ಚಿಲಿಯ ಗಣಿಗಾರರು - ಅಪ್ ಡೇಟ್

ಎರಡು ತಿಂಗಳಿನಿಂದ ಕುಸಿದ ಗಣಿಯ ಭೂಗರ್ಭದಲ್ಲಿ ಬೆಳಕು ಕಾಣುವ ದಿನವನ್ನು ಕಾಯುತ್ತಾ ಕುಳಿತಿರುವ ಚಿಲಿಯ ಗಣಿಗಾರರಿಗೆ ಈಗ ಮತ್ತೊಂದು ಆಶಾದಾಯಕ ಸುದ್ದಿ. ನವೆಂಬರ್ ಹೊತ್ತಿಗೆ ಅವರನ್ನು ಜೀವಂತವಾಗಿ ಹೊರತೆರೆಯುತ್ತೇವೆಂದು ಪಣ ತೊಟ್ಟಿರುವ ಚಿಲಿಯ ಸರ್ಕಾರ ತನ್ನ ಪ್ರಯತ್ನದಲ್ಲಿ ಮತ್ತೊಂದು ಅಡೆತಡೆ ನಿವಾರಿಸಿಕೊಂಡಿದೆ.  ’ಫೀನಿಕ್ಸ್ ’ ಎಂದು ಕರೆಯಲ್ಪಡುವ ಕ್ಯಾಪ್ಸೂಲ್ ಮಾದರಿಯ ಪುಟ್ಟ ಕೋಣೆಯೊಂದನ್ನು ಈಗ ಕೊರೆಯಲಾಗುತ್ತಿರುವ ಸುರಂಗಮಾರ್ಗದಲ್ಲಿ ತೂರಿಸಿ ಅದರ ಒಳಗಡೆ ಒಬ್ಬಬ್ಬರಂತೆ ಗಣಿಗಾರರನ್ನು ನಿಲ್ಲಿಸಿಕೊಂಡು ಅವರನ್ನು ಹೊರತೆರೆಯುವ ಯೋಜನೆ ತಯಾರಾಗಿದೆ. ಅವರ ಎಲ್ಲ ಯೋಜನೆಗಳೂ ಸಫಲವಾಗಿ ಗಣಿಗಾರರು ಸುರಕ್ಷಿತವಾಗಿ ಮನೆ ತಲುಪಲಿ.


ಕ್ಯಾನ್ಸರ್ ಟಾಪ್ ೧೦

ಕ್ಯಾನ್ಸರ್ ರೋಗದ ಸಾಧ್ಯತೆ ಹೆಹ್ಚಿಸುವ ೧೦ ಮುಖ್ಯ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ. ಈ ಆಹಾರಗಳು ನಿಮ್ಮ ದಿನನಿತ್ಯದ ಊಟದಲ್ಲಿ ಕಂಡರೆ ಅವುಗಳನ್ನು ತಿನ್ನುವುದನ್ನು ತೀರಾ ಕಡಿಮೆ ಮಾಡಿ ಬಿಡುವುದು ಒಳಿತು.
 
೧) ಬೆಂಕಿಯ ಮೇಲಿಟ್ಟು ಸುಟ್ಟ ಕರಕಲಿಸಿದ (Charred) ಆಹಾರ ಪದಾರ್ಥಗಳು-ಅತಿಯಾಗಿ ಕಪ್ಪಾಗುವಂತೆ ಮಾಡಿದ ಬಾರ್ಬೆಕ್ಯೂ ಖಾದ್ಯಗಳು, ಅತಿಯಾಗಿ ಟೋಸ್ಟ್ ಮಾಡಿದ ಬ್ರೆಡ್, ಅತಿಯಾಗಿ ಸುಟ್ಟ ಮುಸುಕಿನ ಜೋಳ, ಇವೆಲ್ಲವೂ  ಹೆಟೆರೋ ಸೈಕ್ಲಿಕ್ ಅಮೈನ್ಸ್ ಎಂಬ ಕ್ಯಾನ್ಸರ್ ಜನಕವನ್ನು ಉತ್ಪಾದಿಸುತ್ತವೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
 
೨) ಅತಿಯಾಗಿ ಬೇಯಿಸಿದ ರೆಡ್ ಮೀಟ್ (ಕುರಿ-ಆಡು-ದನ-ಹಂದಿ ಇವುಗಳ ಮಾಂಸ)-ಮಾಂಸವನ್ನು ಸರಿಯಾಗಿ ಬೇಯಿಸದೇ ತಿಂದರೆ ಒಂದು ಸಮಸ್ಯೆಯಾದರೆ, ಅತಿಯಾಗಿ ಬೇಯಿಸಿದರೆ ಈ ಸಮಸ್ಯೆ!
 
 
೩) ಸಕ್ಕರೆ-ಬಿಳಿಯ ರಿಫೈನ್ಡ್ ಸಕ್ಕರೆಯಾಗಿರಬಹುದು ಅಥವಾ ಇತ್ತೀಚೆಗೆ ಮಾರುಕಟ್ತೆಗಳಲ್ಲಿ ಸಿಗುವ ಬ್ರೌನ್ ಸಕ್ಕರೆ ಆಗಿರಬಹುದು.
 
 
 
೪) ಹೆಚ್ಚು ಉಪ್ಪಿನಿಂದ ಕೂಡಿರುವ ಉಪ್ಪಿನಕಾಯಿಯಂತಹ ಪದಾರ್ಥಗಳು ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗುತ್ತವೆ ಎನ್ನಲಾಗಿದೆ.
 
 
 
೫) ಕೋಕಕೋಲಾ, ಪೆಪ್ಸಿ, ಫಾಂಟಾದಂತಹ ಅಸಂಖ್ಯಾತ ಸೋಡಾಗಳು-ಇವುಗಳಲ್ಲಿರುವ ಸಕ್ಕರೆ ಮತ್ತು ಫ್ಲೇವರ್ ಹೆಚ್ಚಿಸಲು ಬಳಸುವ ಸಿಂಥೆಟಿಕ್ ಅಂಶಗಳು
 
 
 
೬) ಫ್ರೆಂಚ್ ಫ್ರೈ, ಅಥವಾ ಫಿಂಗರ್ ಚಿಪ್ಸ್, ಕರಿದ ಅಲೂ ಗಡ್ಡೆಯ ಚಿಪ್ಸ್ ಮತ್ತು ಇದೇ ರೀತಿಯ ಟ್ರಾನ್ಸ್ ಫ್ಯಾಟ್ ಇರುವ ಎಲ್ಲ ತಿನಿಸುಗಳು.
 
 
 
೭) ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ, ಪೇಯಗಳಲ್ಲಿ ಬಳಕೆಯಾಗುವ ಆಸ್ಪರ್ಟೇಮ್ ರೀತಿಯ ಫ್ಲೇವರ್ ಹೆಚ್ಚಿಸುವ ವಸ್ತುಗಳು (additives)-ನಾವು ಮಾರುಕಟ್ಟೆಯಲ್ಲಿ, ಫಾಸ್ಟ್ ಫುಡ್ ಅಂಗಡಿಗಳಲ್ಲಿ ತಿನ್ನುವ ಎಲ್ಲ ತಿನಿಸುಗಳಲ್ಲೂ ಒಂದಿಲ್ಲೊಂದು ರೀತಿಯ additives ಗಳ ಬಳಕೆಯಾಗಿರುತ್ತದೆ.
 
 
೮) ಅತಿಯಾದ ಮದ್ಯ ಅಥವಾ ಆಲ್ಕೋಹಾಲ್ ಸೇವನೆ
 
 
೯) ಆಕ್ರಿಲಿಕ್ ಅಮೈಡ್- ಇದೊಂದು ರಸಾಯನಿಕ ವಸ್ತು. ಸಿಗರೇಟ್, ಸೋಡಾಗಳು ಇನ್ನಿತರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜ್ಯೂಸು/ಪೇಯಗಳಲ್ಲಿ, ಸಂಸ್ಕರಿಸಿ ಕ್ಯಾನ್ ಅಥವಾ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆಹಾರವನ್ನು ಅತಿಯಾಗಿ ಬೇಯಿಸಿದಾಗ, ಎಣ್ಣೆಯಲ್ಲಿ ಕರಿದಾಗ ಈ ರಾಸಾಯನಿಕ ಉತ್ಪತ್ತಿಯಾಗುತ್ತದೆ.
 
೧೦) ಫಾರ್ಮ್ ಗಳಲ್ಲಿ ಸಾಕಲ್ಪಡುವ ಮೀನಿಗಳು-ಫಾರ್ಮ್ ಗಳಲ್ಲಿ ಸಾಕುವ ಮೀನುಗಳಲ್ಲಿ ಕಂಡು ಬರುವ ಪಾಲಿಕ್ಲೋರಿನೇಟೆಡ್ ಬೈಫೆನಿಲ್ಸ್ (polychlorinated biphenyls) ಎಂಬ ರಾಸಾಯನಿಕ ಪದಾರ್ಥ ಗರ್ಭಸ್ತ ಶಿಶುಗಳಿಗೆ, ಮಕ್ಕಳಿಗೆ ಅತಿಯಾಗಿ ಮಾರಕವೆಂದು ತಿಳಿದು ಬಂದಿದೆ. ಈ ರಸಾಯನಿಕದ ಸ್ವಲ್ಪ ಸೇವನೆಯಿಂದಲೂ ಮಕ್ಕಳ ಬೌಧ್ಧಿಕ ಬೆಳವಣಿಗೆಗೆ ಹಾನಿಯಾಗುವುದೆಂದು ತಿಳಿದುಬಂದಿದೆ.