ಅಕ್ಕಿಯನ್ನು ತೊಳೆದು ೩-೪ ಗಂಟೆ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ (ಅಕ್ಕಿ ಹೆಚ್ಚು ಪಾಲಿಶ್ ಮಾಡಿದ್ದಾಗಿರಬಾರದು. ಸೋನಾ ಮಸೂರಿ ಅಕ್ಕಿಗಿಂತಲೂ ಸಾಧಾರಣ ಅಕ್ಕಿಯಲ್ಲಿ ಉತ್ತಮ ದೋಸೆ ತಯಾರಾಗುತ್ತವೆ).
ಅಕ್ಕಿಯನ್ನು ಮತ್ತು ಆಗಷ್ಟೇ ತುರಿದ ತೆಂಗಿನ ತುರಿಯನ್ನು ಚನ್ನಾಗಿ ಸಣ್ಣಗಾಗುವಂತೆ ನೀರಿನೊಟ್ಟಿಗೆ ರುಬ್ಬಿಕೊಳ್ಳಬೇಕು. ಹಿಟ್ಟು ಸಣ್ಣದಾದಷ್ಟೂ ಒಳ್ಳೆಯದು.
ಈ ಮಿಶ್ರಣಕ್ಕೆ ಉಪ್ಪು ಸೇರಿಸಿ, ಮತ್ತಷ್ಟು ನೀರು ಸೇರಿಸಿ ಹದ ಮಾಡಿಟ್ಟುಕೊಳ್ಳಬೇಕು. (ಈ ಮಿಶ್ರಣ ನೀರಿಗಿಂತ ಸ್ವಲ್ಪ ದಪ್ಪಕ್ಕೆ ಇರಬೇಕು. ಸಾಧಾರಣ ದೋಸೆ ಹಿಟ್ಟಿಗಿಂತ ತೆಳು ಇರಬೇಕು).
ಹೆಂಚನ್ನು ಕಾಯಲಿಟ್ಟು, ಅದಕ್ಕೆ ಎಣ್ಣೆ ಸವರಿ, ಕಾದ ಹೆಂಚಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಮೆತ್ತಗೆ ಎರಚಬೇಕು. ಎರಚುತ್ತಲೇ ಅದು ಅಗಲವಾಗಿ, ಗೋಲಾಕಾರಕ್ಕೆ ಬರುವಂತೆ ಮಾಡಬೇಕು. ಈ ದೋಸೆಯನ್ನು ಎರಡೂ ಬದಿ ಬೇಯಿಸಬೇಕು.
ಈಗ ನೀರು ದೋಸೆ ರೆಡಿ. ಬಿಸಿ ಬಿಸಿ ನೀರು ದೋಸೆಯನ್ನು ತೆಂಗಿನ ಚಟ್ನಿಯೊಟ್ಟಿಗೆ ತಿಂದರೆ ರುಚಿ.