ಅಂಗಳ      ಹಾಡು ಹಕ್ಕಿ
Print this pageAdd to Favorite


ಮೂರನೇ ಸಾರಿನೂ ನೋ ಚಾರ್ಮ್!!!

ನವೀನ್ ಪಿ ದಾಸ್
 
ನಾಕು ತಿಂಗಳ ಹಿಂದೆ ಆಗಿದ್ರೆ ಈ ಆರ್ಟಿಕಲ್ ಬರಿತಾ ಇರಲಿಲ್ಲ. ನನ್ನ ಸಿಚುಯೇಶನ್ ನ ಎಲ್ರಿಗೂ ನಾನೇ ಟಾಮ್ ಟಾಮ್ ಮಾಡಿಕೊಳ್ಳುತ್ತಿದೆ. ಆದ್ರೆ ಈಗ ಐ ಹ್ಯಾವ್ ಓವರ್ ಕಮ್ ಇಟ್! ನಾನು ವಿನ್ನರ್.
 
ಗ್ರಾಜುಯೇಷನ್ ಆಗಿ ನಾನು ಒಪಿಟಿ ನಲ್ಲಿದ್ದಾಗ ನಾನು ಕೆಲಸ ಮಾಡುತ್ತಿದ್ದ ಕಂಪನಿಯವರು ನನಗೆ ಎಚ್ ೧ ವಿಸಾ ಸ್ಪಾನ್ಸರ್ ಮಾಡಿದರು. ವೀಸಾ ಆಯಿತು. ಕೆಲಸಕ್ಕೆ ಪರ್ಮನೆಂಟ್ ಆಗಿ ಸೇರಿದೆ. ಸ್ಟೂಡೆಂತ್ ಆಗಿದ್ದಾಗ ಇದ್ದ ಹಾಗೆ ಈಗ ಪ್ರತೀ ಡಾಲರ್ ನೂ ಎಣಿಸಿ ಲಿಮಿಟ್ಟಾಗಿ ಖರ್ಚು ಮಾಡಬೇಕು ಅಂತ ಇರಲಿಲ್ಲ. ಫ್ರೆಂಡ್ಸ್ ಜೊತೆ ಬೇರೆ ಬೇರೆ ಸ್ಟೇಟ್ಸ್ ಗೆ ಟ್ರಾವೆಲ್ ಮಾಡುತ್ತಿದ್ದೆ. ಕಾರ್ ಕೊಂಡುಕೊಂಡೆ. ಒಬ್ಬ ಲಿಮಿಟೆಡ್ ರಿಸೋರ್ಸ್ ಸ್ಟೂಡೆಂಟ್ ಯಿಂದ ಸ್ವಲ್ಪ ಬಿಂದಾಸ್ ಆಗಿ ಲೈಫ್ ಎನ್ಜಾಯ್ ಮಾಡೋ ಹುಡುಗ ಆದೆ. ಕೆಲಸಕ್ಕೆ ಸೇರಿದ ಐದು ಆರು ತಿಂಗಳಿಗೆ ನಮ್ಮಮ್ಮ-ಅಪ್ಪ ಮದುವೆ ಮಾಡಿಕೊಳ್ಳೋ ಅಂತ ಹಿಂದೆ ಬಿದ್ದರು. ಯಾವಾಗ ಇಂಡಿಯಾಗೆ ಬರ್ತೀಯಾ? ನಾವು ಎರಡು ಮೂರು ಹುಡುಗೀರನ್ನು ಸೆಲೆಕ್ಟ್ ಮಾಡಿ ಇಟ್ಟಿರ್ತೀವಿ ನೀನು ಬಂದು ಒಬ್ಬಳನ್ನು ಆರಿಸಿಕೋ ಅಂತ ಪೂರ್ತಿ ಪ್ಲಾನಿಂಗ್ ಮಾಡಿದರು. ಅಪ್ಪ-ಅಮ್ಮನನ್ನು ನೋಡೊಕೆ ಇಮ್ಡಿಯಾಗೆ ಹೋಗಬೇಕು ಅನ್ನಿಸಿದ್ರೂ ನನಗೆ ಭಯ. ಮದುವೆ ಮಾಡಿ ಬಿಡುತ್ತಾರಲ್ಲ ಅಂತ.
ಮದುವೆ ಕೆಟ್ಟದಲ್ಲ. ಆದರೆ ಹುಡುಗರಿಗೆ ಮದುವೆ ಅಂದ್ರೆ ಮೂಗುದಾರ ಹಾಕಿದ ಹಾಗೆ. ನಾವು ಮದುವೆ ಆಗೊ ಹುಡುಗಿ ನಮ್ಮ ಫ್ರೆಂಡ್ಸ್ ನ ಇಷ್ಟ ಪಡದೆ ಇರಬಹುದು. ನಮ್ಮ ಓಡಾಟ ನ ಎಂಜಾಯ್ ಮಾಡದೆ ಇರಬಹುದು. ನನ್ನ ಇಡೀ ಟೈಮ್ ಅವಳಿಗೇ ಕೊಡಬೇಕಾಗಿ ಬರಬಹುದು. ನನಗೆ ನನ್ನ ನ್ಯೂ ಫ್ರೀಡಮ್ ನ ಯಾರ ಜೊತೆನೂ ಶೇರ್ ಮಾಡಿಕೊಳ್ಳಲು ಇಷ್ಟ ಇರಲಿಲ್ಲ. ಮಜವಾಗಿ ಓಡಾಡಿಕೊಂಡಿದ್ದೆ. ಐ ವಸ್ ಹ್ಯಾಪಿ.
 
ಒಂದಿನ ನಮ್ಮ ಅಪ್ಪನ ಫ್ರೆಂಡ್ ನನ್ನ ಸೆಲ್ ಗೆ ಫೋನ್ ಮಾಡಿದರು. ಅಪ್ಪನಿಗೆ ಸಿವಿಯರ್ ಹಾರ್ಟ್ ಅಟ್ಯಾಕ್ ಆಗಿದೆ ಎಂದರು. ನನಗೆ ಶಾಕ್. ವಾರದ ಹಿಂದೆ ಅಪ್ಪನ ಜೊತೆ ಮಾತಾಡಿದ್ದೆ. ತಿರುಪತಿಗೆ ಹೋಗಿ ಬರ್ತೀವಿ ಅಂದಿದ್ದರು. ಅಲ್ಲೇನಾದರೂ ಸ್ಟ್ರ‍ೇನ್ ಆಯಿತೋ ಏನೋ..ನನಗೆ ನಂಬಲಿಕ್ಕೆ ಆಗಲಿಲ್ಲ. ನನ್ನ ಮ್ಯಾನೇಜರ್ ಇಂಡಿಯನ್. ಅವರ ಜೊತೆ ಮಾತಾಡಿದೆ. ನಾನು ಎರಡು ವಾರಕ್ಕೆ ಲೀವ್ ಸ್ಯಾಂಕ್ಷನ್ ಮಾಡಿಕೊಂಡು ಅವತ್ತು ರಾತ್ರಿನೇ ಊರಿಗೆ ಹೊರಟೆ. ನೇರವಾಗಿ ಆಸ್ಪತ್ರೆಗೆ ಹೋಗ್ಲಾ ಅಂದ್ರೆ ಬೇಗ ನಿಮ್ಮನೆಗೇ ಬಾ. ಅಲ್ಲಿಂದ ನಾನು ಕರೆದುಕೊಂಡು ಹೋಗ್ತೇನೆ ಅಂದ್ರು ಅಪ್ಪನ ಫ್ರೆಂಡ್. ಅಮ್ಮ ಫೋನ್ನ್ ಗೆ ಸಿಗಲೇ ಇಲ್ಲ. ಮನೆಗೆ ಬರುವಾಗ ತುಂಬಾ ಭಯ, ಟೆನ್ಷನ್. ನನಗೋಸ್ಕರ ನಮ್ಮಪ್ಪ ತುಂಬಾ ಸಾಕ್ರಿಫೈಸ್ ಮಾಡಿದ್ದರು. ಅವರಿಗೆ ಏನೂ ಆಗದೆ ಇದ್ರೆ ಸಾಕು ಅಂತ ಪ್ರತೀ ಸೆಕೆಂಡ್ ಕೇಳಿಕೊಂಡೆ. ಮನೆಗೆ ಬಂದೆ. ನಮ್ಮಪ್ಪ ಹಾಲ್ ನಲ್ಲಿ ಆರಾಮಕ್ಕೆ ಹಾಯ್ ಬೆಂಗಳೂರ್ ಓದ್ತಾ ಕುಳಿತಿದ್ದರು. ನನ್ನ ಹತ್ತಿರ ಏನೋ ಹೈಡ್ ಮಾಡುವಂತೆ ನಕ್ಕರು. ಅವರನ್ನು ಹಾಗೆ ನೋಡಿ ಸಿಕ್ಕಪಟ್ಟೆ ರಿಲೀಫ್ ಆಯಿತು. ಅಮ್ಮನೂ ಖುಶಿಯಾಗಿ ಬಂದು ’ಹೇಗಿದ್ದೀಯೋ? ಏನೋ ಇದೂ ಇಷ್ಟು ಸಣ್ಣ ಆಗಿದ್ದೀಯ...?’ ನಾರ್ಮಲ್ ಆಗಿ ಮಾತಾಡಿದ್ರು.
 
ನನಗೆ ಮತ್ತೆ ಶಾಕ್. ಅಪ್ಪ, ’ನಾನು ನಾಟಕ ಮಾಡಿದೆ ಕಣೋ. ನಿನ್ನನ್ನು ನೋಡಬೇಕು ಅನ್ನಿಸಿತ್ತು. ಐ ಆಮ್ ಸಾರಿ’ ಅಂದರು. ಯಾಕಪ್ಪಾ ಹೀಗೆ ಮಾಡಿದ್ರಿ ಯಾವತ್ತು ಹೀಗೆ ಮಾಡಬೇದಿ, ಇದು ತಮಾಶೆ ಅಲ್ಲ ಅಂತ ಒಂದು ಸಲ ವಾಯ್ಸ್ ಜೋರು ಮಾಡಿದೆ. ಆದರೆ ಅಪ್ಪ ಹೆಲ್ತಿ ಆಗಿದ್ದು ನೋಡಿ ಸಿಕ್ಕಾಪಟ್ತೆ ರಿಲೀಫ್ ಆಯ್ತು.
 
ಮಧ್ಯಾನ್ಹ ಅಮ್ಮ ಊಟ ಬಡಿಸುತ್ತಾ ನಾನು ಎಷ್ಟು ದಿನಕ್ಕೆ ಬಂದಿದ್ದೀನಿ, ಯಾವಾಗ ಹೊರಡ್ತೀನಿ ಎಲ್ಲಾ ಕೇಳಿಕೊಂಡ್ರು. ನಾಳೆ ಬೆಳಿಗ್ಗೆ ಶಿವಮೊಗ್ಗಾಗೆ ಹೊರಡೋಣ. ಅಲ್ಲಿ ಸ್ವಲ್ಪ ಅರ್ಜೆಂಟ್ ಕೆಲಸ ಇದೆ ಅಂದ್ರು. ಏನಾದ್ರೂ ಸರಿ ಅಂತ ಸುಮ್ಮನಾದೆ. ಶಿವಮೊಗ್ಗಾಗೆ ಟ್ಯಾಕ್ಸಿ ಮಾಡಿಕೊಂಡು ಹೊರಟಾಗ ಅಲ್ಲಿ ಇಬ್ಬರು ಹುಡುಗಿಯರನ್ನು ನೋಡಲು ಹೋಗ್ತಾ ಇದ್ದೀವಿ ಅಂತ ಹೇಳಿದ್ರು. ನನಗೆ ಶಾಕ್ ಆಯ್ತು! ನಮ್ಮಪ್ಪ ಅಮ್ಮ ಬರೀ ಶಾಕ್ ಕೊಡೋ ಮೋಡ್ ನಲ್ಲೇ ಇದ್ರು. ನನಗೆ ಕೋಪ ಬಂತು. ಆದ್ರೆ ಅಪ್ಪ ಅಮ್ಮನಿಗಾಗಿ ಅದೂ ಓಕೆ ಅಂದುಕೊಂಡೆ.
 
ಮೊದಲ ಹುಡುಗಿ ಸಿಕ್ಕಾಪಟ್ಟೆ ಶೈ ಇದ್ದರು. ನನಗೂ ಅವರಿಗೂ ಮಾತಾಡಲು ಬಿಟ್ಟರು. ಐ ಕುಡ್ ನಾಟ್ ಕನೆಕ್ಟ್ ವಿತ್ ಹರ್. ನಮ್ಮ ವಯಸ್ನಲ್ಲಿ ೭ ವರ್ಷ ಡಿಫರೆನ್ಸ್ ಇತ್ತು. ಎರಡನೇ ಹುಡುಗಿ ತುಂಬಾ ಮಾಡ್. ಸಾಫ್ಟ್ ವೇರ್ ಎಂಜಿನೀರ್. ನನ್ನನ್ನು ಒಂದು ನಿಮಿಷಾನೂ ಬಿಡದೆ ಇಂಟರ್ ವ್ಯೂ ಮಾಡಿದ್ರು. ನಾನು ಎಲ್ಲ ರಿಪೋರ್ಟ್ ಮಾಡಿದ ಹಾಗೆ ಇಂಟರ್ವ್ಯೂ ಮುಗಿಸಿದೆ. ಚಿಕ್ಕಮ್ಮನ ಮನೆಗೆ ಹೋಗಿ ನೆಕ್ಸ್ಟ್ ಡೇ ವಾಪಸ್ ಬಂದೆವು. ದಾರಿಯಲ್ಲೇ ಎರಡೂ ಹುಡುಗಿಯರ ಅಪ್ಪ-ಅಮ್ಮಂದಿರ ಕಾಲ್ ಬಂದಿತ್ತು. ಮೊದಲ ಹುಡುಗಿಗೆ ನಾನು ತುಂಬಾ ಜೋರು ಅನ್ನಿಸಿದೆನಂತೆ...ಸೋ ಕ್ಯಾನ್ಸಲ್!! ಎರಡನೇ ಹುಡುಗಿಗೆ ನಾನು ಅಮೆರಿಕಾದಲ್ಲಿ ತುಂಬಾ ಒಳ್ಳೆ ಕೆಲಸದಲ್ಲಿ ಇದ್ದೀನಿ ಅನ್ನಿಸಲಿಲ್ಲವಂತೆ...ಸೋ ಅದೂ ಕ್ಯಾನ್ಸಲ್!!! ಮನೆ ತಲುಪುವ ಮುಂಚೆಯೇ ಅಪ್ಪ-ಅಮ್ಮ ಡಿಸಪಾಯಿಂಟ್ ಆಗಿದ್ದರು. ನನಗೆ ಮತ್ತೆ ಶಾಕ್!! ಓಹ್ ಹಾಗಾದ್ರೆ ನಾನು ಮದುವೆ ಅಗಲು ಎಲಿಜಿಬಲ್ ಕ್ಯಾಂಡಿಡೇಟ್ ಅಲ್ಲವಾ ಅಂತ ನನಗೇ ಡೌಟ್ ಬರಲು ಸ್ಟಾರ್ಟ್ ಆಗಿತ್ತು.  
ಮೂರು ದಿನ ಕಾಲೇಜಿನ ಫ್ರೆಂಡ್ಸ್ ಗಳನ್ನು ನೋಡಿಕೊಂಡು ಅಮ್ಮನ ಊಟ ಮಾಡಿಕೊಂಡು ರಿಲ್ಯಾಕ್ಸ್ ಮಾಡಿದೆ. ಮಾರನೇ ದಿನ ಮತ್ತೆ ಅಮ್ಮ ರೆಡಿಯಾಗು  ಹುಡುಗಿ ನೋಡಿಕೊಂಡು ಬರೋಣ ಅಂದರು. ಸ್ವಲ್ಪ ಭಯ ಆಯ್ತು. ನನ್ನ ಹತ್ತಿರ ಇದ್ದ ಬೆಸ್ಟ್ ಬಟ್ಟೆ ಹಾಕಿಕೊಂಡೆ. ಸ್ವಲ್ಪ ಆಕ್ಸೆಂಟ್ ಹೊಡೆಯೋಣ ಎಂದುಕೊಂಡೆ. ಮೂರನೇ ಹುಡುಗಿ ತುಂಬಾ ಸಾಫ್ಟ್ ಎನ್ನಿಸಿದರು. ನಾನು ಚನ್ನಾಗಿ ಅಮೆರಿಕನ್ ಸ್ಟೈಲ್ ನಲ್ಲಿ ಮಾತಾಡಿದೆ. ಗತ್ತು ತೋರಿಸಿದೆ. ಮನೆಗೆ ಬಂದ್ವಿ. ಆ ಹುಡುಗಿಗೆ ನಾನು ತುಂಬಾ ಪಂಕ್ ಅನ್ನಿಸಿದೆನಂತೆ. ಸೋ....ಕ್ಯಾನ್ಸಲ್!!!!!
 
ನನ್ನ ಸೆಲ್ಫ್ ಕಾನ್ಫಿಡೆನ್ಸ್ ಲೆವೆಲ್ ಪೂರ್ತಿ ತಳಕ್ಕೆ ಕೂತಿತ್ತು. ಮದುವೇನೂ ಬೇಡ, ಏನೂ ಬೇಡ ವಾಪಸ್ ಹೊರಡ್ತೀನಿ ಅಂದೆ. ಇಲ್ಲ ಕಣೋ ಇನ್ನೊಬ್ಬಳು ಹುಡುಗಿ ಇದ್ದಾಳೆ. ಅವಳನ್ನೂ ನೋಡಿಬಿಡು ಅಮ್ಮ ಒತ್ತಾಯ ಮಾಡಿದ್ರು. ನಾನು ಸಾಧ್ಯನೇ ಇಲ್ಲ ಅಂತ ಹಟ ಮಾಡಿದೆ. ಅಮ್ಮ ಅಳೋದಿಕ್ಕೆ ಸ್ಟಾರ್ಟ್ ಮಾಡಿದರು. ಮೂರು ನಾಮ ಆಗಿದೆ, ಇದೂ ಒಂದು ಆಗಿ ಬಿಡಲಿ ಅಂತ ಓಕೆ ಅಂದೆ. ಈ ಸರಿ ನಾನು ಡ್ರೆಸ್ ಬಗ್ಗೆ ಒಂಚೂರೂ ಇಂಟರೆಸ್ಟ್ ಕೊಡಲಿಲ್ಲ. ಅವರ ಮನೆಗೆ ಹೋಗಿ ಮುಲಾಜಿಲ್ಲದೆ ಬೋಂಡ, ಸ್ವೀಟ್, ವೆಜಿಟೆಬಲ್ ಪಲಾವ್ ಎಲ್ಲಾ ಸರಿಯಾಗಿ ತಿಂದೆ. ಹುಡುಗಿ ಜೊತೆ ಮಾತಾಡುವಾಗ ನನಗಿಷ್ಟು ಸಂಬಳ, ಈ ಊರಿನಲ್ಲಿದೀನಿ, ಈ ಥರದ ಇಂಟರೆಸ್ಟ್ ಇದೆ. ಇಷ್ಟು ಫ್ರೆಂಡ್ಸ್ ಇದ್ದಾರೆ, ಆಗಾಗ ವೋಡ್ಕಾ, ಮಾರ್ಗರೀಟಾ ಟೇಸ್ಟ್ ಮಾಡ್ತಿನಿ, ಟ್ರಾವೆಲ್ ಮಾಡೋದು ಅಂದ್ರೆ ಇಷ್ಟ ಅಂತ ಸಖತ್ ಕಾಮ್ ಆಗಿ ಎಲ್ಲಾ ಹೇಳಿ ಸುಮ್ಮನಾದೆ. ಸುಮ್ಮನೆ ಕೇಳಿದರು. ತುಂಬಾ ಚನ್ನಾಗಿದ್ದರು. ಒಂಥರಾ ಟ್ರಡಿಷನಲ್ ಬ್ಯೂಟಿ. ನಾವು ಮನೆಗೆ ಬಂದ್ವಿ.
 
 
ನನಗಿನ್ನೂ ಜೆಟ್ ಲ್ಯಾಗ್ ಇತ್ತು. ಬೆಳಿಗ್ಗೆ ಅಮ್ಮ ಬಂದು ಟೆನ್ಷನ್ ನಲ್ಲಿ ಏಳಿಸಿದರು. ಆ ಹುಡುಗಿಗೇ ನೀನು ತುಂಬಾ ಇಷ್ಟ ಆಗಿದ್ದೀಯಂತೆ ಕಣೋ. ಅವರೆಲ್ಲರೂ ನೀನು ತುಂಬಾ ಸಿಂಪಲ್, ಒಳ್ಳೆ ಹುಡುಗ ಅಂತ ಒಪ್ಪಿದ್ದಾರೆ, ಒಳ್ಳೆ ಮನೆ ಕಣೋ..ಏನಂತೀಯಾ ಅಂತ ಅಲ್ಲೆ ಪಟ್ಟು ಹಿಡಿದರು. ಫಸ್ಟ್ ಟೈಮ್ ನನ್ನ ಚಾಯ್ಸ್ ವರೆಗೂ ಬಂದಿತ್ತು. ಒಂದು ನಿಮಿಷ ಕಣ್ಣೂ ಮುಚ್ಚಿದೆ, ಆ ಹುಡುಗಿಯನ್ನು ನೆನಪಿಸಿಕೊಂಡೆ. ಖುಷಿ ಆಯಿತು. ಹೂಂ ಅಮ್ಮ ಅಂದೆ. ಅಮ್ಮ-ಅಪ್ಪ ಇಬ್ಬರೂ ಅವರಿಗೆ ಫೋನ್ ಮಾಡಲು ರೆಡಿ ಆದರು.
 
ಮೂರು ದಿನ ಆದ ಮೇಲೆ ಎಂಗೇಜ್ಮೆಂಟ್ ಆಯಿತು. ಮುದ್ದು ಹುಡುಗಿ ನನ್ನ ಲೈಫ್ ಪಾರ್ಟ್ ನರ್. ಅವಳ ನೆನಪಲ್ಲಿ ಯೂ ಎಸ್ ಗೆ ವಾಪಸ್ ಬಂದೆ. ಆರು ತಿಂಗಳು ಆದಮೇಲೆ ಮತ್ತೆ ಊರಿಗೆ ಹೋದೆ, ಮದುವೆ ಆಗಿ ಜೊತೆಯಲ್ಲಿ ಇಬ್ಬರೂ ಬಂದ್ವಿ. ನನ್ನನ್ನು ಮೊದಲು ರಿಜೆಕ್ಟ್ ಮಾಡಿದ ಮೂರು ಹುಡುಗಿಯರಿಗೂ ಥ್ಯಾಂಕ್ಸ್ ಹೇಳಿಕೊಂಡೆ. ನನ್ನ ಜಾಕ್ ಪಾಟ್ ನನಗೆ ಬಂದಾಗಿತ್ತು!! 
 
 


 
 
 
 
 
Copyright © 2011 Neemgrove Media
All Rights Reserved