-
ಪೀಜ಼್ಜಾ ಬೇಸ್: ಗೋಧಿ ಹಿಟ್ಟು, ಉಪ್ಪು, ಎಣ್ಣೆ, ಹಾಲು, ಇವನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಕಲೆಸಿಕೊಳ್ಳಿ. ಇದಕ್ಕೆ ಸಾಕಾಗುವಷ್ಟು ಬಿಸಿನೀರು ಸೇರಿಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಹದಕ್ಕೆ ಬರುವಂತೆ ಕಲೆಸಿ, ಹಿಟ್ಟನ್ನು ಚನ್ನಾಗಿ ನಾದಿಟ್ಟುಕೊಳ್ಳಿ. ಇದನ್ನು ಸ್ವಲ್ಪ ಹೊತ್ತು ಮುಚ್ಚಿಟ್ಟು ನೆನೆಯಲು ಬಿಡಿ.
-
ಕುಕ್ಕರಿನಲ್ಲಿ ಟೊಮ್ಯಾಟೋ, ಹಸಿಮೆಣಸಿನಕಾಯಿಗಳನ್ನು ೧೦ ನಿಮಿಷ ಬೇಯಿಸಿಕೊಳ್ಳಿ. ಅಥವಾ ೭-೮ ನಿಮಿಷ ಮೈಕ್ರೋವೇವ್ ಮಾಡಿಕೊಳ್ಳಿ.
-
ಇವನ್ನು ಬ್ಲೆಂಡರ್ ನಲ್ಲಿ ೧ ನಿಮಿಷ ಸಣ್ಣ ಮಾಡಿಕೊಳ್ಳಿ.
-
ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ೧ ಚಮಚ ಎಣ್ಣೆ ಹಾಕಿ.
-
ಎಣ್ಣೆ ಕಾದಮೇಲೆ ರುಬ್ಬಿಕೊಂಡ ಟೊಮ್ಯಾಟೋ-ಹಸಿಮೆಣಸಿನ ಮಿಶ್ರಣ ಹಾಕಿ ಸ್ವಲ್ಪ ಫ಼್ರೈ ಮಾಡಿ.
-
ಅದಕ್ಕೆ ಗರಂ ಮಸಾಲೆ, ಶುಂಠಿ ಬೆಳ್ಳುಳ್ಳಿಯ ಪೇಸ್ಟ್, ಅರಿಸಿನ ಮತ್ತು ಸ್ವಲ್ಪ ಉಪ್ಪು (ಉಪ್ಪನ್ನು ಪೀಜ಼್ಜಾ ಬೇಸ್ ಗೂ ಹಾಕಿರುವುದರಿಂದ ನೋಡಿಕೊಂಡು ಹಾಕಿ). ಹಾಕಿ.
-
ಈ ಮಸಾಲೆಯ ಹಸಿ ವಾಸನೆ ಹೋಗುವವರೆಗೂ ಅಂದರೆ ೭-೮ ನಿಮಿಷ ಪಾತ್ರೆಯ ಮುಚ್ಚಳ ಹಾಕದೆ ಫ್ರೈ ಮಾಡಿಕೊಳ್ಳಿ.
-
ಬೆಂದ ತಕ್ಷಣ ಒಲೆ ಆರಿಸಿ ಇದನ್ನು ತಣ್ಣಗಾಗಲು ಬಿಡಿ.
-
ಮಾಡಿಟ್ಟ ಚಪಾತಿ ಹಿಟ್ಟನ್ನು ಚಪಾತಿಯನ್ನು ಲಟ್ಟಿಸುವುದಕ್ಕಿಂತ ಮೂರು ಪಟ್ಟು ದಪ್ಪಗೆ ಮತ್ತು ಅಗಲವಾಗಿ ವೃತ್ತಾಕಾರಕ್ಕೆ ಒತ್ತಿಟ್ಟುಕೊಳ್ಳಿ.
-
ತವೆಯನ್ನು ಒಲೆಯ ಮೇಲೆ ಬಿಸಿಗಿಟ್ಟು, ಈ ಚಪಾತಿಯನ್ನು ಎರಡೂ ಬದಿ ೨-೩ ನಿಮಿಷ ಬೇಯಿಸಿಕೊಳ್ಳಿ (ತುಂಬಾ ಬೇಯಿಸುವ ಅಗತ್ಯವಿಲ್ಲ).
-
ಈಗ ಬೇಕಿಂಗ್ ಅವನ್ ಅನ್ನು ೪೪೦ ಡಿಗ್ರಿ ಉಷ್ಣತೆಗೆ ಪ್ರಿಹೀಟ್ ಮಾಡಲು ಆನ್ ಮಾಡಿ.
-
ಪೀಜ಼್ಜಾ ಬೇಸ್ ತಯಾರಾಗುವ ಹೊತ್ತಿಗೆ ಸಾಸ್ ತಣ್ಣಗಾಗಿರುತ್ತದೆ.
-
ಬೇಸ್ ಅನ್ನು ಪೀಜ಼್ಜಾ ಕಲ್ಲು (ಅಂಗಡಿಗಳಲ್ಲಿ ಸಿಗುವ ಬಳಪದ ಕಲ್ಲಿನ ಪೀಜ಼್ಜಾ ಸ್ಟೋನ್) ಅಥವಾ ಬೇಕಿಂಗ್ ಪ್ಯಾನ್ (ಬೇಕಿಂಗ್ ಪ್ಯಾನ್ ಮೇಳಿಡುವ ಮುನ್ನ ಒಂದು ಪಾರ್ಚ್ಮೆಂಟ್ ಪೇಪರ್ ಬಳಸಿ) ಮೇಲಿಟ್ಟು
-
ಈ ಬೇಸ್ ನ ಮೇಲೆ ಕಾಲು ಚಮಚ ಎಣ್ಣೆ ಸವರಿಕೊಳ್ಳಿ.
-
ಇದರ ಮೇಲೆ ಒಂದು ಪದರ ಈಗಷ್ಟೆ ಮನೆಯಲ್ಲಿ ತಯಾರಿಸಿದ ಟೊಮ್ಯಾಟೋ ಸಾಸ್ ಅನ್ನು ಹರಡಿಕೊಳ್ಳಿ. 
-
ಇದರ ಮೇಲೆ ಸ್ವಲ್ಪ ಚೀಸ್ ತುರಿಯನ್ನು ಉದುರಿಸಿ.
-
ನಂತರ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಉದುರಿಸಿ, ಬೇಸ್ ನ ಎಲ್ಲ ಭಾಗಕ್ಕೂ ಸಮನಾಗಿ ಹರಡಿ.
-
ಇವುಗಳ ಮೇಲೆ ಮತ್ತಷ್ಟು ಚೀಸ್ ತುರಿಯನ್ನು ಉದುರಿಸಿಕೊಳ್ಳಿ.
-
ಎಲ್ಲವನ್ನೂ ಹರಡಿಯಾದ ಮೇಲೆ ಪೀಜ಼್ಜಾ ಕಲ್ಲನ್ನು ಅಥವಾ ಬೇಖಿಂಗ್ ಪ್ಯಾನ್ ಅನ್ನು ಅವನ್ ನ ಮಧ್ಯ ಭಾಗಕ್ಕೆ ಜೋಪಾನವಾಗಿಡಿ.
-
ಅವನ್ ಉಷ್ಣತೆಯನ್ನು ಈಗ ೪೦೦ ಡಿಗ್ರಿ ಗೆ ಕಡಿಮೆ ಮಾಡಿ. ೮-೧೦ ನಿಮಿಷ ಬೇಯಲು ಬಿಡಿ.
-
ಬೇಸ್ ಅನ್ನು ತೆಳುವಾಗಿ ಮಾಡಿದ್ದರೆ ೬-೭ ನಿಮಿಷಕ್ಕೇ ತೆಗೆದುಬಿಡಿ. (ಬೇಸ್ ಅನ್ನು ತೆಳು ಮಾಡಿಕೊಂದಷ್ಟೂ ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಆಗ ಬೇಸ್ ಬೇಯುವಷ್ಟರಲ್ಲಿ ತರಕಾರಿಗಳೂ ಬೆಂದಿರುತ್ತವೆ) ಪೀಜ಼್ಜಾ ಬೇಸ್ ಅನ್ನು ಮನೆಯಲ್ಲೇ ಮಾಡಿಕೊಂಡಿರುವುದರಿಂದ ಪೀಜ಼್ಜಾ ಬೇಯಲು ಹೆಚ್ಚು ಸಮಯ ತಾಕುವುದಿಲ್ಲ.
ವಿ.ಸೂ: ಒಟ್ಟಿಗೇ ೨-೩ ಪೀಜ಼್ಜಾ ಬೇಸ್ ಗಳನ್ನು ಒಟ್ಟಿಗೆ ಮಾಡಿಟ್ಟುಕೊಂಡರೆ ಶ್ರಮ ಮತ್ತು ಸಮಯದ ಉಳಿತಾಯ ಆಗುತ್ತದೆ. ವಾರದಲ್ಲಿ ೨-೩ ಬಾರಿ ನಿಮಗಿಷ್ಟದ ತರಕಾರಿಗಳನ್ನು ಬಳಸಿ ಧಿಡೀರ್ ಪೀಜ಼್ಜಾ ಮಾಡಿಕೊಳ್ಳಬಹುದು. ಹಾಗೆ ಪಿಜ್ಜಾ ಗೆ ನಿಮಗಿಷ್ಟವಾದ ಹಲವಾರು ತರಕಾರಿಗಳ ಕಾಂಬಿನೇಶನ್ ಅನ್ನು ಬಳಸಬಹುದು.