ಸಂಚಿಕೆ ೧೨ ಡಿಸೆಂಬರ್ ೨೦೧೦
ಇದೊಂದೇ ಅಂತ್ಯ,
ಮತ್ತೆ ಮತ್ತೆ ಬಯಸಿ
ಆಸ್ವಾದಿಸಲು ಕಾಯುತ್ತೇನೆ.
ಹೀರಿದಷ್ಟೂ ಸುಂದರ,
ಉಸಿರಾಡಿದಷ್ಟೂ ಜೀವ.
ನಿನಗೀಗ ಹಸಿ ಮುಂಜಾವು.
ರೆಪ್ಪೆಗಳ ಬೇಲಿಯೊಳಗೆ
ಭದ್ರವಾಗಿವೆ ಕನಸು.
ನಿನ್ನ ಕನಸ ಖುಷಿ ಕೇಕೆಯಿಂದ
ಸಿಹಿ ನಿದ್ರೆಗೂ ಕೊಂಚ ಮುನಿಸು.
ಬರ ಮಾಡಿಕೊಳ್ಳುತ್ತೇನೆ
ನಿನ್ನ ಸೋಕಿ ಬಂದ ಹೊಂಗಿರಣಗಳನ್ನು
ಬೇಗ ಕಳಿಸಿಕೊಡು
ಒಂದು ಹೊಸ ಸಂದೇಶವನಿತ್ತು...
|