ಬೇಕಾಗುವ ಪದಾರ್ಥಗಳು:
ಪುಡಿ ಮಾಡಿಕೊಳ್ಳಲು-
ಅಕ್ಕಿ ಹಿಟ್ಟು-೧ ಕಪ್
ಚಿರೋಟಿ ರವೆ-ಕಾಲು ಕಪ್
ಕೊಬ್ಬರಿ ತುರಿ-ಕಾಲು ಕಪ್
ಮೈದಾ ಹಿಟ್ಟು-ಕಾಲು ಕಪ್
ಕರಿಬೇವು-೬-೭ ಕಡ್ಡಿ
ಕೆಂಪು ಮೆಣಸಿನ ಕಾಯಿ ಪುಡಿ-೪ ರಿಂದ ೬ ಚಮಚ (ಹೆಚ್ಚು ಖಾರ ಇಷ್ಟ ಪಡುವವರು ಇನ್ನೆರಡು ಚಮಚ ಸೇರಿಸಿಕೊಳ್ಳಬಹುದು)
ಜೀರಿಗೆ-೨ ಚಮಚ
ಎಣ್ಣೆ-೧/೪ ಕಪ್ (ಹಿಟ್ಟು ಮಾಡಿಕೊಳ್ಳಲು)
ಎಣ್ಣೆ-ಅರ್ಧ ಲೀಟರ್ (ಕರಿಯಲು)
ಉಪ್ಪು-ರುಚಿಗೆ ತಕ್ಕಷ್ಟು
ಇಂಗು-ಒಂದು ಚಿಟಿಕೆ
 
 
 

 

ಕೋಡುಬಳೆ
ಶ್ರೀಮತಿ ಪೂರ್ಣಿಮಾ ಸತ್ಯ
ವಿಧಾನ:
  • ಕೊಬ್ಬರಿ ತುರಿ ಹಾಗು ಕರಿಬೇವನ್ನು ಬಾಣಲೆಯಲ್ಲಿ ಬೆಚ್ಚಗೆ ಮಾಡಿಕೊಂಡು, ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ.
  • ಅಕ್ಕಿ ಹಿಟ್ಟು, ಚಿರೋಟಿ ರವೆ, ಮೈದಾ ಹಿಟ್ಟು, ಜೀರಿಗೆ, ಕೆಂಪು ಮೆಣಸಿನ ಪುಡಿ, ಉಪ್ಪು, ಇಂಗು, ಕೊಬ್ಬರಿ-ಕರಿಬೇವು ಪುಡಿ ಇವಿಷ್ಟನ್ನೂ ಒಂದು ಅಗಲ ಬಾಯಿಯ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ.
  • ಕಾಲು ಕಪ್ ಎಣ್ಣೆಯನ್ನು ಚನ್ನಾಗಿ ಬಿಸಿ ಮಾಡಿಕೊಂಡು ಅದನ್ನು ಈ ಹಿಟ್ಟುಗಳ ಪಾತ್ರೆಗೆ ಹಾಕಿ, ಅದನ್ನು ಚನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ನಾದಿ, ಕಲೆಸಿಕೊಳ್ಳಿ.
  • ಕಲೆಸಿದ ಈ ಹಿಟ್ಟನ್ನು ಪಾತ್ರೆಯೊಳಗೆ ಇಟ್ಟು, ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿ ಅರ್ಧ ಗಂಟೆ ನೆನೆಯಲು ಬಿಡಿ.
  • ಅರ್ಧ ಗಂಟೆ ನಂತರ ಮತ್ತೆ ಹಿಟ್ಟನ್ನು ಚನ್ನಾಗಿ ನಾದಿ, ನಿಂಬೆ ಹಣ್ಣಿನ ಗಾತ್ರದ ಪುಟ್ಟ ಉಂಡೆಗಳನ್ನು ಮಾಡಿಕೊಂಡು ಅದನ್ನು ಬಳೆಯ ಆಕಾರದಲ್ಲಿ ಸುತ್ತಿಟ್ಟುಕೊಳ್ಳಿ.
  • ಇಷ್ಟರಲ್ಲೇ ಅರ್ಧ ಲೀಟರ್ ಎಣ್ಣೆಯನ್ನು ಬಾಣಲೆಗೆ ಹಾಕಿ ಚನ್ನಾಗಿ ಬಿಸಿ ಮಾಡಿಕೊಳ್ಳಿ. ಅದು ಬಿಸಿಯಾದ ನಂತರ ಒಲೆಯ ಉರಿಯನ್ನು ಸ್ವಲ್ಪ ಕಮ್ಮಿ ಮಾಡಿಕೊಂಡು ಹಿಟ್ಟಿನ ಬಳೆಗಳನ್ನು ಹಾಕಿ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ