ಬೇಕಾಗುವ ಪದಾರ್ಥಗಳು:

 

ತಿಂಗಳವರೆ (ಬಿಳಿಕಾಳು): ೧/೨ ಅಥವಾ ೩/೪ ಕಪ್ (ಹುರುಳಿ, ಕಪ್ಪು ತೊಗರಿ ಅಥವಾ ಬೇರೆ ಯಾವುದಾದರೂ ಕಾಳು ಆಗಬಹುದು)

ಸುವರ್ಣ ಗಡ್ಡೆ: ೧ ಕಪ್ ಹೋಳುಗಳು (ಸೌತೆಕಾಯಿ, ಬಾಳೆಯ ದಿಂಡು ಅಥವಾ ಉಪ್ಪಿಗೆ ಹಾಕಿಟ್ಟ ಕಣಿಲೆ ತುಂಡು ಇವುಗಳಲ್ಲಿ ಒಂದು ತರಕಾರಿ)
 
ತೆಂಗಿನ ಕಾಯಿ: ೧/೨ ಹೋಳು
 
ಕೆಂಪು ಮೆಣಸಿನ ಕಾಯಿ : ೮-೧೦(ಹುರಿದದ್ದು) ಖಾರ ಬೇಕಾದಲ್ಲಿ ಹೆಚ್ಚು ಬಳಸಬಹುದು.

ಹುಣಸೆಹುಳಿ: ಒಂದು ಗಜ್ಜುಗದಷ್ಟು
 
ಬೆಳ್ಳುಳ್ಳಿ: ೫-೬ ಎಸಳು
 
ಉಪ್ಪು: ರುಚಿಗೆ ಬೇಕಾದಷ್ಟು
 
ಎಣ್ಣೆ: ಒಂದು ಟೇಬಲ್ ಚಮಚ  

 

 
 
 
 
 

 

ಬಗೆ ೧
ಕಾಳಿನ ಗಸಿ
 
ಶ್ರೀಮತಿ ವೀಣಾ ಕಾಮತ್, ಮಂಗಳೂರು
ವಿಧಾನ:
  • ಕುಕ್ಕರಿನಲ್ಲಿ ಕಾಳು ಮತ್ತು ತರಕಾರಿಯನ್ನು ಬೇರೆ ಬೇರೆ ಪಾತ್ರೆಯಲ್ಲಿಟ್ಟು ಬೇಯಿಸಬೇಕು. ಕಾಳಿಗೆ ಹೆಚ್ಚು ನೀರು ಬೇಕು. ತರಕಾರಿಗೆ ಕಡಿಮೆ ನೀರಿಟ್ಟು ಬೇಯಿಸಬೇಕು.
  • ತೆಂಗಿನ ಕಾಯಿಯ ಜೊತೆ ಕೆಂಪುಮೆಣಸು ಮತ್ತು ಹುಣಸೆ ಹುಳಿ ಹಾಕಿ ಮಿಕ್ಸಿಯಲ್ಲಿ ನಯವಾಗಿ ಕಡೆಯಬೇಕು.
  • ಬೆಂದ ಕಾಳು ಮತ್ತು ತರಕಾರಿಯನ್ನು ಒಟ್ಟಿಗೆ ಒಂದು ಪಾತ್ರೆಗೆ ಹಾಕಿ, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಒಂದು ಕುದಿ ಬಂದಮೇಲೆ ಕಡೆದಿಟ್ಟ ಮಸಾಲೆ ಹಾಕಿ ಕುದಿಸಬೇಕು. (ಕಾಳು ಬೇಯಿಸಿದ ನೀರು ಜಾಸ್ತಿ ಇದ್ದರೆ ಸ್ವಲ್ಪ ನೀರನ್ನು ತೆಗೆದಿಟ್ಟು, ಮಸಾಲೆ ಬೆರೆಸಿದ ಮೇಲೆ ನಮಗೆ ಎಷ್ಟು ಬೇಕೋ ಅಷ್ಟನ್ನು ಬಳಸಬಹುದು.)
  • ಒಂದು ಟೇಬಲ್ ಚಮಚ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಕೆಂಪಗೆ ಹುರಿದು ಕುದಿಯುವ ಗಸಿಗೆ ಒಗ್ಗರಣೆ ಹಾಕಬೇಕು. ಮಸಾಲೆ ಚನ್ನಾಗಿ ಬೇಯುವವರೆಗೂ ಕುದಿಸಬೇಕು. ಗಸಿ ತಯಾರು. 

 





ಬಗೆ ೨
ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
 
 ಬೇಕಾಗುವ ಪದಾರ್ಥಗಳು:
 
ಟರ್ಕಿ ಖೀಮಾ: ೧ ಪೌಂಡ್

ಈರುಳ್ಳಿ: ೧ ಮಧ್ಯಮ ಗಾತ್ರದ್ದು, ಸಣ್ಣಗೆ ಹೆಚ್ಚಿದ್ದು

ಟೊಮ್ಯಾಟೋ: ೨ ದೊಡ್ಡದು, ಸಣ್ಣಗೆ ಹೆಚ್ಚಿದ್ದು

ಹಸಿ ಬಟಾಣಿ: ೧/೨ ಬಟ್ಟಲು (ಹಸಿಯದನ್ನು ಸ್ವಲ್ಪ ಬೇಯಿಸಿಕೊಳ್ಳಿ, ಫ಼್ರೋಜನ್ ಉಪಯೋಗಿಸಿವುದಾದರೆ ಸಾಧಾರಣ ಉಷ್ಣತೆಗೆ ತಂದುಕೊಳ್ಳಿ)

ಹಸಿಮೆಣಸಿನ ಕಾಯಿ: ೨-೩ ಸೀಳಿದ್ದು (ಖಾರಕ್ಕೆ ತಕ್ಕಷ್ಟು)

ಶುಂಟಿ ಬೆಳ್ಳುಳ್ಳಿ ಪೇಸ್ಟ್: ೧ ಚಮಚ

ಕೆಂಪು ಮೆಣಸಿನ ಪುಡಿ: ೧/೨ ಚಮಚ

ಕಾಳು ಮೆಣಸಿನ ಪುಡಿ: ೧/೪ ಚಮಚ

ಗರಮ್ ಮಸಾಲೆ: ೧/೪ ಚಮಚ

ಕಸೂರಿ ಮೇಥಿ: ೧/೨ ಚಮಚ

ಅರಿಶಿನ:೧/೨ ಚಮಚ

ಕೊತ್ತಂಬರಿ ಸೊಪ್ಪು: ೪-೫ ಎಳೆ (ಸಣ್ಣಗೆ ಕತ್ತರಿಸಿದ್ದು)

ನಿಂಬೆಹುಳಿ: ೩ ಚಮಚ

ಎಣ್ಣೆ: ೩-೪ ಚಮಚ

ಉಪ್ಪು: ರುಚಿಗೆ ತಕ್ಕಷ್ಟು
 
 
~
 
 
 

 

ಬಗೆ ೨

ಟರ್ಕಿ ಖೀಮಾ ಪಲ್ಯ

 

ವಿಧಾನ:
  • ಟರ್ಕಿ ಖೀಮಾವನ್ನು ಅರಿಶಿನದ ಪುಡಿ ಉದುರಿಸಿ ಸ್ವಲ್ಪ ತೊಳೆದುಕೊಳ್ಳಿ.
  • ಒಂದು ದಪ್ಪ ತಳದ, ಅಗಲ ಬಾಯಿಯ ಪಾತ್ರೆಯಲ್ಲಿ ಎಣ್ಣೆ ಕಾಯಿಸಿ, ಈರುಳ್ಳಿಯನ್ನು ಮೆತ್ತಗಾಗುವಷ್ಟು ಹುರಿದುಕೊಳ್ಳಿ.
  • ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿಗಳನ್ನು ಸೇರಿಸಿ ಹುರಿಯಿರಿ.
  • ಬಟಾಣಿಯನ್ನು ಸೇರಿಸಿ ಒಂದೆರಡು ಬಾರಿ ಬೆರೆಸಿ.
  • ಈಗ ಖೀಮಾವನ್ನು ನಿಧಾನಕ್ಕೆ ಉದುರುದುರಾಗುವಂತೆ ಬಿಡಿಸಿ ಬಾಣಲಿಗೆ ಸೇರಿಸಿ. ಚನ್ನಾಗಿ ಕಲೆಸಿ ಹುರಿಯಿರಿ.
  • ಖೀಮಾ ಗಂಟಿಲ್ಲದಂತಾದ ಮೇಲೆ ಅದಕ್ಕೆ ಟೊಮ್ಯಾಟೋ ಮತ್ತು ಉಳಿದ ಎಲ್ಲಾ ಮಸಾಲೆ ಪುಡಿಗಳನ್ನೂ ಸೇರಿಸಿ, ಚನ್ನಾಗಿ ಬೆರೆಸಿ. ಇದಕ್ಕೆ ಅರ್ಧ ಲೋಟ ನೀರು ಮತ್ತು ಉಪ್ಪು ಹಾಕಿ ಪಾತ್ರೆಗೆ ಮುಚ್ಚಳ ಹಾಕಿ ೮-೧೦ ನಿಮಿಷ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ.
  • ಆಗಾಗ ನೀರಿನ ಪ್ರಮಾಣವನ್ನು ನೋಡುತ್ತಿರಿ. ಖೀಮಾ ಬೇಯದಿದ್ದಾಗ ಮತ್ತಷ್ಟು ನೀರು ಸೇರಿಸಿ, ಮುಚ್ಚಳ ಮುಚ್ಚಿ ಬೇಯಿಸಿ.
  • ಖೀಮಾ ಮತ್ತು ಮಸಾಲೆ ಚನ್ನಾಗಿ ಬೆಂದಿದೆ ಎನಿಸಿದಾಗ ಸ್ಟವ್ ಆರಿಸಿ ಅದಕ್ಕೆ ನಿಂಬೆಹುಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  • ಇದನ್ನು ಚಪಾತಿ, ದೋಸೆ, ಬ್ರೆಡ್, ಪೀಟಾ ಬ್ರೆಡ್ ಅಥವಾ ಅನ್ನದ ಜೊತೆಯಲ್ಲಿ ಸವಿಯಬಹುದು. ಚಪಾತಿ, ಟಾರ್ಟಿಯಾಗಳನ್ನು ರೋಲ್ ಮಾಡಲು ಸ್ಟಫಿಂಗ್ ಆಗಿಯೂ ಬಳಸಬಹುದು.

 





 
 
 
 
 
Copyright © 2011 Neemgrove Media
All Rights Reserved