ಹೊಸ ರೂಪ ಹೊಸ ಹರುಷ
ಮೊಳೆತಷ್ಟು ಪ್ರತಿ ವರುಷ
ಸಿಹಿ ಸಂತೆ ನಗೆ ಜಾತ್ರೆ
ಚಂದ ಬಣ್ಣದ ಬೆಳಕು
ಮೊಗೆ ಮೊಗೆದು ಸವಿಯೋಕೆ
ಬದುಕು ಬತ್ತದ ಬಾವಿ
ಹೆಣೆ ಹೆಣೆದು ಕಟ್ಟೋಕೆ
ಕನಸು ಕರಗದ ಕಣ್ಣು
ಅಡಿಗಡಿಗೆ ಹೊಸ ಹುಲ್ಲು
ಪಯಣ ನಿಲ್ಲದ ಕವನ
ಪ್ರತಿದಿನಕು ಹೊಸ ನೋಟ
ಹಿಗ್ಗು ಸುರಿಯುವ ಬೆಳಕು
ತುಂಬಿಕೋ ಬೊಗಸೆಯನು
ಇಲ್ಲಿದೇ ಸುಗ್ಗಿ...
ಮೊಟ್ಟಮೊದಲ ಬಾರಿಗೆ!!!! ಅಂತರಾಷ್ಟ್ರೀಯ ಕನ್ನಡ ಓದುಗರಿಗೆ ಆಯಾಮದ ಹೊಸ ಕೊಡುಗೆ!
ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.