|
|
|
|
|
ಬೇಕಾಗುವ ಪದಾರ್ಥಗಳು: |
| |
ಒಣ ದ್ರಾಕ್ಷಿ-೧ ಬಟ್ಟಲು
ಗೋಡಂಬಿ-೧ ಬಟ್ಟಲು
ಬಾದಾಮಿ-೧ ಬಟ್ಟಲು
ಖರ್ಜೂರ-೧ ಬಟ್ಟಲು
ತುರಿದ ಕೊಬರಿ-೧ ಬಟ್ಟಲು
ಬೆಲ್ಲ-೧/೨ ಬಟ್ಟಲು (ಪುಡಿಮಾಡಿ ಶೋಧಿಸಿರಬೇಕು)
ತುಪ್ಪ-೧ ಬಟ್ಟಲು
ಏಲಕ್ಕಿ ಪುಡಿ-೧ ಚಮಚ (ಫ್ರೆಶ್ ಆಗಿ ಮಾಡಿದ್ದು)
ಕೇಸರಿ-೩-೪ ಎಳೆ
ಬಿಳಿ ಎಳ್ಳು-೧ ಚಮಚ
ಅಡುಗೆ ಮಾಡುವ ಅಂಟು-೧ ಸಣ್ಣ ಬಟ್ಟಲು
ಉಪ್ಪು-ಸಣ್ಣ ಚಿಟಿಕೆ
|
|
| | |
|
|
|
|
|
ಒಣ ಹಣ್ಣುಗಳ ಅಂಟಿನ ಉಂಡೆ
ಶ್ರೀಮತಿ ದಮಯಂತಿ
ವಿಧಾನ:
- ಬಾದಮಿ, ಗೋಡಂಬಿ ಇವನ್ನು ಬಾಣಲೆಯಲ್ಲಿ ೧ ಚಮಚ ತುಪ್ಪ ಹಾಕಿ ಬೆಚ್ಚಗೆ ಹುರಿದುಕೊಳ್ಳಿ.
- ಖರ್ಜೂರ, ಬಾದಮಿ, ಗೋಡಂಬಿ, ಒಣ ದ್ರಾಕ್ಷಿ ಇವೆಲ್ಲವನ್ನೂ ಸಣ್ನದಾಗಿ ಹೆಚ್ಚಿಟ್ಟುಕೊಳ್ಳಿ.
- ಅಂಟನ್ನು ದಪ್ಪ ತಳದ ಪಾತ್ರೆಯಲ್ಲಿ, ಕಮ್ಮಿ ಉರಿಯಲ್ಲಿ ಹುರಿದುಕೊಳ್ಳಿ. ಹುರಿಯುತ್ತಿದ್ದಂತೆಅಂಟಿನ ಸಣ್ಣ ಸಣ್ಣ ಉಂಡೆಗಳು ಪುರಿಯ ಥರ ಊದಿಕೊಳ್ಳುತ್ತವೆ. ಆಗ ಒಲೆ ಆರಿಸಿ. ಅದು ತಣ್ಣಗಾದ ಮೇಲೆ ಪುಡಿ ಮಾಡಿಕೊಳ್ಳಿ.
- ದಪ್ಪ ತಳದ, ಅಗಲ ಬಾಯಿಯ ಪಾತ್ರೆಯೊಂದರಲ್ಲಿ ತುಪ್ಪವನ್ನು ಕಾಯಿಸಿ ಎಲ್ಲ ಪದಾರ್ಥಗಳನ್ನೂ ಸಾವಕಾಶವಾಗಿ ಹಾಕಿ ಸರಿಯಾಗಿ ಬೆರೆಸಿ. ಹುರಿಯಿರಿ. ಬೆಸಿಗೆ, ಬೆಲ್ಲ, ಅಂಟು ಎಲ್ಲವೂ ಕರಗುತ್ತವೆ. ಆಗ ಒಲೆಯ ಉರಿಯನ್ನು ತೀರಾ ಕಡಿಮೆ ಮಾಡಿಕೊಳ್ಳಿ.
- ಅಂಗೈಗೆ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ. ಮಿಶ್ರಣ ತಣ್ನಗಾದರೆ ಮತ್ತೆ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಉಂಡೆಗಳನ್ನು ಕಟ್ಟಿದ ಮೇಲೆ ಆರಲು ಬಿಡಿ.
- ಸರಿಯಾಗಿ ಶೇಖರಿಸಿಟ್ಟರೆ ಈ ಉಂಡೆಗಳು ವಾರಗಟ್ಟಲೆ ಕೆಡದೆ ಇರಬಲ್ಲವು.
| |
|
|
|
| |
| |
|
ಬೇಕಾಗುವ ಪದಾರ್ಥಗಳು: |
| |
ಹಾಗಲಕಾಯಿ (ಕೊರಿಯನ್ ಅಥವಾ ಇಂಡಿಯನ್)-೪
ಕಡಲೆ ಕಾಯಿ ಬೀಜ-ಅರ್ಧ ಕಪ್
ಈರುಳ್ಳಿ(ಬಿಳಿ ಅಥವಾ ಕೆಂಪು)-೧ (ಹೆಚ್ಚಿದ್ದು)
ಟೊಮ್ಯಾಟೋ-೨ (ಹೆಚ್ಚಿದ್ದು)
ಒಣ ಮೆಣಸಿನ ಕಾಯಿ-೧೦
ಕಾಳು ಮೆಣಸು-೧೦ ಕಾಳುಗಳು
ಕರಿಬೇವು-೧೦ ಎಲೆಗಳಷ್ಟು
ತೆಂಗಿನತುರಿ-೧/೨ ಕಪ್ (ಫ್ರೆಶ್ ಆಗಿ ತುರಿದದ್ದು/ಒಣ ಪೌಡರ್)
ಜೀರಿಗೆ-೨ ಟೇಬಲ್ ಸ್ಪೂನ್
ಕೊತ್ತಂಬರಿ ಬೀಜ-೧ ಟೇಬಲ್ ಸ್ಪೂನ್
ಎಳ್ಳು-ಒಂದು ಚಿಟಿಕೆ
ಸೋಂಪು-ಒಂದು ಚಿಟಿಕೆ
ಗೋಡಂಬಿ-೪ ಟೇಬಲ್ ಸ್ಪೂನ್(ಇಷ್ಟವಿದ್ದಲ್ಲಿ ಮಾತ್ರ)
ಉಪ್ಪು-ರುಚಿಗೆ
ಸಕ್ಕರೆ/ಬೆಲ್ಲ-ಒಂದು ಚಮಚದಷ್ಟು
ಹುಣಸೆಹುಳಿ-೨ ಟೀ ಚಮಚ
ಕೊತ್ತಂಬರಿ ಸೊಪ್ಪು-೨ ಎಳೆ-ಹೆಚ್ಚಿದ್ದು (ಫ್ಲೇವರ್ ಗೆ) |
|
| | |
|
|
|
|
|
ಭರ್ತಿ ಮಾಡಿದ/ತುಂಬಿಸಿದ ಹಾಗಲಕಾಯಿ
ಶ್ರೀ ಸಿಡ್ ಸಿದ್ದರಾಜ್
ವಿಧಾನ:
- ಹಾಗಲಕಾಯಿ, ಈರುಳ್ಳಿ, ಟೊಮ್ಯಾಟೋ ಇವಿಷ್ಟನ್ನು ಹೊರತು ಪಡಿಸಿ ಇನ್ನೆಲ್ಲ ಸಾಮಗ್ರಿಗಳನ್ನೂ ಹುರಿದಿಟ್ಟುಕೊಳ್ಳಿ.
- ಹುರಿದದ್ದಕ್ಕೆ ಉಪ್ಪು, ಸಕ್ಕರೆ, ಹುಣಸೆ ಹುಳಿಯನ್ನು ಸೇರಿಸಿ, ನೀರು ಹಾಕಿ ತೀರ ತೆಳುವಾಗದಂತೆ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ.
- ರುಬ್ಬಿದ ಪದಾರ್ಥಕ್ಕೆ ಮತ್ತೆ ಈರುಳ್ಳಿ, ಟೊಮ್ಯಾಟೊ ಸೇರಿಸಿ ಮತ್ತೆ ರುಬ್ಬಿಕೊಳ್ಳಿ.
- ಹಾಗಲಕಾಯಿಗಳನ್ನು ತೊಳೆದು ೧ ಇಂಚಿನ ಗೋಲಗಳಂತೆ ಕತ್ತರಿಸಿ, ಬೀಜಗಳನ್ನು ತೆಗೆದುಕೊಳ್ಳಿ.
- ಪ್ರೆಶರ್ ಕುಕರ್ ಒಳಗೆ ಇಡುವ ಪಾತ್ರೆಯೊಂದರಲ್ಲಿ ಹಾಗಲದ ಗೋಲಗಳನ್ನು ಜೋಡಿಸಿಕೊಳ್ಳಿ.
- ರುಬ್ಬಿಟ್ಟ ಮಸಾಲೆಯನ್ನು ಹಾಗಲಕಾಯಿ ಗೋಲಗಳ ಒಳಗೂ, ಮೇಲೂ ತುಂಬಿಸಿರಿ.
- ಇದನ್ನು ೨-೩ ವಿಷಲ್ ಬರುವವರೆಗೂ ಪ್ರೆಶರ್ ಕುಕ್ ಮಾಡಿ.
- ರೆಡಿಯಾದ ನಂತರ ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ ಚಪಾತಿ ಅಥವಾ ಅನ್ನದ ಜೊತೆ ಎಂಜಾಯ್ ಮಾಡಿ.
| |
|
|
|
| |
| |
|
|
|
|
|
|
|