ಅಂಗಳ      ಇನಿತೆನೆ
Print this pageAdd to Favorite

ಕೋಲಾಟ
 
ಡಾ. ಚಕ್ಕೆರೆ ಶಿವಶಂಕರ್
 
ಬಹುಶಃ ಕೋಲಾಟ ಇಲ್ಲದ ಊರುಗಳೇ ಇಲ್ಲ. ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಕೋಲಾಟ ರೂಢಿಯಲ್ಲಿದೆ. ಸುಗ್ಗಿಯ ದಿನಗಳಲ್ಲಿ ಬೆಳದಿಂಗಳ ರಾತ್ರಿಗಳಲ್ಲಿ ಅಂದಂದಿನ ದಂದುಗಕ್ಕೆ ಮೈಸೋತು ಮನ ಸೋತ ಮಂದಿ ಮನರಂಜನೆಗಾಗಿ ಕೋಲು ಹುಯ್ಯುವುದುಂಟು. ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಸುಲಭ ಅಳತೆಯ ಕೋಲುಗಳನ್ನು ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿ, ಹಾಡುಗಳನ್ನು ಹಾಡುತ್ತಾ, ಕುಣಿಯುತ್ತಾ ಕೋಲು ಹುಯ್ಯುವ ರೀತಿ ಆಕರ್ಷಣೀಯವಾದದು.

ಗಂಡಸರು ಮತ್ತು ಹೆಂಗಸರು ಪ್ರತ್ಯೇಕವಾಗಿ ಇಲ್ಲವೆ ಒಟ್ಟಾಗಿ ಸೇರಿ ಎದುರು ಬದುರಾಗಿ ನಿಂತು ಕೈಯಲ್ಲಿ ಹಿಡಿದ ಕೋಲುಗಳನ್ನು ದೇಹದ ವಿವಿಧ ಭಾಗಗಳ ಬಳಿ ಅಂದರೆ ತಲೆಯ ಮೇಲೆ, ಹೆಗಲ ಬಳಿ, ಸೊಂಟದ ಹಿಂಭಾಗ, ಮೊಳಕಾಲ ಬಳಿ, ಕಾಲಿನ ಕೆಳಗೆ ಹುಯ್ಯುತ್ತಾ ಆಥಾವ ಸಂಗಾತಿಗಳು ಹಿಡಿದಿರುವ
 
 ಕೋಲುಗಳಿಗೆ ವಿವಿಧ ವಿನ್ಯಾಸಗಳಲ್ಲಿ, ಲಯಗಳಲ್ಲಿ ತಾಡಿಸುತ್ತಾ, ಹಾಡುತ್ತಾ ಕುಣಿಯುವ ಕುಣಿತವೇ ಕೋಲಾಟ. ಕ್ರಮಬದ್ಧವಾದ ಪರಸ್ಪರ ಕೋಲುಗಳ ತಾಡನ, ಗೆಜ್ಜೆ ಕಟ್ಟಿದ ಕಾಲುಗಳ ಲಯಬದ್ಧ ಪದಗತಿ ಮತ್ತು ಹಿನ್ನೆಲೆಯ ಹಾಡುಗಳು ಇವು ಮೂರರಿಂದಾಗಿ ಕೋಲಾಟವು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಕೋಲಾಟಕ್ಕೆ ಇಂತಿಷ್ಟೇ ಜನರಿರಬೇಕೆಂಬ ನಿಯಮವೇನಿಲ್ಲ. ಆದರೆ ಸಮಸಂಖ್ಯೆಯಲ್ಲಿರಬೇಕು. ಕೋಲು ಹಿಡಿಯುವ ಮುನ್ನ ಕಲಾವಿದರುಗಳೆಲ್ಲಾ ವರ್ತುಲಾಕಾರವಾಗಿ ಸೇರಿ, ರಂಗದ ಮಧ್ಯೆ ಕೋಲುಗಳನ್ನು ಇರಿಸಿ, ಪೂಜಿಸಿ, ಕೋಲು ಮೇಳದ ಗುರುವಿಗೆ ವಂದಿಸಿ ತಮಗಿಷ್ಟವಾದ ಪ್ರಕಾರಕ್ಕೆ ಅನುಗುಣವಾಗಿ ಕೋಲಾಟವಾಡಲು ಪ್ರಾರಂಭಿಸುತ್ತಾರೆ. ಕೋಲ, ಗುರು ಪೌರಾಣಿಕ, ಚಾರಿತ್ರಿಕ, ಲೌಕಿಕ ಪದಗಳನ್ನು ಹಾಡುತ್ತಾರೆ. ಕಲಾವಿದರು ಕೋಲಾಟದೊಂದಿಗೆ ಈ ಹಾಡುಗಳನ್ನು ಪುನರಾವರ್ತಿಸುತ್ತಾರೆ. ಹಾಡಿನ ಮಧ್ಯೆ 'ಥಯ್ಯ' 'ಉಡುದಯ್ಯ' ಎನ್ನುವ ನುಡಿಗಟ್ಟುಗಳು ಕೇಳಿಬರುತ್ತವೆ. ಪ್ರತಿಯೊಂದು ಪದ ಮತ್ತು ಕೋಲಾಟದ ಗತ್ತು ಮುಗಿಯುತ್ತಿದ್ದಂತೆಯೇ 'ತಾಕಿತು ತಗಲಿತು ಯಾಕಿಂಗಾಯಿತು ಥಯ್ಯ ಥಯ್ಯ ಥಗಡದತ್ತಯ್ಯ' ಎಂದು ಹೇಳುತ್ತಾರೆ.

ಕೋಲಾಟ ಆಡಲು ನಿರ್ದಿಷ್ಟ ಕಾಲ ಎಂಬುದಿಲ್ಲ. ಹಬ್ಬಹರಿದಿನಗಳು, ಉತ್ಸವಗಳು, ಮದುವೆ ಸಮಾರಂಭ ಯಾವುದಾದರೂ ಸರಿಯೆ. ಕಣಿಕಣಿ ಎಂದು ಸದ್ದು ನೀಡುವ ಕೋಲುಗಳನ್ನು ಕಾರೆ, ಆಲೆ, ಬೈನೆ, ತೇಗದ ಮರಗಳಿಂದ ತಯಾರಿಸುತ್ತಾರೆ. ಇವು ಸುಲಭಪಟ್ಟಿಗೆ ಮುರಿಯುವಂಥವಲ್ಲ. ಇವುಗಳಿಗೆ ಬಣ್ಣ ಹಚ್ಚಿ ಗಿಲೀಟು ಮಾಡುವುದೂ ಉಂಟು. ಕೋಲಾಟ ಆಡುವವರು ತಮ್ಮ ಎರಡೂ ಕಾಲುಗಳಿಗೂ ಸರಗೆಜ್ಜೆಗಳನ್ನು ಕಟ್ಟಿಕೊಳ್ಳುತ್ತಾರೆ. ಮೊಳಕಾಲಿನವರೆಗೆ ಎತ್ತಿ ಕಟ್ಟಿದ ಏರುಗಚ್ಚೆ, ಕಸೆ ಅಂಗಿ, ಸೊಂಟಕ್ಕೆ ಅಡ್ಡಲಾಗಿ ಸುತ್ತಿದ ವಸ್ತ್ರ ಇವಿಷ್ಟು ವೇಷಭೂಷಣಗಳು. ಕೆಲವರು ತಲೆಗೆ ಕೆಂಪು ಪಟ್ಟಿಯನ್ನು ಕಟ್ಟಿಕೊಳ್ಳುವುದುಂಟು. ಕೋಲಾಟದಲ್ಲಿ ದಮ್ಮಡಿ ಮತ್ತು ತಾಳಗಳು ಹಿಮ್ಮೇಳದ ವಾದ್ಯಗಳು. ಇಲ್ಲಿ ಕೋಲುಪದಗಳಿಗೆ ಹೆಚ್ಚಿನ ಪ್ರಾಮುಖ್ಯತೆ. ವಿನೋದ, ಪ್ರಣಯ, ಶೃಂಗಾರ, ದುರಂತ ವಸ್ತುಗಳನ್ನು ಒಳಗೊಂಡ ಕೋಲು ಪದಗಳು ಕೋಲಾಟದ ಅವಿಭಾಜ್ಯ ಅಂಗ. ಕೋಲಾಟವು ಮೇಲುನೋಟಕ್ಕೆ ಲೌಕಿಕ ಕಲೆಯಾಗಿ ಗೋಚರಿಸಿದರೂ, ಒಳಹೊಕ್ಕು ನೋಡಿದಾಗ ಇದೊಂದು ಸಾಹಸ ಕಲೆ, ದೊಣ್ಣೆವರಸೆ, ಕತ್ತಿವರಸೆಗಳಂತೆ ಶಾರೀರಿಕ ಬಲ ಮತ್ತು ಬುದ್ದಿಯ ಕೌಶಲ್ಯಗಳೆರಡೂ ಕೋಲಾಟದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಕೋಲಾಟದ ಹೆಜ್ಜೆಯ ಗತ್ತುಗಳು, ಸೊಂಟದ ಬಾಗು ಬಳುಕುಗಳು, ಕೈಚಳಕ, ಹಾರುವಿಕೆ, ಕುಪ್ಪಳಿಸುವಿಕೆ, ಜಿಗಿತ ಎಲ್ಲವೂ ಸಾಹಸ ಕಲೆಯಲ್ಲಿ ಪ್ರದರ್ಶನಗೊಳ್ಳುವಂತಹ ಚಟುವಟಿಕೆಗಳಾಗಿವೆ.
ಕೋಲಾಟಕ್ಕೆ ಕಾಡುಗೊಲ್ಲರ ಜನಾಂಗವು ಹೆಸರುವಾಸಿಯಾದರೂ, ಇದು ಜಾತ್ಯಾತೀತ ಜನಪದ ಕಲೆ. ಯಾರೂ, ಎಲ್ಲಿ ಬೇಕಾದರೂ ಬಿಡುವು ದೊರೆತಾಗ ಕಾಲಿಗೆ ಗೆಜ್ಜೆ ಕಟ್ಟಿ ಕೋಲುಗಳೆರಡನ್ನು ಕೈಯಲ್ಲಿ ಹಿಡಿದರಾಯಿತು. ಸರಳ ಮತ್ತು ಸುಂದರ ಕಲೆಯಾಗಿರುವುದರಿಂದಲೇ ಇದರ ಜನಪ್ರಿಯತೆ ಅಪಾರ; ವ್ಯಾಪಕತೆ ಸರ್ವತ್ರ. ಕೋಲಾಟದಲ್ಲಿ ಗೀರುಕೋಲು, ಜಡೆಕೋಲು, ಉಯ್ಯಾಲೆಕೋಲು, ಕೊರವಂಜಿ ಕೋಲು, ಸುತ್ತುಕೋಲು, ಹಾರಗಡ್ಡಿ, ಗೆಜ್ಜೆಕೋಲು, ಚಿತ್ತಾರದ ಕೋಲು, ತೇರುಕೋಲು, ಕತ್ತಿಕೋಲು, ನೀರುಕೋಲು ಮುಂತಾದ ಹಲವಾರು ಪ್ರಕಾರಗಳಿವೆ.

 

 
 
 
 

ಇಸ್ಸೀ...ಇಸ್ಸೀ...ಕೊಳಕು ತಿಪ್ಪೆಯಾಗಿರುವ ಕರ್ನಾಟಕ ರಾಜಕೀಯ

ಕರ್ನಾಟಕಾನ ಕಣ್ತುಂಬಾ ಕಾಣ್ತಾ ಇದ್ದೀರಾ! ಕೇಳಿಸ್ಕತಾ ಇದ್ದೀರಾ! ಇನ್ನೂ ಸ್ವಲ್ಪ ದಿವ್ಸ ಹೋದ್ರೆ ಈಗಿನ ಘನ ಮುಖ್ಯಮಂತ್ರಿ ಕರ್ನಾಟಕದ ಜನರಿಗೆಲ್ಲ ಸಾರಾ ಸಗಟಾಗಿ ಹುಚ್ಚ ಹಿಡ್ಸೋದು ಗ್ಯಾರಂಟಿ. ಆಮೇಲೆ ಭಾರತದೋರು ಕರ್ನಾಟಕಾನ ಹುಚ್ಚರ ಆಸ್ಪತ್ರೆ ಅಂತಲೇ ಕರೆಯೋದು ಖಾಯಂ ಆದ್ರೂ ಆಶ್ಚರ್ಯ ಇಲ್ಲ. ಈ ಪಾರ್ಟಿ ಯಡಿಯೂರ ದೇವ್ರ ಹೆಸರು ಹೇಳಿಕೊಂಡು ಈ ಹೊತ್ತು ಹೂಂ ಅಂದದನ್ನು ನಾಳೆ ಇಲ್ಲ ಅಂತನೆ. ಶಿವಶಿವಾ! ಇಷ್ಟು ಸುಳ್ಳು...ಇಷ್ಟು ತಟವಟ...ಈ ಪಾಟಿ ಅಂಡಾಗುಂಡಿ!
 
ಈತ ನಮ್ಮ ಕರ್ನಾಟಕದ ಸ್ಪೆಷಲ್ ಮುಖ್ಯಮಂತ್ರಿ! ಪಕ್ಷದ ಹೆಸರೇಳಿಕೊಂಡು ಪಕ್ಷಕ್ಕೆ ಮಣ್ಣು ತಿನ್ನಿಸಿ ಆಯಿತು. ಜಾತಿಯ ಹೆಸರೇಳಿ ಅಂಥಾ ವೈಚಾರಿಕ ಶರಣ ಸಂಸ್ಕೃತಿಗೇ ಗೆದ್ದಲು ಹಿಡಿಸಿದ್ದಾಯಿತು. ಇನ್ನು ಈಗ ಕೈ ಹಾಕಿರುವುದು ಜನರ ಮಿದುಳನ್ನೇ ಕಲಗಚ್ಚು ಮಾಡಲು! ವಚನಕಾರರ ನಂಟಿನಿಂದ ಬಂದವನು ಅನ್ನೋ ದ್ರಾಷ್ಟ್ಯ ಬೇರೆ. ಕರ್ನಾಟಕದಲ್ಲಿ 'ವಚನ' ಎಂದರೆ ಪ್ರಮಾಣ; ಭಾಷೆ ಮತ್ತು ಮಾತು. ಮಾತು ಮಾಣಿಕ್ಯ. ಮಾತೇ ಸತ್ಯ ಎಂದು ವಚನಕಾರರು ಸಾರಿ ಸಾರಿ ಹೇಳಿದರು. ಈಗ ಅದೇ ವಚನಕಾರರು ಯಡಿಯೂರಪ್ಪನವರ ಮಾತು ಕೇಳಿಸಿಕೊಂಡರೆ ಐ ಅಮ್ ಸಾರಿ, ವೆರಿ ವೆರಿ ಸಾರಿ ಎನ್ನಲಾರರೆ!
 
ಒಬ್ಬ ಮುಖ್ಯಮಂತ್ರಿ ಸರ್ಕಾರಕ್ಕಾಗಿ ವಶಪಡಿಸಿಕೊಂಡ ಭೂಮಿಯನ್ನು ಸಾರ್ವಜನಿಕ ಹಿತಕ್ಕಾಗಿ ಡಿನೋಟಿಫೈ ಮಾಡೋದು ಖಂಡಿತ ಅಪರಾದವಲ್ಲ. ಬ್ಯೂರೋಕ್ರಾಟ್ ಗಳನ್ನು ಹಿಡಿದುಕೊಂಡು ಸಾರ್ವಜನಿಕ ಸೇವೆ ಮಾಡೋದು ಸಾಧ್ಯನೇ ಇಲ್ಲ. ಜನಪ್ರತಿನಿಧಿಯಾದ ಮುಖ್ಯಮಂತ್ರೀನೆ ಇದಕ್ಕೆಲ್ಲ ಸಪೋರ್ಟ್ ಮಾಡಬೇಕು. ಆದರೆ ಈಗ ನೂರಕ್ಕೆ ತೊಂಬತ್ತು ಪರ್ಸೆಂಟ್ ಕರ್ನಾಟಕದ ಭೂಮಿ ಡಿನೋಟಿಫೈ ಆಗಿರೋದು ಯಾರ ಹಿತಕ್ಕಾಗಿ?? ಕನಾಟಕದ ಪತ್ರಿಕೆಗಳು, ಟಿ.ವಿ ಇತರ ಮಾಧ್ಯಮಗಳು ಯಾವ ಕಥೆ ಹೇಳುತ್ತಿವೆ??
’ಹಿಂದಿನ ಸರ್ಕಾರದವರೂ ಮಾಡಿದ್ದಾರೆ...’ ಎಂದರೆ ನಾನೂ ಈಗ ಅದೇ ಗಲೀಜು ಕೆಲಸ ಮಾಡಿದ್ದೇನೆ ಎಂದಾಗುವುದಿಲ್ಲವೆ? ’ನಾನು ಇನ್ನು ಮುಂದೆ ಹಾಗೆ ಮಾಡುವುದಿಲ್ಲ...’ ಎಂದರೆ ಈಗ ಮಾಡಿರುವುದು ತಪ್ಪು ಎಂದರ್ಥವಲ್ಲವೇ? ’ನನ್ನ ಹಗರಣವನ್ನು ಬಯಲಿಗೆಳೆದವರನ್ನು ಸುಮ್ಮನೆ ಬಿಡುವುದಿಲ್ಲ...’ ಎಂದರೆ ಅವರು ತನ್ನ ತಪ್ಪನ್ನು ಹೊರಗೆಡಹಿದ್ದಾರೆ ಎಂದೇ ದ್ವನಿ ಬರುತ್ತಿಲ್ಲವೆ? ’ನನ್ನ ಬಗ್ಗೆ, ನನಗೆ ವಿರೋಧ ಮಾಡಿದವರನ್ನು ಅಡ್ರಸ್ ಇಲ್ಲದ ಹಂಗೆ ಮಾಡಿಬಿಡುತ್ತೇನೆ...’ ಎಂದರೆ ಈ ಆಕ್ರೊಶದ ಹಿಂದಿನ ಮನಸ್ಸು ಏನು ಹೇಳುತ್ತದೆ? ’ನಾನೂ ಅವರ ಹಗರಣಗಳನ್ನು ಜಾಹೀರಾತು ಮಾಡುತ್ತೇನೆ...’ ಎಂದರೆ ಅಪರಾಧದ ಪೈಪೊಟಿ ನಡೆಯುತ್ತದೆ ಎಂದಾಗುವುದಿಲ್ಲವೆ? ’ಇನ್ನು ಹಿಂಗೆ ಮಾಡಲ್ಲ...ಅದು ಆಗ ಹಂಗೆ ಮಾಡಿದ್ದು...ಇವರಿಗಾಗಿ ಮಾಡಿದ್ದು...ಇಷ್ಟು ಮಾಡಿದ್ದು...ಅಂತ ಮಾಡಿದ ತಾನು ಮಾಡಿದ ಭ್ರಷ್ಟಾಚಾರವನ್ನೆಲ್ಲ, ಅಪರಾಧವನ್ನೆಲ್ಲ ಪರೊಕ್ಷವಾಗಿ ಒಪ್ಪಿಕೊಳ್ಳುವಂತೆಯೇ ಮಾತನಾಡುತ್ತಿರುವ ಯಡಿಯೂರಪ್ಪನವರ ಅಪರಾಧದ ಕನ್ಫೆಷನ್ ಗೆ ಸಾಕ್ಷಿ ಬೇರೆ ಏನು ಬೇಕು? ಇನ್ನೂ ನ್ಯಾಯಂಗ ತನಿಕೆಯೊಂದರ ಅಗತ್ಯ ಇದೆ ಅನಿಸುತ್ತದೆಯೆ? ಹೇಳಿ.
 
ನಾವು ಡಿಪರೆಂಟ್ ಅಂಥ ಹೇಳಿದ ಕಾರಣಕ್ಕಾಗಿಯೆ ಕರ್ನಾಟಕದ ಜನ ಬಿಜೆಪಿಗೆ ಬಹುಮತ ಕೊಟ್ಟರು. ನಿಜವಾಗಲೂ ಏನೋ ’ಡಿಫರೆಂಟ್’ ಮಾಡುತ್ತಾರೆ ಅಂತಲೇ ನಂಬಿದರು. ಈಗ ಡಿನೋಟಿಫಿಕೇಷನ್ ಧಾಂದಲೆಗೆ ಬೆಚ್ಚಿಬಿದ್ದಿದ್ದಾರೆ. ನಾವು ಕಷ್ಟಪಟ್ಟು, ಗಳಿಕೆ ಉಳಿಸಿ ಕೊಂಡುಕೊಂಡಿರುವ ತುಂಡು ನೆಲವೂ ಈ ಭೂ ರಾಕ್ಷಸರ ಹೊಟ್ಟೆಗೆ ಸೇರಿ ಬಿಟ್ಟಿದೆಯೋ, ಸೇರಲಿದೆಯೋ ಎಂದು ಹೆದರುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಪಕ್ಷದಲ್ಲೂ ಉತ್ತಮರಿದ್ದಾರೆ, ಸಜ್ಜನರಿದ್ದಾರೆ, ಸಮರ್ಥರಿದ್ದಾರೆ. ಕಾನೂನು ಮತ್ತು ಸಂಸದೀಯ ಸಚಿವ ಸುರೇಶ್ ಕುಮಾರ ಸಭ್ಯ ,ಸಜ್ಜನ, ಬಹುಜನ ಪ್ರೇಮಿ. ಆರ್.ಎಸ್. ಎಸ್ ಹಿನ್ನಲೆ, ಬ್ರಾಹ್ಮಣ ಎಂಬುದು ಅವರ ವ್ಯಕ್ತಿತ್ವವನ್ನು ಎಂದೂ ಮುಸುಕು ಮಾಡಿಲ್ಲ. ಆದರೆ ಐದು ವರ್ಷ ಕರ್ನಾಟಕ ನನಗೆ ಗುತ್ತಿಗೆಯಾಗಿದೆ, ನಮ್ಮವರಿಗೆ ಎನ್ನುವವರ ಮಾತಿಗೆ ಏನು ಹೇಳಬೇಕು್? ಇದರ ಜೊತೆಗೇ ’ಧರ್ಮಗುರುಗಳು’ ಎಂದು ಕರೆಸಿಕೊಳ್ಳುವವರು ಮಠ-ಸಂಸ್ಥೆಯ ಬಾಗಿಲು ಹಾಕಿಕೊಂಡು ಕೊಚ್ಚೆಯಾಟಕ್ಕೆ ಇಳಿಯಲು ಅನುವಾಗಿದ್ದಾರೆ. ಒಬ್ಬ ಧರ್ಮಗುರು ನೇರವಾಗಿ, ರಾಜಾರೋಷವಾಗಿ ರಾಜಕಾರಣದ ತೆಕ್ಕೆಗೆ ಬೀಳುತ್ತಾನೆ ಎಂದರೆ ಅವನು ಅಡ್ಡದಾರಿ ಹಿಡಿದ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ. ಅನೈತಿಕತೆಯ ಜೊತೆಗೆ ನೈತಿಕತೆ ಬೆರೆತರೆ ಏನಾಗುತ್ತದೆ?! ತುಪ್ಪಕ್ಕೆ ತೊಪ್ಪೆ ಸೇರಿಸಿದಂತಲ್ಲವೆ?

ಇವರಾಟವನ್ನು ಸ್ವಾರ್ಥ, ಸ್ವಜನ ಪಕ್ಷಪಾತ ಎಂದು ಹೇಳಿ ಬಾಯಿ ಮುಚ್ಚಿಕೊಳ್ಳೊಣವೆ? ಕರ್ನಾಟಕವನ್ನು ಕ್ಷಮಿಸು ಎಂದು ದೇವರಲ್ಲಿ ಪ್ರಾರ್ಥಿಸೋಣವೇ? ’ಸತ್ತಂತಿಹ’ ಕರ್ನಾಟಕದ ಜಡ ಜನರನ್ನು ಡೆಮಾಕ್ರಟಿಕ್ ಆಗಿ ’ಬಡಿದೆಚ್ಚರಿಸು’ ಎಂದು ಒತ್ತಾಯಿಸೊಣವೆ? ಜಾತಿ ಮತ್ತು ನೋಟಿನ ಬಲದಿಂದ ದೊರೆತ ಅಧಿಕಾರದ ಸ್ತಿತಿ ಇದಕ್ಕಿಂತ ಭಿನ್ನ ಇರಲು ಹೇಗೆ ಸಾಧ್ಯ ಎಂದು ಕೈ ಚೆಲ್ಲೋಣವೆ? ಕೇಳುತ್ತಾ ಹೋದರೆ ಇಸ್ಸಿ...ಇಸ್ಸಿ...ಚರಂಡಿಗೆ ಕೈ ಹಾಕಿದಂತೆ ಅನ್ನಿಸಿ ಬಿಡುವುದಿಲ್ಲವೆ?
 
ಪ್ರಾಜ್ಞರು ಚಿಂತಿಸಲಿ !
 
 
 
 
 

 ಆರ್ ಎಸ್ ಎಸ್ ಚಡ್ಡಿ, ಲಪ್ಪಟ್ಟೆ ಚಡ್ಡಿಗಳ ಜಂಗಿಕುಸ್ತಿಗೆ ಸಿದ್ಧವಾಗಿರುವ ಕರ್ನಾಟಕ

’ಸಹನಾ’            
                ಕರ್ನಾಟಕದ ರಾಜಕಾರಣ ದೇಶದ ಉದ್ದಗಲಕ್ಕೂ ಒಂದು ರೀತಿ entertaining ಆಗಿದೆ. ಯಾವುದೇ ಒಂದು ರಾಜ್ಯ ತನ್ನ ಅಭಿವೃದ್ದಿ ಮೂಲಕ ಗಮನಸೆಳೆಯುವುದು, ಮತ್ತೊಂದು ರಾಜ್ಯಕ್ಕೆ ಮಾದರಿ ಎನಿಸುವುದು, ಆಯಾ ರಾಜ್ಯಕ್ಕೆ ಘನತೆ ,ಗೌರವ ಹೆಚ್ಚಿಸುತ್ತೆ. ಅಭಿವೃದ್ಧಿ, ವಿದ್ಯೆ, ಸಾಮರ್ಥ್ಯದಿಂದ ಕರ್ನಾಟಕ ಎಂದರೆ ಒಂದು ಮಾದರಿ ಎನಿಸಿಕೊಂಡಿದ್ದ ರಾಜ್ಯ ಇದು. ಆದರೀಗ ಭ್ರಷ್ಟಾಚಾರದ ಭೂತಕ್ಕೆ ಬೆಪ್ಪುಬಡಿದು ಕೂತಿದೆ. ಎಲ್ಲಾ ಪಕ್ಷದ ರಾಜಕಾರಣಿಗಳು ಬೆತ್ತಲಾಗುತ್ತಿದ್ದಾರೆ. ಸೇಡಿನ ರಾಜಕಾರಣ ಬುಸುಗುಡುತ್ತಿದೆ! ಸದ್ಯದ ರಾಜಕಾರಣ ನೋಡಿದ್ರೆ ಇದು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಈಗಲೇ ಹೇಳೋದು ಕಷ್ಟ. ಕಳೆದ ಮೂರ್ನಾಕು ತಿಂಗಳಿಂದ ಕಾಂಗ್ರೆಸ್, ಜೆಡಿಎಸ್ ಹಾಗು ಅಧಿಕಾರಸ್ಥ ಬಿಜೆಪಿ ನಡುವಿನ ರಾಮಾಯಣವನ್ನ ರಾಜ್ಯದ ಜನತೆ ದಿನ ಬೆಳಗ್ಗೆ ನೋಡುತ್ತಾ, ಆಗುತ್ತಿರುವ ಕ್ಷಣ ಕ್ಷಣದ ರಾಜಕೀಯ ದೊಂಬರಾಟಕ್ಕೆ ಒಂದು ರೀತಿ ಅಡಿಕ್ಟ್ ಆಗಿ ಹೋಗಿದ್ದಾರೆ. ಅವರಿಗೆ ರೀತಿ ಪುಕ್ಸಟ್ಟೆ ಮನರಂಜನೆ ಸಿಕ್ತಿದೆ ಅಂತಾನೆ ಹೇಳ್ಬೇಕು. ರಾಜಕಾರಣದ ಈ ಸರ್ಕಸ್ ಟಿವಿ ಸಿರಿಯಲ್ ಗಳ ಟಿ ಆರ್ ಪಿ ರೇಟಿಂಗ್ ಕುಸಿದು ಬಿಳೋಹಾಗೆ ಮಾಡಿದೆ!!