ಅಂಗಳ      ಬಗೆ ಬಗೆ
Print this pageAdd to Favorite

 


 ಬೇಕಾಗುವ ಪದಾರ್ಥಗಳು:
ಬೆಂಡೆಕಾಯಿ-ಕಾಲು ಕೆಜಿ, ಹೋಳು ಮಾಡಿದ್ದು

ಸಾಸಿವೆ-ಕಾಲು ಟೀ ಸ್ಪೂನ್ ಗಿಂತಲೂ ಕಮ್ಮಿ

ಜೀರಿಗೆ-ಕಾಲು ಟೀ ಸ್ಪೂನ್

ಆಮ್ ಚೂರ್ ಪುಡಿ-ಕಾಲು ಟೀ ಸ್ಪೂನ್

ಕಾಳು ಮೆಣಸಿನ ಪುಡಿ-ಕಾಲು ಟೀ ಸ್ಪೂನ್

ಕೆಂಪು ಮೆಣಸಿನಕಾಯಿ ಪುಡಿ-ಕಾಲು ಟೀ ಸ್ಪೂನ್

ಗರಮ್ ಮಸಾಲಾ-ಒಂದು ಪಿಂಚ್

ವಿನೇಗರ್-೨ ಟೀ ಸ್ಪೂನ್

ಎಣ್ಣೆ-೩ ಟೀ ಸ್ಪೂನ್

ಉಪ್ಪು-ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು-ಎರಡು ಕಡ್ಡಿ, ಸಣ್ಣಗೆ ಕತ್ತರಿಸಿದ್ದು
 
 
 

 

ಬಗೆ-೧
ಧಿಡೀರ್ ಬೆಂಡೆಕಾಯಿ ಡ್ರೈ ಪಲ್ಯ
 
 
ವಿಧಾನ:
 • ಬಾಣಲಿ ಅಥವಾ ಪ್ಯಾನ್ ನಲ್ಲಿ ಮೀಡಿಯಂ ಉರಿಯಲ್ಲಿ ಎಣ್ಣೆ ಕಾಯಲು ಇಡಿ.
 • ಎಣ್ಣೆ ಕಾದಾಗ ಸಾಸಿವೆ ಹಾಕಿ ಸಿಡಿಸಿ, ಜೀರಿಗೆ ಸೇರಿಸಿ ಒಂದೆರಡು ಬಾರಿ ಕಲಕಿ.
 • ಜೀರಿಗೆಯನ್ನು ಹೆಚ್ಚು ಬೇಯಲು ಬಿಡದೆ ಬೆಂಡೆಕಾಯಿಯ ಹೋಳುಗಳನ್ನು ಸೇರಿಸಿ ಕೈ ಆಡಿಸಿ.
 • ಇದಕ್ಕೆ ವಿನೇಗರ್ ಮತ್ತು ಉಳಿದೆಲ್ಲ (ಉಪ್ಪನ್ನು ಬಿಟ್ಟು) ಮಸಾಲೆ ಸೇರಿಸಿ, ಒಂದೆರಡು ಬಾರಿ ಕೈಯ್ಯಾಡಿ ಸ್ವಲ್ಪ ನೀರು ಸೇರಿಸಿ.
 • ವಿನೇಗರ್ ಹಾಕಿದ ತಕ್ಷಣ ಬೆಂಡೆಕಾಯಿಯ ಲೋಳೆ ಕಡಿಮೆಯಾಗುತ್ತದೆ.
 • ಈಗ ಬಾಣಲಿಯನ್ನು ಮುಚ್ಚಿ ಉರಿಯನ್ನು ಸ್ವಲ್ಪ ಎತ್ತರಿಸಿ ಬೆಂಡೆಕಾಯನ್ನು ಬೇಯಲು ಬಿಡಿ.
 • ೪-೫ ನಿಮಿಷಗಳ ನಂತರ ಮುಚ್ಚಳ ತೆಗೆದು ಬೆಂಡೆಕಾಯಿ ಅರ್ಧಕ್ಕೆ ಬೆಂದಂತಾಗಿದ್ದರೆ ಉಪ್ಪು ಸೇರಿಸಿ ಮತ್ತೆ ೨ ನಿಮಿಷ ಬೇಯಲು ಬಿಡಿ.
 • ಈಗ ಮುಚ್ಚಳ ತೆಗೆದು ಬೆಂಡೆಕಾಯಿಯನ್ನು ೨ ನಿಮಿಷ ತೆರೆದ ಬಾಣಲಿಯಲ್ಲಿ ಹುರಿಯಿರಿ.
 • ಸ್ಟವ್ ಆರಿಸಿ ಕೊತ್ತಂಬರಿ ಚೂರುಗಳನ್ನು ಉದುರಿಸಿ, ಬಿಸಿಯಿರುವಾಗಲೇ ಚಪಾತಿ ಅಥವಾ ರೊಟ್ಟಿಯೊಂದಿಗೆ ಬಳಸಿ.  
 
 
ಬಗೆ ೨
ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
 
 ಬೇಕಾಗುವ ಪದಾರ್ಥಗಳು:
 

ಚಿಕನ್ ಬ್ರಾತ್/ತರಕಾರಿ ಬೇಯಿಸಿದ ನೀರು/ಬರಿಯ ನೀರು-೧ ೧/೨ ಲೀಟರ್ನಷ್ಟು

ಕ್ಯಾರೆಟ್-೧ ಸಣ್ಣ ಬಟ್ಟಲು, ಹೆಚ್ಚಿದ್ದು

ಬ್ರಾಕ್ಲಿ-೧ ಸಣ್ಣ ಬಟ್ಟಲು, ಹೆಚ್ಚಿದ್ದು

ಹಳದಿ ಸ್ಕ್ವಾಶ್-೧ ಸಣ್ಣ ಬಟ್ಟಲು, ಹೆಚ್ಚಿದ್ದು

ಸೆಲರಿ-೧/೨ ಬಟ್ಟಲು, ಹೆಚ್ಚಿದ್ದು

ಈರುಳ್ಳಿ ಎಲೆ-೧ ಟೀ ಚಮಚ, ಸಣ್ಣಗೆ ಹೆಚ್ಚಿದ್ದು

ಕೊತ್ತಂಬರಿ ಸೊಪ್ಪು-೧ ಟೀ ಚಮಚ, ಸಣ್ಣಗೆ ಹೆಚ್ಚಿದ್ದು

ಕಾಳು ಮೆಣಸು-ಕಾಲು ಟೀ ಚಮಚ

ಬೆಳ್ಳುಳ್ಳಿ-೩ ಮೊಗ್ಗು (ಜಜ್ಜಿದ್ದು)

ಎಣ್ಣೆ-ಅರ್ಧ ಟೀ ಚಮಚ (ಒಂದೆರಡು ತೊಟ್ಟು ಸಾಕು)

ನಿಂಬೆಹಣ್ಣಿನ ರಸ-೩ ಈ ಚಮಚ

ಅರಿಸಿನ-೧/೪ ಚಿಟಿಕೆ

ಅಜ್ವೈನ್ ಪುಡಿ-೧/೪ ಚಿಟಿಕೆ

ಉಪ್ಪು-ರುಚಿಗೆ ತಕ್ಕಷ್ಟು


 
 
 
 

 

ಚಳಿಗಾಲಕ್ಕೆ ಸರಳ ಸೂಪ್
 

ವಿಧಾನ:
 • ಪಾತ್ರೆಯೊಂದನ್ನು ಸ್ಟವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಕಾದಮೇಲೆ ಎಣ್ಣೆಗೆ ಜಜ್ಜಿಟ್ಟುಕೊಂಡ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ಈ ಪಾತ್ರೆಗೆ ತರಕಾರಿ ಬೇಯಿಸಿದ ನೀರು ಅಥವಾ ಬರಿಯ ನೀರನ್ನು ಹಾಕಿ (ಮಾಂಸಾಹಾರಿಗಳು ಚಿಕನ್ ಬ್ರಾತ್ ಅನ್ನು ಬಳಸಬಹುದು, ಇದು ನೆಗಡಿ, ಗಂಟಲು ನೋವು ಮತ್ತು ಕಫಕ್ಕೆ ಹಿತಕಾರಿಯಾಗಿರುತ್ತದೆ). ನೀರನ್ನು ಸ್ವಲ್ಪ ಬಿಸಿಯಾಗಲು ಬಿಡಿ.
 • ಹೆಚ್ಚಿಟ್ಟುಕೊಂದ ತರಕಾರಿಗಳನ್ನು ಗಾತ್ರದ ಅನುಗುಣವಾಗಿ ದಪ್ಪ-ಗಟ್ಟಿಇರುವ ತರಕಾರಿಯನ್ನು ಮೊದಲು ಮಾಡಿ ಒಂದೊಂದನ್ನೇ ೨-೩ ನಿಮಿಷಗಳ ಅಂತರದಲ್ಲಿ ನೀರಿಗೆ ಹಾಕುತ್ತಾ ಬನ್ನಿ. ಹೀಗೆ ಮಾಡುವುದರಿಂದ ಸಣ್ಣ ಮತ್ತು ನೀರಿನಾಂಶ ಹೆಚ್ಚಿರುವ ತರಕಾರಿಗಳು ಹೆಚ್ಚು ಬೆಂದು ನೀರಿನಲ್ಲಿ ಕಲೆಸಿಹೋಗುವುದು ತಪ್ಪುತ್ತದೆ.
 • ನಂತರ ಆ ನೀರಿಗೆ ಮೆಣಸಿನ ಪುಡಿ, ಅರಿಸಿನ, ಅಜವೈನ್ ಪುಡಿ ಸೇರಿಸಿ ಕುದಿಯಲು ಬಿಡಿ.
 • ತರಕಾರಿಗಳು ಬೆಂದಿವೆ ಎನಿಸಿದಾಗ (ಮೆತ್ತಗಾಗಬಾರದು) ಉಪ್ಪನ್ನು ಸೇರಿಸಿ.
 • ಕಡೆಯದಾಗಿ ಈರುಳ್ಳಿ ಎಲೆಯನ್ನು ಸೇರಿಸಿ ಎರಡು ನಿಮಿಷ ಕುದಿಸಿ, ಸ್ಟವ್ ಆರಿಸಿ.
 • ಸ್ಟವ್ ಆರಿಸಿಯಾದಮೇಲೆ ಕೊತ್ತಂಬರಿ ಎಲೆ ಮತ್ತು ನಿಂಬೆರಸ ಉದುರಿಸಿ. ಬಿಸಿ ಬಿಸಿ ಸೇವಿಸಿ. (ಇದು ಹೆಚ್ಚು ಮಸಾಲೆಯಿಲ್ಲದೆ ಜೀರ್ಣಕ್ಕಾಗಿ ಮತ್ತು ಶೀತಬಾಧೆಯಿಂದ ತಪ್ಪಿಸಿಕೊಳ್ಳಲು ಮಾಡಬಹುದಾದ ಸೂಪ್)
 • (ದಪ್ಪ ಮೆಣಸಿನಕಾಯಿ, ಹುರುಳಿಕಾಯಿ, ಹೂ ಕೋಸು, ಸಣ್ಣ ಈರುಳ್ಳಿ ಇತ್ಯಾದಿ ತರಕಾರಿಗಳನ್ನೂ ಬಳಸಬಹುದು)

 
 
 
 
 
Copyright © 2011 Neemgrove Media
All Rights Reserved