ಬೇಕಾಗುವ ಪದಾರ್ಥಗಳು:
  • ಸಿಹಿ ಕುಂಬಳಕಾಯಿ: ಅರ್ಧ ಕೆಜಿಯಷ್ಟು (ತೊಳೆದು ಸಿಪ್ಪೆತೆಗೆದು ಹೆಚ್ಚಿಟ್ಟದ್ದು)
  • ತೆಂಗಿನಕಾಯಿ: ಒಂದು ಮೀಡಿಯಂ ಕಪ್ (ತುರಿದದ್ದು)
  • ಕೆಂಪುಮೆಣಸಿನಕಾಯಿ: ೫-೬ (ಖಾರ ಹೆಚ್ಚು ಬೇಕಾದಲ್ಲಿ ಹೆಚ್ಚು)
  • ಹುರಿಗಡಲೆ: ೨ ಟೀ ಸ್ಪೂನ್
  • ಎಳ್ಳು: ೨ ಟೀ ಸ್ಪೂನ್
  • ಮೆಂತ್ಯ: ೧/೪ ಟೀ ಚಮಚ
  • ಜೀರಿಗೆ: ೧/೨ ಟೀ ಚಮಚ
  • ಹುಣಸೆ ಹುಳಿ: ೨ ಟೀ ಚಮಚ
  • ಅರಿಶಿನ: ಕಾಲು ಟೀ ಚಮಚ
  • ಇಂಗು: ಒಂದು ಚಿಟಿಕಿ
  • ಕೊತ್ತಂಬರಿ ಸೊಪ್ಪು: ೧ ಟೀ ಚಮಚ (ಪರಿಮಳಕ್ಕೆ)
  • ಬೆಲ್ಲ: ಒಂದು ಸಣ್ಣ ನಿಂಬೆಹಣ್ಣಿನ ಗಾತ್ರ  (ತುರಿದದ್ದು / ಪುಡಿಮಾಡಿದ್ದು)
  • ಸಾಸಿವೆ: ಕಾಲು ಟೀ ಚಮಚ
  • ಎಣ್ಣೆ: ೨ ಟೀ ಚಮಚ
  • ಉಪ್ಪು ರುಚಿಗೆ ತಕ್ಕಷ್ಟು

 

 

 

 
 

 

ಬಗೆ-೧
ಸಿಹಿಕುಂಬಳದ ಗೊಜ್ಜು
 
 
 
ವಿಧಾನ:
  • ಕೆಂಪುಮೆಣಸಿನಕಾಯಿ, ಎಳ್ಳು, ಜೀರಿಗೆ, ಹುರಿಗಡಲೆ, ಮೆಂತ್ಯವನ್ನು ಬಾಣಲಿಯೊಂದರಲ್ಲಿ ಪ್ರತ್ಯೇಕವಾಗಿ ಬೆಚ್ಚಗೆ ಹುರಿದು ಇಟ್ಟುಕೊಳ್ಳಿ.
  • ಅಗಲ ಬಾಯಿಯ ಗಟ್ಟಿ ತಳದ ಪಾತ್ರೆಯೊಂದರಲ್ಲಿ ಎರಡು ಟೀ ಚಮಚ ಎಣ್ಣೆ ಕಾಯಲು ಬಿಡಿ.
  • ಎಣ್ಣೆ ಕಾದಾಗ ಸಾಸಿವೆ ಒಗ್ಗರಣೆ ಸಿಡಿಸಿ, ಕರಿಬೇವಿನ ಸೊಪ್ಪು, ಇಂಗು ಸೇರಿಸಿ.
  • ಈ ಒಗ್ಗರಣೆಗೆ ಕುಂಬಳಕಾಯಿಯ ಚೂರುಗಳನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ.
  • ಇದಕ್ಕೆ ಕಾಲು ಕಪ್ ನೀರು ಹಾಕಿ, ಪಾತ್ರೆಯನ್ನು ಮುಚ್ಚಿ, ಕುಂಬಳಕಾಯಿಯ ಚೂರುಗಳು ಸ್ವಲ್ಪ ಮೆತ್ತಗೆ ಬೇಯಲು ಬಿಡಿ.
  • ಅದು ಬೇಯುವಾಗ ಹುರಿದಿಟ್ಟ ಕೆಂಪುಮೆಣಸಿನಕಾಯಿ, ಎಳ್ಳು, ಜೀರಿಗೆ, ಹುರಿಗಡಲೆ, ಮೆಂತ್ಯ, ಅರಿಶಿನ, ತೆಂಗಿನಕಾಯಿ, ಹುಣಸೆಹುಳಿ ಇದೆಲ್ಲವನ್ನೂ ಸ್ವಲ್ಪ ನೀರು ಹಾಕಿಕೊಂಡು ಸಣ್ಣಗೆ ರುಬ್ಬಿಟ್ಟುಕೊಳ್ಳಿ.
  • ಸ್ವಲ್ಪ ಬೆಂದ ಕುಂಬಳಕಾಯಿಗೆ ಈ ಮಸಾಲೆ ಸೇರಿಸಿ ಚನ್ನಾಗಿ ಬೆರೆಸಿ. ಈ ಗೊಜ್ಜಿಗೆ ಹೆಚ್ಚು ನೀರು ಹಾಕಬಾರದು.
  • ಮಸಾಲೆಯ ಹಸಿ ವಾಸನೆ ಹೋಗುವವರೆಗೂ ಬೇಯಿಸಿ ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ.
  • ಇನ್ನೂ ೨-೩ ನಿಮಿಷ ಬೇಯಿಸಿ ನಂತರ ಬೆಲ್ಲವನ್ನು ಸೇರಿಸಿ. ಸ್ಟವ್ ಆಫ್ ಮಾಡಿ. ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಒಂದು ನಿಮಿಷ ಪಾತ್ರೆಯನ್ನು ಮುಚ್ಚಿಡಿ.
  • ಬಿಸಿಯಾಗಿದ್ದಾಗಲೇ ರೊಟ್ಟಿ, ಚಪಾತಿ ಅಥವಾ ಅನ್ನದೊಟ್ಟಿಗೆ ಆಸ್ವಾದಿಸಿ.

 





ಬಗೆ ೨
ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
 
 ಬೇಕಾಗುವ ಪದಾರ್ಥಗಳು:
  • ಅಕ್ಕಿ ಹಿಟ್ಟು: ೨ ಕಪ್
  • ಅನ್ನ: ೧ ಕಪ್
  • ನೀರು: ಕಲೆಸಲು
  • ಉಪ್ಪು: ರುಚಿಗೆ ಸ್ವಲ್ಪ

 

 

 

 

 
 
 

 

ಕೊಡಗಿನ ಶೈಲಿಯ ಅಕ್ಕಿರೊಟ್ಟಿ
 
 
 
ಶ್ರೀಮತಿ ಶ್ವೇತಾ ಧರಣೇಶ್

ವಿಧಾನ:
 
  • ಅನ್ನವನ್ನು ಬಿಸಿಮಾಡಿಕೊಳ್ಳಿ. ಅದು ಬಿಸಿಯಿದ್ದಾಗಲೇ ಸೌಟನ್ನು ಬಳಸಿ ಅದನ್ನು ಹಿಟ್ಟಿನಂತೆ ಕಲೆಸಿಕೊಳ್ಳಿ.
  • ಇದಕ್ಕೆ ಅಕ್ಕಿ ಹಿಟ್ಟು, ಉಪ್ಪು ಸೇರಿಸಿ ಚನ್ನಾಗಿ ಬೆರೆಸಿ.
  • ಸ್ವಲ್ಪ ಸ್ವಲ್ಪವೇ ನೀರು ಬೆರೆಸುತ್ತಾ ಚನ್ನಾಗಿ ನಾದಿ, ಚಪಾತಿ ಹಿಟ್ಟಿನಂತೆ ಕಲೆಸಿಕೊಳ್ಳಿ.

 
  • ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಟ್ಟುಕೊಳ್ಳಿ.
  • ಕಲೆಸಿಟ್ಟ ಹಿಟ್ಟಿನಿಂದ ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸವರಿ ಪ್ಲಾಸ್ಟಿಕ್ ಪೇಪರಿನ ಮೇಲಿಡಿ.
  • ಹಸ್ತವನ್ನುಪಯೋಗಿಸಿ ಗುಂಡಾಗೆ ರೊಟ್ಟಿ ತಟ್ಟಿ
  • ತವೆಯನ್ನು ಮೀಡಿಯಂ ಹೀಟ್ ಮಾಡಿ ರೊಟ್ಟಿಯನ್ನು ಹಾಕಿ. ೨-೩ ನಿಮಿಷ ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ನಂತರ ರೊಟ್ಟಿಯನ್ನು ತಿರುಗಿಸಿ ಉರಿಯನ್ನು ಹೆಚ್ಚು ಮಾಡಿ.
  • ರೊಟ್ಟಿಯನ್ನು ಈ ಹಂತದಲ್ಲಿ ಗ್ರಿಲ್ ಅಥವಾ ನೇರವಾಗಿ ಜ್ವಾಲೆಯ ಮೇಲಿಡಿ. ರೊಟ್ಟಿ ಉಬ್ಬುತ್ತದೆ. (ಉಬ್ಬಲು ಹಿಟ್ಟನ್ನು ಹದವಾಗಿ ನಾದಿ)




 
 
 
 
 
Copyright © 2011 Neemgrove Media
All Rights Reserved