲದೆ ಆರ್ಕ್ಟಿಕ್ ಪ್ರದೇಶದಲ್ಲಿ ಕಂಡುಬರುವ ಓಜೋನ್ ಪದರ ಕೂಡಾ ಆಶ್ಚರ್ಯಕರವಾಗಿ ಕರಗಿದೆ ಎನ್ನಲಾಗಿದೆ. ೧೯೮೦ರಲ್ಲಿ ವಿಜ್ನಾನಿಗಳು ಅಂಟಾರ್ಟಿಕಾ ಪ್ರದೇಶದಲ್ಲಿ ಓಜೋನ್ ಪದರದಲ್ಲಿ ತೂತುಗಳಾಗಿರುವುದನ್ನು ವಿಶ್ವ ಸಮುದಾಯಕ್ಕೆ ತಿಳಿಸಿದ್ದರು. ಪರಿಸರ ಮಾಲಿನ್ಯವೇ ಇದಕ್ಕೆ ಬಹು ಮುಖ್ಯ ಕಾರಣ ಎಂದು ಗುರುತಿಸಿದ್ದರು. ನಮ್ಮ ಪರಿಸರವನ್ನು ಜವಾಬ್ದಾರಿಯಿಂದ ಕಾಪಾಡಿಕೊಳ್ಳಬೇಕಾದ ಅರಿವು ಕೂಡಾ ಆಗ ಜಾಗೃತವಾಗಿತ್ತು. ಅಲ್ಲಿಂದ ಮುಂದಿನ ದಶಕಗಳಲ್ಲಿ ಪರಿಸರ ಸಂರಕ್ಷಣೆಯ ಪರಿಕಲ್ಪನೆ ಹೋರಾಟದ್ದೇ ತಿರುವು ಪಡೆದಿತ್ತು. ಈಗ ವಿಜ್ನಾನಿಗಳು ಮತ್ತೆ ವಿಶ್ವ ಸಮುದಾಯಕ್ಕೆ ಈ ಎಚ್ಚರಿಕೆಯ ಸುದ್ದಿ ಕೊಟ್ಟಿದ್ದಾರೆ.
ಇಡೀ ಆರ್ಕ್ಟಿಕ್ ಉತ್ತರ ಭೂಭಾಗ ಬರಲಿರುವ ಬೇಸಿಗೆಗಳಲ್ಲಿ ಅಪಾಯಕಾರಿ ಮಟ್ಟದ ಅಲ್ಟ್ರಾವಯೋಲೆಟ್ ಕಿರಣಗಳಿಗೆ ತೆರೆದುಕೊಳ್ಳಲಿದೆ ಎಂಬ ಅಭಿಪ್ರಾಯ ವಿಜ್ನಾನಿಗಳದ್ದು. ಈ ಬೆಳವಣಿಗೆ ಮುಂದೆ ಆಗಲಿರುವ ಅನೇಕ ಪ್ರಕೃತಿ ವಿಕೋಪಗಳಿಗೆ ಕಾರಣವಾಗಲಿದೆ ಎನ್ನುತ್ತಾರೆ ಜಿನೆವಾದ ವಾತಾವರಣ ವಿಜ್ನಾನಿ ಗ್ರೆಇರ್ ಬ್ರಾಥೆನ್.
 
ಭೂಮಿಯ ಮೇಲ್ಮೈಯಲ್ಲಿರುವ ಓಜೋನ್ ಪದರ ದಟ್ಟವಾದ ಓಜೋನ್ ಅನಿಲದಿಂದಾಗಿದೆ. ಈ ಅನಿಲ ಸೂರ್ಯನಿಂದ ಭೂಮಿಯೆಡೆಗೆ ಬರುವ ಎಲ್ಲಾ ಅಪಾಯಕಾರೀ ಅಲ್ಟ್ರಾವಯಲೆಟ್ ಬೆಳಕನ್ನೂ ಹೀರಿಕೊಂಡು ಭೂಮಿಯ ಮೇಲಿನ ಜೀವರಾಶಿಯನ್ನು ರಕ್ಷಿಸುತ್ತದೆ. ಭೂಮಿಯ ಮೇಲೆ ಅಲ್ಟ್ರಾವಯಲೆಟ್ ಕಿರಣಗಳು ನೇರವಾಗಿ ಹಾದಾಗ ಮನುಷ್ಯರಿಗೆ ಚರ್ಮದ ಕ್ಯಾನ್ಸರ್, ಕಣ್ಣಿನ ಕ್ಯಾಟರಾಕ್ಟ್ ಪೊರೆ ಸೇರಿದಂತೆ ಹಲವಾರು ಕಾಯಿಲೆಗಳನ್ನು ತರುತ್ತವೆ. ಈಗ ಅಂಟಾರ್ಟಿಕಾದ ಓಜೋನ್ ತೂತು ಉತ್ತರ ಅಮೆರಿಕಾ ಭೂಭಾಗಕ್ಕಿಂತ ದೊಡ್ಡದಿದೆಯೆನ್ನಲಾಗಿದೆ. ಅಲ್ಲದೆ ೨೦೧೯ ರ ವೇಲೆಗೆ ಮತ್ತೊಂದು ಬೃಹತ್ ತೂತು ಕಾಣಿಸಿಕೊಳ್ಳುವ ಸಾಧ್ಯತೆ ಎಂದು ವಿಜ್ನಾನಿಗಳ ಅಭಿಮತ.
 

 

ನಮ್ಮ ತಟ್ಟೆಯಲ್ಲಿರುವ ಕುಲಾಂತರಿ ಊಟ

 
ಅಮೆರಿಕಾದಲ್ಲಿ ಬೆಳೆಯುವ ಈ ಹಣ್ಣು-ತರಕಾರಿ, ಧಾನ್ಯಗಳಲ್ಲಿ ಒಟ್ಟು ಎಷ್ಟು ಕುಲಾಂತರಿ ಅಥವಾ ಜೆನೆಟಿಕಲಿ ಮಾಡಿಫೈಡ್ ಇರಬಹುದು ಊಹಿಸಬಲ್ಲಿರಾ? ೨೦೧೦ರಲ್ಲಿ ಇಲ್ಲಿನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ ಡಿ ಎ) ಲೆಕ್ಕ ಕೊಟ್ಟಿದ್ದು ಹೀಗಿದೆ. ಎಫ್ ಡಿ ಎ ಈಗಾಗಲೇ ಜನರ ನಂಬಿಕೆ ಕಳೆದುಕೊಂಡಿದೆ.
ಆದರೂ ಅದು ಕೊಟ್ಟಿರುವ ಲೆಕ್ಕಾಚಾರವನ್ನು ನಿಮ್ಮ ಮುಂದಿಡುತ್ತಿದ್ದೇವೆ.

 
ಸೋಯಾ-೯೧%
ಜೋಳ-೮೫%
ಸಕ್ಕರೆ ಬೀಟ್-೯೦%
ಕನೋಲಾ-೮೮%
ಹತ್ತಿ-೮೮%
ಹವಾಯಿಯನ್ ಪಪಾಯಾ-೬೦%
ಜ಼ುಕಿನಿ-೫೦%
ಹಳದಿ ಸ್ಕ್ವಾಶ್-೫೦%
 
 
ಮಾರುಕಟ್ಟೆಯಲ್ಲಿರುವ ನೂರಾರು ಬಗೆಯ ಹಣ್ಣು ತರಕಾರಿಗಳಲ್ಲಿ ಇವು ಬೆರಳೆಣಿಕೆಯಷ್ಟು ಮಾತ್ರ. ಟೊಮ್ಯಾಟೋ, ಅಲೂಗಡ್ಡೆ, ಅಕ್ಕಿ, ಬಾರ್ಲಿ, ಗೋಧಿ, ಹುರುಳಿಕಾಯಿ, ಬದನೆ, ಹಸಿಮೆಣಸು, ದಪ್ಪಮೆಣಸಿನಕಾಯಿ, ಬ್ರಾಕ್ಲಿ, ಲೆಟ್ಯುಸ್, ಟರ್ನಿಪ್, ಕ್ಯಾರೆಟ್, ಶುಂಠಿ, ಬೆಳ್ಳುಳ್ಳಿ ಎಲ್ಲವೂ ಅಮೆರಿಕಾದಲ್ಲಿ ಕುಲಾಂತರಿಗಳೇ. ಆದರೆ ಇವುಗಲ ಲೆಕ್ಕವನ್ನು ಎಫ್ ಡಿ ಏ ಇನ್ನೂ ಕೊಟ್ಟಿಲ್ಲ. ಗಾಬರಿಯಾಗುವ ವಿಷಯವೆಂದರೆ, ಈಗ ಅಮೆರಿಕಾ ನಂತರ ಕುಲಾಂತರಿ ಬೀಜಗಳನ್ನು ತಯಾರಿಸಿ ಮಾರುವ ಮೋನ್ಸಾಂಟೋ ನಂತಹ ಕಂಪನಿಗಳು ಈಗಾಗಲೇ ಒಂದು ಕಾಲಿಟ್ಟಿರುವುದು ಬ್ರೆಜ಼ಿಲ್ ಮತ್ತು ಭಾರತದಲ್ಲಿ!
 

 

 
 
 
 
 
Copyright © 2011 Neemgrove Media
All Rights Reserved