೧) ಸಾಮಾಜಿಕ ನ್ಯಾಯದ ಅನುಷ್ಠಾನ ಮತ್ತು ಸ್ವಾತಂತ್ರ್ಯದ ಹಕ್ಕು.
೨) ಸ್ವಾತಂತ್ರ್ಯ: ಅಂಚಿನ ಸಮುದಾಯಗಳ ಕನ್ನಡಿಗಂಟು
ಒಬ್ಬ ವ್ಯಕ್ತಿ ಅಥವ ಒಂದು ಸಮಾಜಕ್ಕೆ ಬದುಕುವ ಸಹ್ಯ ಅವಕಾಶವನ್ನು ಒದಗಿಸಿಕೊಡುವುದು ಸ್ವಾತಂತ್ರ್ಯ-ದ ಕರ್ತವ್ಯ.
ಇಂಥ ಸ್ವಾತಂತ್ರ್ಯವನ್ನು ಸಮಾನವಾಗಿ ಹಂಚಿಕೊಳ್ಳುವ ಕ್ರಮವೆ ಸಾಮಾಜಿಕ ನ್ಯಾಯ.
ಒಬ್ಬ ಜಾರ್ಜ್ ಬುಶ್ ಗೆ ಇರುವ ಸ್ವಾತಂತ್ರ್ಯ ಒಬ್ಬ ಬುಡುಬುಡಿಕೆಯವನಿಗೂ ಸಿಕ್ಕರೆ ಅದೇ ಸಾಮಾಜಿಕ ನ್ಯಾಯ.
೧) ಒಬ್ಬ ವ್ಯಕ್ತಿ ಅಥವಾ ಸಮಾಜಕ್ಕೆ ತಾನು ಉತ್ಪಾದಿಸಿದ ಉತ್ಪಾದನೆಯನ್ನು ಅನುಭವಿಸಲು ಅವಕಾಶ ಮಾಡಿಕೊಡುವುದು ಸ್ವಾತಂತ್ರ್ಯದ ಮೊದಲ ಕರ್ತವ್ಯ.
೨) ಒಬ್ಬ ವ್ಯಕ್ತಿ ಅಥವಾ ಸಮಾಜಕ್ಕೆ ಉತ್ಪಾದನೆಯ ಕೊರತೆ/ಶೋಷಣೆ ಆಗಿದೆ ಎಂದಾಗ ಅದನ್ನು ತುಂಬಿಕೊಡುವುದು, ಸ್ವಾತಂತ್ರ್ಯದ ಎರಡನೆಯ ಕರ್ತವ್ಯ.
೩) ಒಬ್ಬ ವ್ಯಕ್ತಿ ಅಥವಾ ಸಮಾಜಕ್ಕೆ ಉತ್ಪಾದನೆಯ ಅವಕಾಶವೇ ಇಲ್ಲ ಎಂದಾಗ ಅದನ್ನು ಒದಗಿಸಿ ಕೊಡುವುದು ಸ್ವಾತಂತ್ರ್ಯದ ಮೂರನೆಯ ಕರ್ತವ್ಯ.
೪) ಸಮಕಾಲೀನ ಸಂದರ್ಭದಲ್ಲಿ ಸಹ್ಯ ಜೀವನ ನಡೆಸಲು ಬೇಕಾದ ಸ್ಥಿತಿ ಮತ್ತು ಜೀವನ ಗತಿಯನ್ನು ಒದಗಿಸಿಕೊಡುವುದು ಸ್ವಾತಂತ್ರದ ನಾಲ್ಕನೆಯ ಕರ್ತವ್ಯ.
ಹೀಗೆ ನಾವು ಸ್ವಾತಂತ್ರ್ಯಕ್ಕೆ ಕರ್ತವ್ಯದ ಪಾಠ ಕಲಿಸಬೇಕಾಗುತ್ತದೆ. ಇಂಥ ಸ್ವಾತಂತ್ರ್ಯದ ಕರ್ತವ್ಯ ಪಾಲನೆಗಾಗಿ ನಾವು ಹಕ್ಕನ್ನು ಮಂಡಿಸಬೇಕಾಗುತ್ತದೆ. ಇಂಥ ಹಕ್ಕನ್ನು ಮಂಡಿಸುವ ವ್ಯಕ್ತಿ ಮತ್ತು ಸಮಾಜಕ್ಕೆ ತನ್ನ ಕರ್ತವ್ಯದ ಅರಿವು ಮತ್ತು ಜವಾಬ್ದಾರಿ ಇರಬೇಕಾಗುತ್ತದೆ.
ಈ ಅರ್ಥದಲ್ಲಿ ಸಾಮಾಜಿಕ ನ್ಯಾಯ ಇರುವವನು ಸ್ವತಂತ್ರ್ಯ. ಇಲ್ಲದವನು ಅತಂತ್ರ. ಒಬ್ಬನನ್ನು ಅಥವಾ ಒಂದು ಸಮಾಜವನ್ನು ಸಮರ್ಥವಾಗಿಸುವುದು ಸ್ವಾತಂತ್ರ್ಯ, ಅಸಮರ್ಥನನ್ನಾಗಿಸುವುದು ಗುಲಾಮತನ (ಅಸ್ವಾತಂತ್ರ್ಯ). ವ್ಯಕ್ತಿ ಮಟ್ಟದ ಹಾಗೂ ಸಾಮಾಜಿಕ ನೆಲೆಯ ಸ್ವಾತಂತ್ರ್ಯ ಸಿಗದ ಯಾರೂ ತಮ್ಮ ಸಾಮಾಜಿಕ ನ್ಯಾಯದ ಹಕ್ಕನ್ನು ಮಂಡಿಸುವುದು ಸಾಧ್ಯವಾಗುವುದಿಲ್ಲ.
ಈ ಸ್ವಾತಂತ್ರ್ಯ ಎಲ್ಲೆಲ್ಲಿ ಹರಣವಾಗುತ್ತಿದೆ ಎಂಬುದನ್ನು ಗಮನಿಸಿ.
೧) ನಿರುದ್ಯೋಗಿಯಲ್ಲಿ ಸ್ವಾತಂತ್ರ್ಯವಿಲ್ಲ
೨) ಅನಕ್ಷರಸ್ಥನಲ್ಲಿ ಸ್ವಾತಂತ್ರ್ಯವಿಲ್ಲ
೩) ದುಡಿಯುವ ಸಾಧನಗಳಿಲ್ಲದವನಲ್ಲಿ ಸ್ವಾತಂತ್ರ್ಯವಿಲ್ಲ (ದಲಿತ, ಕೂಲಿ)
೪) ಬಂಧಿತನಲ್ಲಿ ಸ್ವಾತಂತ್ರ್ಯವಿಲ್ಲ (ಹೆಣ್ಣು, ಜೈಲುವಾಸಿ)
೫) ಅಭದ್ರತೆ ಇರುವವನಲ್ಲಿ ಸ್ವಾತಂತ್ರ್ಯವಿಲ್ಲ (ಅಂಚಿನಜನ, ಆತ್ಮಹತ್ಯೆಗೆ ನೂಕಲ್ಪಟ್ಟ ರೈತ)
೬) ಸೃಜನಶೀಲತೆ ಹತ್ತಿಕ್ಕಲ್ಪಟ್ಟವರಲ್ಲಿ ಸ್ವಾತಂತ್ರ್ಯವಿಲ್ಲ
೭) ಪರಕೀಯತೆಯಲ್ಲಿ ಸ್ವಾತಂತ್ರ್ಯವಿಲ್ಲ (ಸ್ವದೇಶಿ, ವಿದೇಶಿ= ಜಾಗತೀಕರಣ)
೮) ಉತ್ಪಾದನೆಯ ಅಪಹರಣಕ್ಕೆ ಒಳಗಾಗಿರುವವನಲ್ಲಿ ಸ್ವಾತಂತ್ರ್ಯವಿಲ್ಲ.
ಮೇಲಿನ ಸಂದರ್ಭಗಳಲ್ಲಿ ವ್ಯಕ್ತಿ ಅಥವ ಸಮಾಜದ ಮೂಲಭೂತ ಅವಶ್ಯಕತೆಗಳನ್ನು ನಿರಾಕರಿಸಲಾಗಿದೆ. ಇಂಥ ಕಡೆ ವೈಜ್ನಾನಿಕ, ಕಲಾತ್ಮಕ ಅಥವ ಮತ್ತಾವುದೇ ರೀತಿಯ ಸೃಜನಶೀಲತೆ ಬೆಳೆಯಲಾರದು. ಬಡತನವೆಂಬುದು ಇಂಥ ಸೃಜನಶೀಲತೆಯ ಹರಣದಿಂದ ಉಂಟಾಗುತ್ತವೆ. ಇದು ಅಭಿವೃದ್ಧಿಗೆ ದೊಡ್ಡ ತೊಡಕು. ಪ್ರತಿಯೊಬ್ಬ ವ್ಯಕ್ತಿಯನ್ನೂ ಅಭಿವೃದ್ಧಿಯಲ್ಲಿ ತೊಡಗಿಸುವುದೇ ಸ್ವಾತಂತ್ರ್ಯದ ಸಮರ್ಥನೆ. ಕೆಲವರು ಮಾತ್ರ ಅಭಿವೃದ್ಧಿ ಹೊಂದಿ ಹಲವರು ಬಡತನದಲ್ಲಿದ್ದರೆ ಅಂತ ಕಡೆ ಸ್ವಾತಂತ್ರ್ಯ ಅಪಹರಣಗೊಂಡಿದೆ ಎಂದೇ ತಿಳಿಯಬೇಕು.
ಸ್ವಾತಂತ್ರ್ಯವನ್ನು ಹರಣ ಮಾಡುವ ಶಕ್ತಿಗಳು ಇವು:
೧) ಬಂಡವಾಳ ಧರ್ಮ (Capital Religion)
೨) ಬಂಡವಾಳ ಜಾತಿ (Capital Caste)
೩) ಬಂಡವಾಳಶಾಹಿ (Capital Economy)
೪) ಅನಕ್ಷರತೆ (Illiteracy)
೫) ಅಸಮರ್ಥ ನಿರ್ವಹಣೆ/ಸರ್ಕಾರ
೬) ಶ್ರೇಣಿ ಸಿದ್ಧಾಂತಗಳು: ವರ್ಣ, ಜಾತಿ, ವರ್ಗ, ೧ನೆ ಜಗತ್ತು, ೨ನೆ ಜಗತ್ತು, ೩ನೆ ಜಗತ್ತು ಎಂಬ ವಿಂಗಡಣೆ.
ಸಹಜವಾಗಿಯೆ ಇವು ಸಮಾನತೆಯನ್ನು ಹಾಳು ಮಾಡುತ್ತವೆ. ಆದರೆ ಇವುಗಳ ಆತಂಕಕಾರಿ ವಾದ ಸರಣಿಯನ್ನು ಗಮನಿಸಿ.
೧) ಬಂಡವಾಳವಾದವೇ ಸೃಜನಾತ್ಮಕ
೨) ಸಮಾನತಾ ಸಿದ್ದಾಂತ ಒಂದು ಹಂಚಿಕೆ ವ್ಯವಸ್ಥೆ ಮಾತ್ರ
೩) ವ್ಯಕ್ತಿ ಸ್ವಾತಂತ್ರ್ಯವೆಂಬುದು ಒಂದು ಅರಾಜಕತೆ
೪) ಸಮಾನತೆ ಇರುವುದು; ದುಡಿಮೆಯಲ್ಲಿ, ಸೃಷ್ಟಿಶೀಲತೆಯಲ್ಲಿ, ನೈಪುಣ್ಯಶಕ್ತಿಯಲ್ಲಿ, ವ್ಯಾವಹಾರಿಕ ಜಾಣತನದಲ್ಲಿ, ಸಾಂಘಿಕಶಕ್ತಿಯಲ್ಲಿ.
೫) ಸ್ವಾತಂತ್ರ್ಯವೆಂಬುದು ಒಂದು ಆರೋಪ ಅದೇ ಸೃಜನಶೀಲತೆಯಲ್ಲಿ.
೬) ಸ್ವಂತವೆಂಬುದೇ ಸಾರ್ವತ್ರಿಕ ಸಿದ್ಧಾಂತ: ಸ್ವಂತದ ದುಡಿಮೆ, ಬದುಕುಬ ಹಠ, ವಿಕಾಸವನ್ನು ನಡೆಸಿದೆ, ಪರಸ್ಪರ ಹೊಂದಾಣಿಕೆಗಳಲ್ಲ.
೭) ಸಾಮಾಜಿಕ ನ್ಯಾಯ ಪ್ರಾಕೃತಿಕವಾದುದಲ್ಲ. ಪ್ರಕೃತಿಯಲ್ಲಿ ಎಲ್ಲವೂ ಸಮ-ಸಮಾನ ಇಲ್ಲ.
೮) ಸಾಮಾಜಿಕ ನ್ಯಾಯ ಅನ್ವೇಷಣಾ ಶೀಲವಲ್ಲ, ತಂತ್ರಜ್ನಾನ ಬೆಳವಣಿಗೆ ಮಾತ್ರ ಅನ್ವೇಷಣಾಶೀಲ. ಅದು ವಿಧವಿಧದ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತದೆ.
೯) ತನಗಾಗಿ ದುಡಿಯದವನು ಬೇರೆಯವರಿಗೆ ದುಡಿಯನು.
(ಮುಂದುವರಿಯುವುದು)