ಬೇಕಾಗುವ ಪದಾರ್ಥಗಳು:
ಎಳೆಯ ಹಲಸಿನಕಾಯಿ-ಒಂದು
ಕೆಂಪು ಮೆಣಸಿನಕಾಯಿ-೨೫
ಅಕ್ಕಿ-ಒಂದು ಕಪ್
ಕೊತ್ತಂಬರಿ ಬೀಜ (ಧನಿಯಾ)-ಒಂದು ಟೇಬಲ್ ಚಮಚ
ಇಂಗು-ಒಂದು ಕಡಲೆ ಕಾಳಿನಷ್ಟು
ಹುಣಸೆ ಹುಳಿ-ಕಾಲು ಟೀ ಚಮಚ
ಉಪ್ಪು-ರುಚಿಗೆ ಬೇಕಾದಷ್ಟು
ಎಣ್ಣೆ-ಅರ್ಧ ಲೀಟರ್
 
ವಿ.ಸೂ-ಕರಿಯಲು ಉಪಯೋಗಿಸುವ ಹಲಸಿನ ಕಾಯಿ ತುಂಬಾ ಎಳತಾಗಿರಬಾರದು. ಒಳಗಡೆ ಸ್ವಲ್ಪವಾದರೂ ಬೀಜ ಬೆಳೆದಿರಬೇಕು. ಒಂದು ಪುಟ್ಟ ಹಲಸಿನ ಕಾಯಿಯಲ್ಲಿ ೨೫-೩೦ ಹೋಳುಗಳಾದರೂ ಆಗುತ್ತವೆ.
 

 

ಬಗೆ ೧
ಎಳತು ಹಲಸಿನಕಾಯಿಯ ಪೋಡಿ
ಶ್ರೀಮತಿ ವೀಣಾ ಕಾಮತ್, ಮಂಗಳೂರು
ವಿಧಾನ:
 • ಮೊದಲು ಅಕ್ಕಿಯನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು.
 • ಹಲಸಿನ ಕಾಯಿಯ ಮೇಲಿನ ಮುಳ್ಳು ಸಿಪ್ಪೆಯನ್ನು ಹೆರೆದು ಅದನ್ನು ೩-೪ ಇಂಚು ಅಗಲದ ತೆಳುವಾದ ಹೋಳುಗಳಾಗಿ ಹೆಚ್ಚಿಟ್ಟುಕೊಳ್ಳಬೇಕು.
 • ಮಿಕ್ಸಿಯಲ್ಲಿ ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಇಂಗು, ಹುಳಿ, ಉಪ್ಪು ಹಾಕಿ ಒಮ್ಮೆ ಸ್ವಲ್ಪ ಹುಡಿ ಮಾಡಿಕೊಳ್ಳಬೇಕು.
 • ನಂತರ ನೆನೆಸಿಟ್ಟ ಅಕ್ಕಿಯನ್ನು ಬಸಿದಿಟ್ಟುಕೊಂಡು, ಮೇಲೆ ತಿಳಿಸಿದ ಮಸಾಲೆಗಳ ಮಿಶ್ರಣಕ್ಕೆ ತೊಳೆದ ಅಕ್ಕಿ ಮತ್ತು ಸ್ವಲ್ಪ ನೀರನ್ನು ಸೇರಿಸಿ ಹಾಕಿ ಪೇಸ್ಟಿನ ಥರ ಕಡೆದು (ರುಬ್ಬಿ) ಕೊಳ್ಳಬೇಕು.
 • ಹೀಗೆ ರುಬ್ಬುವ ಮಸಾಲೆ ಅತಿಯಾಗಿ ನಯವಾಗದೆ ಸ್ವಲ್ಪ ತರಿತರಿಯಾಗಿರಬೇಕು. ಮಸಾಲೆ ಜಾಸ್ತಿ ನೀರಾಗಿಯೂ ಇರಬಾರದು.
 • ಈ ಮಸಾಲೆಯನ್ನು ಹಲಸಿನ ಕಾಯಿಯ ಹೋಳುಗಳಿಗೆ ಚನ್ನಾಗಿ ಬೆರೆಸಿ ಹಚ್ಚಿಡಬೇಕು.
 • ಅಗಲ ಬಾಯಿಯ ಕಾವಲಿಯಲ್ಲಿ ಎಣ್ಣೆ ಇಟ್ಟು, ಎಣ್ಣೆ ಹದವಾಗಿ ಬಿಸಿಯಾದ ಮೇಲೆ ಮಸಾಲೆ ಹಚ್ಚಿದ ಹಲಸಿನ ಹೋಳುಗಳನ್ನು ಎಣ್ಣೆಗೆ ಬಿಟ್ಟು ಚನ್ನಾಗಿ ಕರಿದು ತೆಗೆಯಬೇಕು.
 • ಗರಿಗರಿಯಾದ ಪೋಡಿಯನ್ನು ವಡೆ ಬಜ್ಜಿಗಳಂತೆ ತಿನ್ನಬಹುದು.


ಬಗೆ ೨
ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
 
 ಬೇಕಾಗುವ ಪದಾರ್ಥಗಳು:
 
ಕೋಳಿ-ಅರ್ಧ ಕೆಜಿ (ಚರ್ಮ ಮತ್ತು ಮೂಳೆ ಇಲ್ಲದ್ದು) 
ಬ್ರಾಕ್ಲಿ ಫ್ಲೋರೆಟ್ಸ್-ಒಂದು ಬಟ್ಟಲು
ಆಸ್ಪರಾಗಸ್ ಚಿಗುರುಗಳು-ಒಂದು ಬಟ್ಟಲು

ಬೆಳ್ಳುಳ್ಳಿ-೩೦ ಹಿಕಳು (ದೊಡ್ಡವು)
ಕೆಂಪು ಮೆಣಸಿನಕಾಯಿ-೩೫
ಸೋಯಾ ಸಾಸ್-೨ ಟೇಬಲ್ ಚಮಚ
ಸಕ್ಕರೆ-ಒಂದು ಟೀ ಚಮಚ
ಬಿಳಿ ಎಳ್ಳು-ಅರ್ಧ ಟೀ ಚಮಚ
ಅಡಿಗೆ ಎಣ್ಣೆ-ಒಂದು ಟೇಬಲ್ ಚಮಚ
 
ವಿ.ಸೂ-ಹೆಚ್ಚು ಖಾರ ಇಷ್ಟ ಪಡುವವರು ಇನ್ನಷ್ಟು ಕೆಂಪು ಮೆಣಸಿನ ಕಾಯಿಯನ್ನು ಬಳಸಬಹುದು.
 

 

ಬಗೆ ೨

ಬ್ರಾಕ್ಲಿಯೊಂದಿಗಿನ ಬೆಳ್ಳುಳ್ಳಿ ಚಿಕನ್
(ಮೂಲ: ಥಾಯಿಲ್ಯಾಂಡ್)
ವಿಧಾನ:
 • ಕೋಳಿಯನ್ನು ಸಣ್ಣ ಸಣ್ಣ ಕ್ಯೂಬ್ ಗಳಾಗಿ ಕತ್ತರಿಸಿಕೊಳ್ಳಿ.
 • ಬೆಳ್ಳುಳ್ಳಿ ಹಿಕಳುಗಳ ಸಿಪ್ಪೆ ಬಿಡಿಸಿ, ಬಹಳ ಸಣ್ಣ ಸಣ್ಣ ಚೂರುಗಳಾಗಿ ಹೆಚ್ಚಿಟ್ಟುಕೊಳ್ಳಿ.
 • ಕೆಂಪು ಮೆಣಸಿನಕಾಯಿಯನ್ನು ಮಿಕ್ಸಿ ಅಥವಾ ಡ್ರೈ ಗ್ರೈಂಡರ್ ಗೆ ಹಾಕಿ ತರಿ ತರಿ ಪುಡಿ ಮಾಡಿಕೊಳ್ಳಿ.
 • ಬ್ರಾಕ್ಲಿ ಮತ್ತು ಆಸ್ಪರಾಗಸ್ ಅನ್ನು ಮೈಕ್ರೋವೇವ್ ನಲ್ಲಿಟ್ಟು ೨-೩ ನಿಮಿಷ (ಕುರುಮ್ ಕುರುಮ್) ಇರುವಂತೆಯೇ ಬೇಯಿಸಿಕೊಳ್ಳಿ. ಕುಕ್ಕರಿನಲ್ಲಾದರೂ ೨-೩ ನಿಮಿಷ ಬೇಯಿಸಿಕೊಳ್ಳಿ.ಈ ಎರಡೂ ತರಕಾರಿಗಳಿಗೆ ಬೇಯಲು ಹೆಚ್ಚು ಸಮಯ ಬೇಕಾಗುವುದಿಲ್ಲ.

 • ಅಗಲ ಬಾಯಿಯ ವೋಕ್ ಮಾದರಿಯ ಬಾಣಲೆಗೆ ಎಣ್ಣೆ ಹಾಕಿ, ಅದನ್ನು ಹೆಚ್ಚಿನ ಉರಿಯಲ್ಲಿ ಒಲೆಯ ಮೇಲಿಡಿ.
 • ಎಣ್ಣೆ ಕಾಯುತ್ತಿದ್ದಂತೆಯೇ ಹೆಚ್ಚಿಟ್ಟುಕೊಂಡ ಬೆಳ್ಳುಳ್ಳಿ ಮತ್ತಿ ತರಿ ತರಿ ಕೆಂಪುಮೆಣಸಿನಕಾಯಿಯ ಪುಡಿಯನ್ನು ಎಣ್ಣೆಗೆ ಹಾಕಿ.
 • ಅರ್ಧ ನಿಮಿಷ ಅದನ್ನು ಅಲ್ಲಾಡಿಸಿ.
 • ತಕ್ಷಣ ಕೊಳಿಯ ಚೂರುಗಳನ್ನು ಸೇರಿಸಿ.
 • ಹೆಚ್ಚಿನ ಉರಿಯಲ್ಲೇ ಬೆಳ್ಳುಳ್ಳಿ, ಕೆಂಪು ಮೆಣಸು ಮತ್ತು ಎಣ್ಣೆಯಲ್ಲಿ ಕೋಳಿಯನ್ನು ಹುರಿದುಕೊಳ್ಳಿ.
 • ಕೋಳಿಯ ಚೂರುಗಳು ಸಣ್ಣದ್ದಾಗಿರುವುದರಿಂದ ಐದು ನಿಮಿಷದಲ್ಲಿ ಕೋಳಿ ಬೇಯುತ್ತದೆ.
 • ಕೋಳಿಗೆ ಸೋಯಾ ಸಾಸ್ ಮತ್ತು ಸಕ್ಕರೆ ಸೇರಿಸಿ ಮತ್ತೆ ಹುರಿಯಿರಿ. ತಳ ಹತ್ತದಂತೆ ನೋಡಿಕೊಳ್ಳುತ್ತಿರಿ.
  ಮತ್ತೆ ಇದಕ್ಕೆ ಈಗಾಗಲೇ ಬೆಂದ ಬ್ರಾಕ್ಲಿ ಮತ್ತು ಆಸ್ಪರಾಗಸ್ ಚೂರುಗಳನ್ನು ಸೇರಿಸಿ ೨ ನಿಮಿಷ ಹುರಿಯಿರಿ.
 • ಎಳ್ಳು ಸೇರಿಸಿ, ಬೆರೆಸಿ, ಒಲೆ ಆರಿಸಿ.
  ಬಿಸಿ ಬಿಸಿ ಇರುವಾಗಲೇ ಅನ್ನ, ಚಪಾತಿಯೊಟ್ಟಿಗೆ ಅಥವಾ ಪ್ರತ್ಯೇಕ ಖಾದ್ಯವಾಗಿ ಸೇವಿಸಿ.
  (ಈ ಖಾದ್ಯ ೮ ರಿಂದ ೧೦ ನಿಮಿಷದಲ್ಲಿ ತಯಾರಾಗುತ್ತದೆ. ಇದನ್ನು ಹೆಚ್ಚು ಉರಿಯಲ್ಲಿಯೇ ತಯಾರಿಸಬೇಕು ಹಾಗೂ ಬಿಸಿ ಇರುವಂತೆಯೇ ಸೇವಿಸಬೇಕು).

 


 
 
 
 
 
Copyright © 2011 Neemgrove Media
All Rights Reserved