ಆಯಾಮದ ಓದುಗ ಮಿತ್ರರಿಗೆ ಯುಗಾದಿ ಮತ್ತು ನಂದನ ಸಂವತ್ಸರದ ಹಾರ್ದಿಕ ಶುಭಾಶಯಗಳು
ಹೀರಬೇಕು ಅಕ್ಕಾ
ಹಾರಬೇಕು ಪಕ್ಕಾ
ಇವಳು ವಧು ಅವಳೂ ಮಧು
ಮೀಟಲಿದಿಗೊ ಕೊಕ್ಕಾ
ಕೈಕಾಲತುಂಬ ಧೂಳ ಹೆಕ್ಕಿ
ನನ್ನ ಕಾದು ಗರ್ಭ ತೆರೆದ
ಹೂಮಣಿಗಳ ಒಡಲಿಗಷ್ಟು
ಬೆರೆಸಲಿದೆ ಬಣ್ಣಾ
ನನ ಬದುಕ ಕೇಳೋ ಅಣ್ಣಾ
ಊರು ಬೇರು - ತುಣುಕು ೧೩
ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.