ಅಂಗಳ      ಬಗೆ ಬಗೆ
Print this pageAdd to Favorite
 


 ಬೇಕಾಗುವ ಪದಾರ್ಥಗಳು:

ಹುರಿಗಡಲೆ ಹಿಟ್ಟು-೧ ಕಪ್

ಸಕ್ಕರೆ-೧ ಕಪ್

ಒಣಕೊಬರಿ (ಪುಡಿ ಮಾಡಿದ್ದು)-೧/೨ ಕಪ್

ಒಣ ಶುಂಟಿ ಪುಡಿ-೧/೨ ಟೀ ಸ್ಪೂನ್

ಗಸಗಸೆ-೧ ಟೇಬಲ್ ಸ್ಪೂನ್ (ಸ್ವಲ್ಪ ಹುರಿದು ಪುಡಿ ಮಾಡಿದ್ದು)

ಏಲಕ್ಕಿ-೨ (ಪುಡಿ)

ಮೈದಾ ಹಿಟ್ಟು-೧ ಕಪ್

ಫೇಣಿ ರವೆ-೧ ಕಪ್

ತುಪ್ಪ-೨ ಸ್ಪೂನ್

ಹಾಲು-೧ ಲೋಟ

 

 

 
 
 
 
 

 

ಬಗೆ ೧

ಸುರುಳಿ ಕರ್ಜಿಕಾಯಿ

ಶ್ರೀಮತಿ ನಂದಿನಿ ಸಿದ್ದರಾಜ್, ಅಟ್ಲಾಂಟಾ

ವಿಧಾನ:
 • ಮೈದಾ ಹಿಟ್ಟು ಮತ್ತು ಫೇಣಿ ರವೆಯನ್ನು ೨ ಸ್ಪೂನ್ ತುಪ್ಪ ಮತ್ತು ಹಾಲಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ಈ ಹಿಟ್ಟನ್ನು ೨ ಗಂಟೆ ನೆನೆಯಲು ಬಿಡಿ.
 • ಹುರಿಗಡಲೆ ಹಿಟ್ಟು, ಸಕ್ಕರೆ, ಕೊಬರಿ ಪುಡಿ, ಏಲಕ್ಕಿಪುಡಿ, ಗಸಗಸೆ, ಒಣಶುಂಟಿ ಪುಡಿ ಇವೆಲ್ಲವನ್ನೂ ಒಂದು ಬಟ್ಟಲಿನಲ್ಲಿ ಬೆರೆಸಿ ಇಟ್ಟುಕೊಳ್ಳಿ.
 •  
 • ೨ ಗಂಟೆ ನೆನೆದ ಮೈದ-ಫೇಣಿ ರವೆ ಕಣಕವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ತೆಳ್ಳಗೆ ಉದ್ದಿ (ಲಟ್ಟಿಸಿ).
 •  
 • ಒಲೆಯ ಮೇಲೆ, ಮಧ್ಯಮ ಉರಿಯಲ್ಲಿ ಹೆಂಚನ್ನಿಟ್ಟುಕೊಳ್ಳಿ. ಹೆಂಚು ಬಿಸಿಯಾದ ಮೇಲೆ ತೆಳ್ಳಗೆ ಉದ್ದಿರುವ (ಲಟ್ಟಿಸಿರುವ) ಕಣಕದ (ಮೈದಾ-ಫೇಣಿ ರವೆಯ) ಎಲೆಯನ್ನು ಹೆಂಚಿನ ಮೇಲೆ ಹಾಕಿ ಎರಡೂ ಕಡೆಯನ್ನು ಸ್ವಲ್ಪ ಸ್ವಲ್ಪ ಬೇಯಿಸಿಕೊಂಡು ಅದು ಹೆಂಚಿನ ಮೇಲಿರುವಂತೆಯೇ ಅದರ ಮಧ್ಯಕ್ಕೆ ಹುರಿಗಡಲೆ-ಕೊಬರಿ-ಸಕ್ಕರೆ ಇತ್ಯಾದಿ ಪುಡಿಗಳ (ಕರ್ಜಿಕಾಯಿ) ಮಿಶ್ರಣವನ್ನು ೨ ಸ್ಪೂನ್ ನಷ್ಟು ಹಾಕಿ ಎಲೆಯನ್ನು ಎರಡೂ ಕಡೆ ಸುರುಳಿಯಂತೆ ಮಡಿಸಿ.
 •  
 • ಎಲೆಯ ಮೇಲೆ ಹಾಕಿದ ಪುಡಿ ಯಾವ ಕಡೆಯಿಂದಲೂ ಕೆಳಗೆ ಬೀಳದಂತೆ ಅಚ್ಚುಕಟ್ಟಾಗಿ ಮಡಿಸಿ ಆ ಸುರುಳಿಯನ್ನುಎರಡೂ ಕಡೆ ಬೇಯಿಸಿ, ಎತ್ತಿಡಿ.
 •  
 • ಇದು ತಣ್ಣಗಾದ ಮೇಲೆ ಗರಿಗರಿಯಾಗುತ್ತದೆ.
 •  
 • ಇದನ್ನು ಒಂದು ಬಟ್ಟಲಿನಲ್ಲಿ ಪುಡಿ ಮಾಡಿಕೊಂಡು ಬಿಸಿ ಹಾಲಿನಲ್ಲಿ ನೆನೆಸಿಕೊಂಡು ಸ್ವಲ್ಪ ತುಪ್ಪದೊಟ್ಟಿಗೆ ತಿಂದರೆ ಬಹಳ ರುಚಿಯಾಗಿರುತ್ತದೆ.
 •  
 • ಇದು ದಾವಣಗೆರೆ ಕಡೆಯ ವಿಶೇಷ ಸಿಹಿ ತಿಂಡಿ.

 

ಬಗೆ ೨
ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
 
 ಬೇಕಾಗುವ ಪದಾರ್ಥಗಳು:
ಟರ್ಕಿ ಖೀಮಾ: ೧ ಪೌಂಡ್

ಕೋಳಿ-೧ ಕೆಜಿ

ಚಿಲುಕಿಸಿದ ಅವರೆ-೧೦೦ ಗ್ರಾಮ್
 
ಹಸಿ ಮೆಣಸಿನ ಕಾಯಿ-೧೦ (ಖಾರ ಹೆಚ್ಚು ಬೇಕಾದರೆ ಇನ್ನಷ್ಟು)
 
ಶುಂಟಿ-೧ ಇಂಚು
 
ಕೊತ್ತಂಬರಿ-ಸೊಪ್ಪು-೧ ಕಟ್ಟು
 
ಬೆಳ್ಳುಳ್ಳಿ- ೧೨-೧೫ ಹಿಕಳು
 
ಕಾಳು ಮೆಣಸು-೧ ಸ್ಪೂನ್
 
ಲವಂಗ-೮
 
ಚಕ್ಕೆ-೩ ಅಥವಾ ನಾಲ್ಕು ಚೂರು
 
ತೆಂಗಿನ ಕಾಯಿ-೨ ಇಂಚು (ಅಥವಾ ೨ ಸ್ಪೂನ್ ತೆಂಗಿನ ತುರಿ)
 
ಈರುಳ್ಳಿ-೧
 
ಟೊಮ್ಯಾಟೋ-೧
 
ಅರಿಸಿನ-೧/೨ ಸ್ಪೂನ್
 
ಉಪ್ಪು- ರುಚಿಗೆ ತಕ್ಕಷ್ಟು
~
 
 
 

 

ಬಗೆ ೨

ಚಿಲಕವರೆ/ಚಿತಕವರೆ ಕೋಳಿ ಚಾಪ್ಸ್

ವಿಶ್ವ, ಅಟ್ಲಾಂಟಾ

ವಿಧಾನ:

೧) ಮೊದಲು ಕೋಳಿಯನ್ನು ಸ್ವಲ್ಪ ಉಪ್ಪು ಮತ್ತು ಅರಿಸಿನ ಪುಡಿಯ ಜೊತೆ ಅರ್ಧ ಗಂಟೆ ನೆನೆಸಿಟ್ಟುಕೊಳ್ಳಿ.

೨) ಒಣಗಿದ ಚಿಲಕವರೆ ಬೇಳೆಯನ್ನು ಉಪಯೋಗಿಸುವುದಾದರೆ ಅದನ್ನು ೧೫ ನಿಮಿಷ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ಆಗಷ್ಟೇ ಚಿಲುಕಿಸಿದ್ದಾದರೆ ನೆನೆಸುವುದು ಬೇಡ.

೩) ಈರುಳ್ಳಿ, ಕೊತ್ತಂಬರಿ ಸೊಪ್ಪು, ತೆಂಗಿನ ಕಾಯಿ, ಶುಂಟಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.

೪) ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸಿನಕಾಯಿ, ಶುಂಟಿ, ಬೆಳ್ಳುಳ್ಳಿಯನ್ನು ಸ್ವಲ್ಪ ಹುರಿದುಕೊಳ್ಳಿ. ಇದಕ್ಕೆ ಈರುಳ್ಳಿಯನ್ನು ಸೇರಿಸಿ ಎರಡು ನಿಮಿಷ ಹುರಿದುಕೊಳ್ಳಿ. ಮತ್ತೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ, ಕಾಳು ಮೆಣಸು, ಚಕ್ಕೆ ಮತ್ತು ಲವಂಗವನ್ನೂ ಹಾಕಿ ಹುರಿದುಕೊಳ್ಳಿ.

೫) ಹುರಿದುಕೊಂಡ ಸಾಮಾನೆಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಟೋಮ್ಯಾಟೋ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

೬) ನೆನೆಸಿದ ಕೋಳಿಯನ್ನು ತೊಳೆದುಕೊಂಡು, ನೀರು ಬಸಿದುಕೊಳ್ಳಿ.

೭) ಮಸಾಲೆಯನ್ನು ಹುರಿದ ಪಾತ್ರೆಗೆ ೨ ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ, ತೊಳೆದಿಟ್ಟುಕೊಂಡ ಕೋಳಿ ಹಾಕಿ ಎರಡು ನಿಮಿಷ ಹುರಿಯಿರಿ.

೮) ಪ್ರೆಶರ್ ಕುಕ್ಕರ್ ನಲ್ಲಿ ಈ ಹುರಿದ ಕೋಳಿ, ರುಬ್ಬಿಟ್ಟುಕೊಂಡ ಮಸಾಲೆ ಮತ್ತು ಚಿಲಕವರೆ/ಚಿತಕವರೆ ಸೇರಿಸಿ ಚನ್ನಾಗಿ ಬೆರೆಸಿ, ಸ್ವಲ್ಪ ನೀರು ಸೇರಿಸಿ, ಎರಡು ವಿಷಲ್ ಬರುವವರೆಗೂ ಬೇಯಿಸಿ.

೯) ಈಗ ಚಿಕನ್ ಚಿಲಕವರೆ ಚಾಪ್ಸ್ ರೆಡಿ. ಇದನ್ನು ಮುದ್ದೆ, ಚಪಾತಿ, ಅನ್ನದ ಜೊತೆ ಸವಿದರೆ ತುಂಬಾ ರುಚಿಯಾಗಿರುತ್ತದೆ. 

 
 
 
 
 
Copyright © 2011 Neemgrove Media
All Rights Reserved