ಅಂಗಳ      ಬಗೆ ಬಗೆ
Print this pageAdd to Favorite
 


 ಬೇಕಾಗುವ ಪದಾರ್ಥಗಳು:
 
ಹೀರೆಕಾಯಿ ಹೋಳು-೧೧/೨ ಕಪ್
ತೊಗರಿ ಬೇಳೆ-೧/೨ ಕಪ್
ಈರುಳ್ಳಿ- ೧ (ಹೆಚ್ಚಿದ್ದು)
ತೆಂಗಿನಕಾಯಿ ತುರಿ-೪ ಟೇಬಲ್ ಸ್ಪೂನ್
ಹುರಿಗಡಲೆ-೨ ಟೇಬಲ್ ಸ್ಪೂನ್
ಜೀರಿಗೆ-೧/೨ ಟೀ ಸ್ಪೂನ್
ಮೆಣಸು-೧/೨ ಟೀ ಸ್ಪೂನ್
ಹಸಿಮೆಣಸಿನಕಾಯಿ-೨
ಬೆಳ್ಳುಳ್ಳಿ-೫ ರಿಂದ ೬ ಎಳಸು

ಉಪ್ಪು-ರುಚಿಗೆ ತಕ್ಕಷ್ಟು
ಸಾಸಿವೆ, ಕರಿಬೇಉ, ಎಣ್ಣೆ-ಒಗ್ಗರಣೆಗೆ
ಹಾಲು-೧/೪ ಕಪ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು-ಸ್ವಲ್ಪ
 


ಹೀರೇಕಾಯಿ ಸೀಸಾರು (ಸೀ ಪದಾರ್ಥ)

ಶ್ರೀಮತಿ ನಂದಿನಿ ಸಿದ್ದರಾಜ್

 
ವಿಧಾನ:
 • ಮೊದಲು ತೊಗರಿ ಬೇಳೆ, ಹೆಚ್ಚಿದ ಈರುಳ್ಳೀ ಮತ್ತು ಹೀರೆಕಾಯಿ ಹೋಳನ್ನು ಪ್ರೆಶರ್ ಕುಕ್ ಮಾಡಿ.
 • ತೆಂಗಿನ ಕಾಯಿತುರಿ, ಹುರಿಗಡಲೆ, ಜೀರಿಗೆ, ಮೆಣಸು, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.
 • ನಂತರ, ಒಂದು ದೊಡ್ಡ ಪ್ಯಾನ್ ನಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ ಕಾಯಿಸಿ, ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ. ಅದಕ್ಕೆ, ಆಮೇಲೆ ಬೇಯಿಸಿದ ಬೇಳೆ ಮತ್ತು ಹೀರೆಕಾಯಿ ಹೋಳನ್ನು ಹಾಕಿ. ರುಬ್ಬಿದ ಮಿಶ್ರಣವನ್ನು ಹಾಕಿ. ಹಾಗೇ ಸ್ವಲ್ಪ ನೀರನ್ನೂ ಹಾಕಬಹುದು. ರುಚಿಗೆ ಉಪ್ಪು ಸೇರಿಸಿ ಮೀಡಿಯಮ್ ಉರಿಯಲ್ಲಿ ಕುದಿಸಿ.
 • ಪದಾರ್ಥವನ್ನು ಚೆನ್ನಾಗಿ ಕುದಿಸಿದ ಮೇಲೆ ಹಾಲನ್ನು ಹಾಕಿ ಗ್ಯಾಸ್ ಅನ್ನು ಆಫ್ ಮಾಡಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ.
 • ಇದನ್ನು ಮುದ್ದೆ ಅಥವಾ ಅನ್ನದ ಜೊತೆ ಚನ್ನಾಗಿರುತ್ತದೆ. ಇದೇ ಪದಾರ್ಥಕ್ಕೆ ಹೀರೆಕಾಯಿಯ ಬದಲು ಹಸಿ ಬಟಾಣಿ ಅಥವಾ ಬಸಳೆ ಸೊಪ್ಪನ್ನೂ ಹಾಕಬಹುದು. ಬೇಕಾಗುವ ಪದಾರ್ಥಗಳು:
 
ಅಕ್ಕಿ-೧ ಬಟ್ಟಲು
ಗಸಗಸೆ-೧ ಬಟ್ಟಲು
ತೆಂಗಿನತುರಿ -೧ ಬಟ್ಟಲು (ಹೊಸತಾಗಿ ತುರಿದದ್ದು)
ಹಾಲು-೨ ಬಟ್ಟಲು
ಏಲಕ್ಕಿ ಪುಡಿ-೧ ಪುಟ್ಟ ಚಮಚ

ಸಕ್ಕರೆ-೨೧/೨ ಬಟ್ಟಲು

ಕೇಸರಿ ದಳಗಳು-೪ ರಿಂದ ೮
ಗೋಡಂಬಿ, ಬಾದಾಮಿ-ತಲಾ ಎರಡು ಚಮಚ (ಬಾದಾಮಿ ಸೀಳಿದಂತೆ ಹೆಚ್ಚಿದ್ದು)

ತುಪ್ಪ-೧/೨ ಬಟ್ಟಲು
 


 ಗಸಗಸೆ ಪಾಯಸ (ಸಕ್ಕರೆಯದ್ದು)

ಶ್ರೀಮತಿ ದಮಯಂತಿ

 
ವಿಧಾನ:
 • ಅಕ್ಕಿಯನ್ನು ೩ ರಿಂದ ೪ ಗಂಟೆಗಳ ಕಾಲ ನೆನೆಸಿಡಿ. ಅಕ್ಕಿ ನೆನೆದಷ್ಟೂ ನಯ ಜಾಸ್ತಿ.
 • ಗಸಗಸೆಯನ್ನು ಘಂ ಎಂದು ಪರಿಮಳ ಬರುವವರೆಗೂ ಬಾಣಲೆಯಲ್ಲಿ ಬೆಚ್ಚಗೆ ಮಾಡಿಕೊಳ್ಳಿ.
 • ಆಗ ಒಡೆದ ಕಾಯಿಯನ್ನು ತುರಿದಿಟ್ಟುಕೊಳ್ಳಿ.
 • ನೆನೆದ ಅಕ್ಕಿಯೊಟ್ಟಿಗೆ ಗಸಗಸೆ, ತೆಂಗಿನತುರಿಯನ್ನು ಸೇರಿಸಿ ರುಬ್ಬಿಕೊಳ್ಳಿ. ಮಿಶ್ರಣ ನಯವಾಗುತ್ತಿದೆ ಎನ್ನುವಾಗ ಏಲಕ್ಕಿ ಪುಡಿ ಸೇರಿಸಿ ಮತ್ತಷ್ಟು ರುಬ್ಬಿಕೊಳ್ಳಿ. ಮಿಶ್ರಣವನ್ನು ಪಾತ್ರೆಯೊಂದಕ್ಕೆ ತೆಗೆದಿಟ್ಟುಕೊಳ್ಳಿ.
 • ಹಾಲನ್ನು ಪ್ರತ್ಯೇಕವಾಗಿ ಪಾತ್ರೆಯೊಂದರಲ್ಲಿ ಬಿಸಿ ಮಾಡಿ ಅದಕ್ಕೆ ಸಕ್ಕರೆ, ಕೇಸರಿ ಸೇರಿಸಿ. ಆ ಹಾಲನ್ನು ಸ್ವಲ್ಪ ತಣ್ಣಗಾಗಲು ಬಿಡಿ.
 • ರುಬ್ಬಿದ ಗಸಗಸೆ, ತೆಂಗಿನಕಾಯಿ, ಅಕ್ಕಿಯ ಮಿಶ್ರಣಕ್ಕೆ-ತಣ್ಣಗಾಗಿರುವ ಸಕ್ಕರೆ ಮಿಶ್ರಿತ ಹಾಲನ್ನು ಸೇರಿಸಿ. ಅದನ್ನು ಸರಿಯಾಗಿ ಮಿಶ್ರ ಮಾಡಿ.
 • ಗಟ್ಟಿ ತಳದ ಪಾತ್ರೆಯೊಂದನ್ನು ಒಲೆಯ ಮೇಲಿಟ್ಟು ಕಮ್ಮಿ ಉರಿಯಲ್ಲಿಡಿ. ಅದಕ್ಕೆ ೨ ಚಮಚ ತುಪ್ಪ ಹಾಕಿ ಗೋಡಂಬಿ ಮತ್ತು ಬಾದಾಮಿ ಚೂರನ್ನು ಸೇರಿಸಿ ಸ್ವಲ್ಪವೇ ಹುರಿದುಕೊಳ್ಳಿ.
 • ಇದಕ್ಕೆ ಗಸಗಸೆ-ಅಕ್ಕಿ-ಕಾಯಿ-ಹಾಲಿನ ಮಿಶ್ರಣವನ್ನು ಸೇರಿಸಿ, ಅದು ತಳ ಹಿಡಿಯದಂತೆ ಮರದ ಸೌಟಿನಲ್ಲಿ ಕೈಯ್ಯಾಡುತ್ತಾ ೪-೫ ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
 • ಬೆಚ್ಚಗಾದಾಗ ಒಂದು ಚಮಚ ತುಪ್ಪ ಸೇರಿಸಿ ಕುಡಿಯಿರಿ.
  ಈ ಗಸಗಸೆ ಪಾಯಸವನ್ನು ತೆಳ್ಳಗೆ ಮಾಡಿಕೊಂಡರೆ ಕಾಯಿ ಹಾಲಿನಂತೆ ಕಡುಬು, ಹಲಸಿನ ಇಡ್ಲಿ, ಒತ್ತು ಶಾವಿಗೆಯ ಜೊತೆಯೂ ತಿನ್ನಬಹುದು.
  ಗಟ್ಟಿಯಾಗಿ ಮಾಡಿಕೊಂಡರೆ ಇಡ್ಲಿ, ಚಪಾತಿ, ದೊಸೆಗೆ ಸೀ ಚಟ್ನಿಯಂತೆಯೂ ಬಳಸಬಹುದು.