|
|
|
|
ಇಂಗ್ಲಿಷ್ ನಲ್ಲಿ: ಕುಮಾರಿ ಸಹನಾ ಶ್ರೀಧರ್
ಅನುವಾದ: ಆಯಾಮ ಪರಿವಾರ
ಆಯಾಮದೊಂದಿಗೆ ತನ್ನ ಪದ್ಯ ಹಂಚಿಕೊಂಡಿರುವ ೧೦ ವರ್ಷದ ಪುಟಾಣಿ ಸಹನಾ ಶ್ರೀಧರ್, ತನ್ನ ಅಮ್ಮ ಗಾಯಿತ್ರಿ, ಅಪ್ಪ ಶ್ರೀಧರ್ ಮತ್ತು ತಮ್ಮ ಸಮರ್ಥ್ ನೊಂದಿಗೆ ಅಟ್ಲಾಂಟಾದಲ್ಲಿ ವಾಸಿಸುತ್ತಿದ್ದಾಳೆ. ಅಮೆರಿಕನ್ ಸಂಜಾತೆ ಸಹನಾಳ ಮಾತೄಭಾಷೆ ಕನ್ನಡ. ಚಿತ್ರಕಲೆ, ಓದುವುದು, ಬರೆಯುವುದು, ನೃತ್ಯ ಮತ್ತು ಈಜುವುದು ಸಹನಾಗೆ ಇಷ್ಟದ ಹವ್ಯಾಸಗಳು. ಸಹನಾ ಬರ್ನೆಟ್ ಎಲಿಮೆಂಟರಿ ಶಾಲೆಯಲ್ಲಿ ೫ ನೇ ಗ್ರೇಡ್ ನಲ್ಲಿ ಓದುತ್ತಿದ್ದಾಳೆ. ಜಾರ್ಜಿಯಾ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಅವಳ ಕವನಗಳಿಗೆ ಪ್ರಥಮ ಬಹುಮಾನ ಬಂದಿದೆ. Today Is The Day ಪದ್ಯಕ್ಕೆ Earth week ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ.
|
Today Is The Day |
ಇಂದು ಆ ದಿನ |
I am the Earth
Place of every birth
I take care of all your needs
It is time for you to do some good deeds
Don't be mean
Keep me clean
Please recycle
To start a new life cycle
Begin to reduce and reuse
Please do not refuse
Today is the day
Let us make a difference in some way!! |
ನಾನು ಅವನಿ
ಜಾಗ ಎಲ್ಲ ಜನನಕ್ಕೆ
ಪೂರೈಸುತ್ತೇನೆ ನಾನು ನಿಮ್ಮೆಲ್ಲ ಅಗತ್ಯಗಳನ್ನು
ಇದು ನಿಮ್ಮ ಸಮಯ ಮಾಡಲು ಸ್ವಲ್ಪ ಒಳ್ಳೆ ಕೆಲಸಗಳನ್ನು
ಸ್ವಾರ್ಥಿಯಾಗಬೇಡಿ
ನನ್ನನ್ನು ಶುಚಿಯಾಗಿಡಿ
ದಯವಿಟ್ಟು ರಿಸೈಕಲ್ ಮಾಡಿ
ಹೊಸದೊಂದು ಜೀವ ಚಕ್ರ ಆರಂಭಿಸಲು
ಹಿತವಾಗಿ ಬಳಸಿ ಮತ್ತು ಮರುಬಳಸಿ
ದಯವಿಟ್ಟು ನಿರಾಕರಿಸದಿರಿ
ಇಂದು ಆ ದಿನ
ಯಾವುದಾದರೊಂದು ರೀತಿಯಲ್ಲಿ ಬದಲಾವಣೆ ಮಾಡುವ ಬನ್ನಿ!!
|
ಕುಲಾಂತರಿ ತಳಿ- ಈ ಹಾಲು ಅಮೃತವೇ?
ಭಾಗ-೨
ಕುಲಾಂತರಿ ತಳಿಗಳ ಪರಿಕಲ್ಪನೆ ಹುಟ್ಟಿದ್ದು ವಿಜ್ನಾನದ ಆಳ-ವಿಸ್ತಾರಗಳನ್ನು ಗೌರವಿಸುತ್ತಲೇ ಅದರ ಜೊತೆ ಸದಾ ಸುಮ್ಮಾನ ಆಡುವ ಅಮೆರಿಕಾದಲ್ಲಿ. ಹಾಗಾಗಿ, ಕುಲಾಂತರಿ ತಳಿಗಳ ನಿಜವಾದ ಪರಿಚಯ ನಮಗಾಗಬೇಕಾದರೆ ಅಮೆರಿಕಾದ ಅನುಭವದಿಂದಲೇ ಆಗಬೇಕು. ಅಮೆರಿಕಾ ಯಾವತ್ತೂ ಹೊಸತನಗಳನ್ನು ಬಾಚಿ ತಬ್ಬಿಕೊಂಡು ಅದನ್ನು ತನ್ನದನ್ನಾಗಿಸಿಕೊಳ್ಳುವ ದೇಶ. ಅಮೆರಿಕಾ ಎಂದು ಉಲ್ಲೇಖ ಮಾಡಿದಾಗ ನಾನು ಹೇಳುತ್ತಿರುವುದು ಅಮೆರಿಕಾದ ಜನರ ಸ್ಪ್ರಿರಿಟ್ ಬಗ್ಗೆಯೇ ಹೊರತು ಅಮೆರಿಕಾ ಸರ್ಕಾರದ ಬಗ್ಗೆಯಲ್ಲ. ಅಮೆರಿಕಾದ ಸರ್ಕಾರ ಬಿಡಿ. ಒಂದು, ತಾನು ಬಂಡವಾಳಶಾಹಿಗಳ, ಮಲ್ಟಿನ್ಯಾಷನಲ್ ಕಂಪನಿಗಳ, ಪೀಠಸ್ಥರ ಆಪ್ತ ಗೆಳೆಯನಾಗಿ ತನ್ನ ಜನ ಹಿತವನ್ನೂ ಅವರಿಗೆ ಔಟ್ ಸೋರ್ಸ್ ಮಾಡಿ ಬಿಟ್ಟಿದೆ. ಮತ್ತೊಂದು, ತನಗೆ ಸರಿಯಿಲ್ಲದ ರೀತಿಯಲ್ಲಿ ನಡೆದುಕೊಳ್ಳುವ ಯಾವುದೇ ಸಣ್ಣ ದೊಡ್ಡ ದೇಶಗಳನ್ನೂ ಅವರಷ್ಟಕ್ಕೆ ಇರಗೊಡದೆ ಸಕಲ ಸಾಮ-ದಾನ-ತಂತ್ರ-ಕುತಂತ್ರ-ದಂಡಗಳನ್ನೂ ಕೈ ಕಾಲು ಕೆರೆದುಕೊಂಡು ಪ್ರಯೋಗಿಸಿ ಎಲ್ಲರನ್ನೂ ಹೆದರಿಸಿಟ್ಟುಕೊಂಡಿದೆ. ಅದು ಅದರ ಜನಜನಿತ, ಸರ್ವರಿಂದ ದ್ವೇಷಿತ ಸ್ಟೈಲ್.
ಅಮೆರಿಕಾದ ಜನರ ಊಟದ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಶುರುವಾದದ್ದು ೧೯೯೩ ರ ಸುಮಾರಿಗೆ. ಆ ಕೆಟ್ಟ ಬದಲಾವಣೆಗಳ ಎಲ್ಲ ಪಾಪಕ್ಕೆ ಮೂಲ ಹೊಣೆ ಮ್ಯಾಕ್ ಡೊನಾಲ್ಡ್ಸ್ ಎಂಬ ಸಂಸ್ಥೆ. ಮ್ಯಾಕ್ ಡೋನಾಲ್ಡ್ಸ್ ’ಫಾಸ್ಟ್ ಫುಡ್’ ಅಥವಾ ತ್ವರಿತ ಊಟ ಎಂಬ ಕೈಗಾರಿಕೆಯನ್ನು ಶುರು ಮಾಡಿದ ಮೊದಲ ಕಂಪನಿ. ಮ್ಯಾಕ್ ಡೋನಾಲ್ಡ್ಸ್ ಕೋಳಿ-ದನದ ಮಾಂಸಗಳ ಬರ್ಗರ್ (ಮಾಂಸದ ಕಟ್ಲೆಟ್ ಎಂದುಕೊಳ್ಳಿ) ಗಳನ್ನು, ಆಲೂಗಡ್ಡೆಯ ಉದ್ದುದ್ದನೆಯ ಚಿಪ್ಸ್ (ಫ್ರೆಂಚ್ ಫ್ರೈ/ಫಿಂಗರ್ ಚಿಪ್ಸ್) ಮತ್ತು ಕೋಲಾಗಳನ್ನು ಫಾಸ್ಟ್ ಊಟವಾಗಿ ಜನಪ್ರಿಯಗೊಳಿಸಿತು. ಚೊಕ್ಕವಾಗಿ, ಕಷ್ಟಪಟ್ಟು ಮನೆಯಲ್ಲಿ ಮಾಡಿದ ಅಡಿಗೆಗಿಂತ ಈ ಫಾಸ್ಟ್ ಫುಡ್ ಜನರಿಗೆ ಇಷ್ಟವಾಗುವಂತೆ ಮಾಡಲು ಡ್ರೈವ್ ಥ್ರೂ ಹೋಟೆಲ್ ನಂತಹ ಉಪಾಯ ಮಾಡಿತು. ವಾಹನಗಳಲ್ಲಿ ಬರುತ್ತಿದ್ದ ಜನರು ಮ್ಯಕ್ ಡೊನಾಲ್ಡ್ಸ್ ನ ಬದಿಯಲ್ಲೇ ತಮ್ಮ ಗಾಡಿ ನಿಲ್ಲಿಸಿ ತಮಗೆ ಬೇಕಾದ ಬರ್ಗರ್ ಗಳನ್ನೋ, ಸ್ಯಾಂಡ್ ವಿಚ್ ಗಳನ್ನೋ ಪಡೆದುಕೊಳ್ಳುತ್ತಿದ್ದರು. ಆಗ ಅವರಿಗೆ ಸುಂದರ ಲಲನೆಯರು ಬಂದು ಬಿಂಕ ವೈಯಾರಗಳಿಂದ ಫಾಸ್ಟ್ ಫುಡ್ ನೀಡಿ ಹೋಗುತ್ತಿದ್ದರು. ಮೈಸೂರು ಬೆಂಗಳೂರು ದಾರಿಯಲ್ಲಿರುವ ಹಲವು ಡ್ರೈವ್ ಇನ್ ಹೋಟೆಲ್ ಗಳನ್ನು ನೋಡಿದ್ದೀರಿ. ನೀವು ಗಾಡಿ ನಿಲ್ಲಿಸಿದ್ದೇ ತಡ "ಏನು ಬೇಕು ಸಾರ್" ಅಂತ ಮಾಣಿಗಳೋ, ಪುಟ್ಟ ಹುಡುಗರೋ ಬಂದು ಕೇಳುತ್ತಾರೆ. ಸಡನ್ನಾಗಿ ಒಂದು ದಿನ ಮಾಣಿಗಳ ಬದಲಿಗೆ ಸಣ್ಣ ಸಣ್ಣ ಸ್ಕರ್ಟ್ ಹಾಕಿಕೊಳ್ಳುವ ಲಲನೆಯರು ಬಂದು ಜನರ ಮುಂದೆ ನಿಂತು ಬಿಟ್ಟರೆ?! ಇದ್ದಬದ್ದ ತುಂಡು, ತುಡುಗು, ಹುಚ್ಚು ಮಂದಿಯೆಲ್ಲಾ ಅಲ್ಲಿಗೇ ಧಾವಿಸಿ ನಿಲ್ಲುತ್ತಾರೆ. ಎದ್ದು ಬಿದ್ದು ಅಲ್ಲೇ ಊಟ ಕೇಳುತ್ತಾರೆ. ತಾನು ಮಾಡುವ ಅಗ್ಗದ ಊಟವನ್ನು ಜನಪ್ರಿಯ ಮಾಡಿಕೊಳ್ಳಲು, ಜನರು ಅದಕ್ಕೆ ಅಡಿಕ್ಟ್ ಆಗುವಂತೆ ಮಾಡಿಕೊಳ್ಳಲು ಮ್ಯಾಕ್ ಡೊನಾಲ್ಡ್ಸ್ ಮಾಡಿದ್ದೂ ಇದೇ ಟ್ರಿಕ್ ಅನ್ನೇ!!
ಸರಿ. ಇದು ಮೊದಲ ಹಂತವಾಯಿತು. ಅಂದರೆ ಜನ ಫಾಸ್ಟ್ ಫುಡ್ ನ ಖೆಡ್ಡಾಗೆ ಬಿದ್ದಾಯಿತು. ಇನ್ನು ಬಿಂಕ ವಯ್ಯಾರಗಳೆಲ್ಲಾ ಯಾಕೆ? ಮ್ಯಾಕ್ ಡೊನಾಲ್ಡ್ಸ್ ಲಲನೆಯರನ್ನೆಲ್ಲಾ ಮನೆಗೆ ಕಳಿಸಿ ಸೀರಿಯಸ್ ಧಂಧೆಗೆ ಶುರು ಹಚ್ಚಿಕೊಂಡಿತು. ಅಷ್ಟರಲ್ಲಿ ಅಮೆರಿಕಾದ ಹಲವಾರು ರಾಜ್ಯಗಳಲ್ಲಿ ಮ್ಯಾಕ್ ಡೊನಾಲ್ಡ್ಸ್ ನ ನೂರಾರು ಬ್ರಾಂಚ್ ಗಳು ಶುರುವಾಗಿದ್ದವು. ಫಾಸ್ಟ್ ಫುಡ್ಡಿಗೆ ಬೇಡಿಕೆ ಹೆಚ್ಚಿ-ಬೆಳೆಯತೊಡಗಿತು. ಜನ ಅಮೆರಿಕಾದ ಎಲ್ಲ ಮ್ಯಾಕ್ ಡೊನಾಲ್ಡ್ಸ್ ಬ್ರಾಂಚ್ ನಲ್ಲೂ ಒಂದೇ ರುಚಿಯ, ಒಂದೇ ಹದದ, ಒಂದೇ ಕ್ವಾಲಿಟಿಯ ಮಾಂಸ ತಿನ್ನಬೇಕೆಂದು ತಾನು ಮಾಂಸಕ್ಕಾಗಿ ಕೊಳ್ಳುವ ಕೋಳಿ, ದನಗಳ ಆಹಾರ-ಅವುಗಳ ಗಾತ್ರ, ಅವುಗಳಲ್ಲಿನ ಬೊಜ್ಜಿನ ಅಂಶವನ್ನು ಮ್ಯಾಕ್ ಡೊನಾಲ್ಡ್ಸ್ ತೀರ್ಮಾನಿಸಿ ಕೋಳಿ ಸಾಕಣೆಗಾರರಿಗೆ, ಹಸು ಸಾಕಣೆದಾರರಿಗೆ ಇಷ್ಟು ಕೋಳಿ-ದನಗಳನ್ನು ಇಷ್ಟು ದಿನಗಳ ಒಳಗೆ ಈ ಸ್ತಿತಿಯಲ್ಲಿ ಸಾಕಿಕೊಡಬೇಕೆಂದು ಗುತ್ತಿಗೆ ಕೊಡಲಾರಂಭಿಸಿತು. ಅವರಿಗೆ ಕೋಳಿ ಮರಿಗಳನ್ನೂ, ಕರುಗಳನ್ನೂ, ಅವುಗಳ ಆಹಾರವನ್ನೂ ಕಂಪನಿಯೇ ಸರಬರಾಜು ಮಾಡಲು ಶುರು ಮಾಡಿಕೊಂಡಿತು. ಮಾಂಸಕಾಗಿಯೇ, ಬೇಗ ಬೇಗ ಬೆಳೆಯುವ ಕೋಳಿ-ಕರುಗಳ ತಳಿಯನ್ನು ಹುಟ್ಟೂ ಹಾಕಿಸಿತು. ಸಾಧಾರಣ ಕೋಳಿಯೊಂದು ಸಂಪೂರ್ಣ ಬೆಳೆಯಲು ೯೦ ದಿನ ತೆಗೆದುಕೊಂಡರೆ, ಮ್ಯಾಕ್ ಡೊನಾಲ್ದ್ಸ್ ನ ತಳಿ ೪೦ ದಿನಕ್ಕೇ ಬೆಳೆದು ಬಿಡುತ್ತಿತ್ತು. ತಿನ್ನುವವರಿಗೆ ಮಾಂಸ ಹೆಚ್ಚು ಸಿಗಲೆಂದು, ಎದೆ ಭಾಗ-ತೊಡೆ ಭಾಗ ಹೆಚ್ಚು ಬೆಳೆಯುವಂತೆ ಪ್ರಯೋಗ ಶಾಲೆಯಲ್ಲಿ ಈ ಕೋಳಿಯ ಜೀನ್ (ವಂಶವಾಹಿನಿ) ಅನ್ನು ಡಿಸೈನ್ ಮಾಡಲಾಗಿತ್ತು! ಈಗ ನಮ್ಮಲ್ಲಿ ಸುಗುಣ ಇತ್ಯಾದಿ ಕೋಳಿ ತಳಿಗಳು ಚಲಾವಣೆಯಲ್ಲಿವೆಯಲ್ಲಾ ಅವು ಮ್ಯಾಕ್ ಡೊನಾಲ್ಡ್ಸ್ ದಶಕಗಳ ಹಿಂದೆ ಸೃಷ್ಟಿಸಿದ ಕೋಳಿ ತಳಿಯ ಅಕ್ಕ-ತಂಗಿಯಂದಿರು.
ಸಮರೋಪಾದಿಯಲ್ಲಿ ಸಾವಿರಗಟ್ಟಲೆ ಒಟ್ಟಿಗೇ ಸಾಕಲ್ಪಡುತ್ತಿದ್ದ ಈ ರೀತಿಯ ಕುಲಾಂತರಿ ಕೋಳಿಗಳಿಗೆ ಯಾವ ರೀತಿಯ ರೋಗಗಳೂ ಬರದಂತೆ ಅವುಗಳಿಗೆ ಕೊಡುವ ಆಹಾರದಲ್ಲಿ ಬೇಕಾದಷ್ಟು ಆಂಟಿಬಯಾಟಿಕ್ಸ್ ಗಳನ್ನು ಸೇರಿಸಲಾಗುತ್ತದೆ. ಕೋಳಿಗಳು ಒಂದೆರಡು ವರ್ಷಗಳಲ್ಲಿ ಈ ಆಂಟಿಬಯಾಟಿಕ್ಸ್ ಗಳಿಗೆ ಒಗ್ಗಿಕೊಳ್ಳುತ್ತವೆ. ಹಾಗೇ ಆ ಕೋಳಿಗಳನ್ನು ಆಹಾರವನ್ನಾಗಿ ತಿನ್ನುತ್ತಿದ್ದ ಜನರೂ ಆ ಆಂಟಿಬಯಾಟಿಕ್ಸ್ ಗಳಿಗೆ ನಿರೋಧಕ ಶಕ್ತಿ ಬೆಳೆಸಿಕೊಳ್ಳತೊಡಗುತ್ತಾರೆ. ಆಗ ಇನ್ನೂ ಹೆಚ್ಚು ಸಾಮರ್ಥ್ಯದ ಆಂಟಿಬಯಾಟಿಕ್ಸ್ ಗಳನ್ನು ಕೊಡಲಾಗುತ್ತದೆ. ಅದೇ ಆಂಟಿಬಯಾಟಿಕ್ಸ್ ಮತ್ತೆ ಜನರ ದೇಹ ಸೇರುತ್ತದೆ. ಜನರಿಗೆ ಸಣ್ನ ಪುಟ್ತ ಕೆಮ್ಮು-ನೆಗಡಿಗಳಾದರೂ ಹೆಚ್ಚು ಹೆಚ್ಚು ಸಾಮರ್ಥ್ಯದ ಆಂಟಿಬಯಾಟಿಕ್ಸ್ ತೆಗೆದುಕೊಳ್ಳುವ ಅಗತ್ಯ ಬರುತ್ತದೆ. ಅದು ದೇಹದ ಒಳ ಅಂಗಗಳಾದ ಲಿವರ್ ಇತ್ಯಾದಿಗಳ ಮೇಲೆ ಭಯಂಕರ ಕೆಟ್ಟ ಪರಿಣಾಮ ಬೀರುತ್ತದೆ. ಈ ಸತ್ಯ ಕೋಳಿಗಳ ಆಹಾರ ತಯಾರಿಸುತ್ತಿದ್ದ ಕಂಪನಿಗಳಿಗೆ ಗೊತ್ತಾಗುತ್ತದೆ, ಮ್ಯಾಕ್ ಡೊನಾಲ್ಡ್ಸ್ ನಂತಹ ಇತರೆ ಫಾಸ್ಟ್ ಫುಡ್ ಅಥವಾ ಪ್ರೋಸೆಸ್ಡ್ ಫುಡ್ ಕಂಪನಿಗಳಿಗೆ ಗೊತ್ತಾಗುತ್ತದೆ. ಆದರೆ ಅವರು ಅದನ್ನು ಜನರಿಗೆ ತಿಳಿಸುವ ಗೋಜಿಗೆ ಹೋಗುವುದಿಲ್ಲ. ಹಾಗೇ ಈ ಕೋಳಿಗಳನ್ನು ನಸುಗತ್ತಲ ಕೋಣೆಗಳಲ್ಲಿ ಸಾಕಲಾಗುತ್ತದೆ. ಅವಕ್ಕೆ ಸೂರ್ಯನ ಬೆಳಕು ಕಂಡರೆ ಮೆದುಳು ಚುರುಕಾಗಿ ಆ ಕಡೆ ಈ ಕಡೆ ನೋದಬೇಕೆನಿಸಿದರೆ? ಅವು ತಿನ್ನುವ ಬೆಳೆಯುವ ಟೈಮ್ ಅನ್ನು ವೇಸ್ಟ್ ಮಾಡಿಬಿಟ್ಟರೆ?!! ನೋಡಿ...ಬೆಳಕಿಗೆ ಬರಲೇಬೆಕೆನ್ನುವ ತೆವಲು-ಹಟ ನಮ್ಮದಾಗದಿದ್ದರೆ ಕತ್ತಲಲ್ಲಿ, ಕಂಟ್ರೋಲ್ಡ್ ಆಗಿ ಇಟ್ಟುಕೊಂಡು ಕೋಳಿಗಳಿಗಷ್ಟೇ ಅಲ್ಲ ನಮಗೂ ಎಷ್ಟು ಸುಲಭವಾಗಿ ಏನನ್ನು ಬೇಕಾದರೂ ಮಾಡಬಹುದು!
ಇದು ಕೋಳಿಗಳ ಕಥೆಯಾದರೆ ಆಹಾರಕ್ಕಾಗಿ, ಅಥವಾ ಕೇವಲ ಹಾಲಿಗಾಗಿ ಸಾಕಲ್ಪಡುವ ಹಸುಗಳ ಗೋಳೇ ಇನ್ನೊಂದು. ಒಂದು ಸಾಧಾರಣ ಹಸು ಕರು ಹೆತ್ತಾಗ ದಿನಕ್ಕೆ ೨ ಲೀಟರ್ ಹಾಲು ಕೊಡಬಹುದು. ಆದರೆ ಪ್ರಯೋಗ ಶಾಲೆಗಳಲ್ಲಿ ಡಿಸೈನ್ ಆದ ಹಸುಗಳು ಒಂದು ದಿನಕ್ಕೆ ೬-೭ ಗ್ಯಾಲನ್ ಅಂದರೆ ಸರಾಸರಿ ೨೫ ಲೀಟರ್ ಹಾಲು ಕೊಡುತ್ತವೆ!! ಅವು ಸದಾ ಬಾಣಂತಿ ಹಸುಗಳು! ಅವಕ್ಕೆ ಗೆಣೆಕಾರನಿಲ್ಲ, ಹುಲ್ಲುಗಾವಲಿನಲ್ಲಿ ಮೇಯುವ ಸ್ವಾತಂತ್ರ್ಯ ಇಲ್ಲ! ಅವುಗಳ ಮುಂದೆ ತಂದು ಸುರಿಯಲ್ಪಡುವ, ಫ್ಯಾಕ್ಟರಿಗಳಲ್ಲಿ ತಯಾರಾಗುವ ಆಹಾರ ಮಾತ್ರ ಅವುಗಳ ಪಾಲಿಗೆ. ಯಾಕೆ ಈ ಹಸುಗಳನ್ನು ಹುಲ್ಲು ಮೇಯಲು ಬಿಡುವುದಿಲ್ಲ? ಪ್ರಶ್ನೆ ಬರಬಹುದು. ಸಾಧಾರಣ ಹಸು ಹುಲ್ಲುಗಾವಲಿಗೆ ಹೋದರೆ ಮೇಯುವುದರ ಜೊತೆಗೇ ಆ ಕಡೆ ಈ ಕಡೆ ನೋಡುತ್ತದೆ, ಸಾಕೆನಿಸಿದರೆ ಮೇಯುವುದು ನಿಲ್ಲಿಸುತ್ತದೆ, ಗೆಳತಿ-ಗೆಳೆಯರ ಹಿಂದೆ ಅಲೆದಾಡುತ್ತದೆ, ಆಟವಾಡುತ್ತದೆ. ಆಗ ಮೇಯುವ ಟೈಮೆಲ್ಲಾ ವೇಸ್ಟ್ ತಾನೇ??! ಹಸುಗೆ ಮನಸ್ಸು, ಮೂಡ್, ಇಷ್ಟ, ಅನಿಷ್ಟ ಇರುವುದು ಆಹಾರವನ್ನು/ಹಾಲನ್ನು ಫಾಕ್ಟರಿಯ ರೀತಿಯಲ್ಲಿ ತಯಾರಿಸುವ ಮಂದಿಗೆ ಬೇಕಿಲ್ಲ. ಅವರಿಗೆ ಹಸುಗಳು ಬಂಧಿಯಾಗಿರಬೇಕು. ಅವುಗಳ ತಲೆ ಆಹಾರದ ಸಮೀಪವಿರಬೇಕು, ಅವು ತಲೆ ತಗ್ಗಿಸಿ ದಿನವಿಡೀ ತಿನ್ನುತ್ತಿರಬೇಕು, ಹಾಲು ಕೊಡುತ್ತಿರಬೇಕು ಅಥವಾ ಮೈ ಬೆಳೆಸಿಕೊಳ್ಳುತ್ತಿರಬೇಕು. ಅದು ಬೆಳವಣಿಗೆ, ಡೆವಲಪ್ಮೆಂಟ್, ಲಾಭ! ಈ ಹಸುಗಳ ಸಾಕಾಣಿಕೆ, ಅವುಗಳ ಊಟ, ಹಾಲು ಹಿಂಡುವ ಪರಿ ನೋಡಿದರೆ ಹಾಲು ಅಮೃತ ಎನ್ನಿಸುವುದಿದೆಯೇ?
(ಮುಂದುವರಿಯುವುದು) |
|
|
|
|
|
|
|