ತೊಗರಿಬೇಳೆಯನ್ನು ಚನ್ನಾಗಿ ತೊಳೆದು, ನೀರು ಹಾಕಿ, ಕುಕ್ಕರಿನಲ್ಲಿ ೧೦ ನಿಮಿಷ ಬೇಯಿಸಬೇಕು.
ಬೆಂದಿರುವ ಬೇಳೆಯನ್ನು ಬ್ಲೆಂಡರ್ ಅಥವಾ ಮಜ್ಜಿಗೆ ಕಡೆಯುವ ಕಡೆಗೋಲಿನಿಂದ ಚನ್ನಾಗಿ ಮಸೆದು ಸಾಕಾಗುವಷ್ಟು ನೀರು ಹಾಕಿ ಉಪ್ಪು ಮತ್ತು ನಾಲ್ಕು ಹಸಿಮೆಣಸಿನ ಕಾಯಿಯನ್ನು ಸೇರಿಸಿ ಕುದಿಸಬೇಕು.
ಬೇಳೆ ಕುದಿ ಬರುವಾಗ ಚಿಟಿಕೆ ಇಂಗಿನ ಚೂರನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ ಬೇಳೆಗೆ ಬೆರೆಸಬೇಕು.
ಒಗ್ಗರಣೆಗೆ ಒಂದು ಪುಟ್ಟ ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಇಟ್ಟು, ಸಾಸಿವೆ, ೨ ಕೆಂಪು ಮೆಣಸು, ಕರಿಬೇವಿನ ಸೊಪ್ಪನ್ನು ಹಾಕಬೇಕು. ಈ ಒಗ್ಗರಣೆಯನ್ನು ಬೇಳೆಗೆ ಸೇರಿಸಬೇಕು.
ಬೇಕೆಂದರೆ ಸಣ್ಣದಾಗಿ ಚೂರು ಮಾಡಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು. ಇದು ಐದು ಜನರಿಗೆ ಸಾಕಾಗುತ್ತದೆ
(ವಿ.ಸೂ: ಹಸಿಮೆಣಸಿನ ಕಾಯಿಯನ್ನು ಸಣ್ಣ ಸಣ್ಣದಾಗಿ ಚೂರುಮಾಡಿ ಅಥವಾ ಎರಡು ಭಾಗವಾಗಿ ಸೀಳಿ ಹಾಕಬಾರದು. ಹಾಗೆ ಮಾಡಿದರೆ ತುಂಬಾ ಖಾರವಾಗುತ್ತದೆ. ಒಂದು ಮೆಣಸಿನಕಾಯಿಯನ್ನು ತುದಿಯಿಂದ ನಡುವಿನವರೆಗು ತುಂಡರಿಸಿ ಹಾಕಬೇಕು.)