ಅಂಗಳ      ಧರೆ ಹತ್ತಿ ಉರಿದೊಡೆ
Print this pageAdd to Favorite
 
 

ಆರ್ಕ್ಟಿಕ್ ಸಮುದ್ರದಿಂದ ಬುಗ್ಗೆಯಾಗಿ ಚಿಮ್ಮುತ್ತಿರುವ ಮೀಥೇನ್!


ಆರ್ಕ್ಟಿಕ್ ಪ್ರದೇಶದಲ್ಲಿರುವ ಸರ್ಬಿಯಾ ದೇಶದ ಪೂರ್ವ ತೀರದಲ್ಲಿ ಇತ್ತೀಚೆಗೆ ರಷಿಯಾದ ವಿಜ್ನಾನಿಗಳಿಂದ ಆಶ್ಚರ್ಯದ ಸಂಶೋಧನೆಯೊಂದು ನಡೆದಿದೆ. ಪೂರ್ವ ಸರ್ಬಿಯಾದ ಸಮುದ್ರ ತಳದಿಂದ ವಿಷಪೂರಿತ ಮೀಥೇನ್ ಅನಿಲದ ಬುಗ್ಗೆಗಳು ಏಳುತ್ತಿರುವುದು ಕಂಡುಬಂದಿದೆ. ವಿಜ್ನಾನಿಗಳು ಶೋಧ ನಡೆಸಿರುವ ಒಂದು ಸಣ್ಣ ಭಾಗದಲ್ಲೇ ನೂರಕ್ಕೂ ಹೆಚ್ಚು ಬುಗ್ಗೆಗಳು ಮೀಥೇನ್ ಅನಿಲವನ್ನು ಸಮುದ್ರದ ನೀರಿನ ಮೂಲಕ ವಾತಾವರಣಕ್ಕೆ ಬಿಡುಗಡೆ ಮಾಡುತ್ತಿರುವುದು ಪತ್ತೆಯಾಗಿದೆ. ಇಡೀ ಪೂರ್ವ ಸರ್ಬಿಯಾದ ಭಾಗವನ್ನು ಹುಡುಕಿದರೆ ಸಾವಿರಾರು ಮೀಥೇನ್ ಸೋರಿಕೆಗಳು ಪತ್ತೆಯಾಗಬಹುದೆಂಬ ಆತಂಕವಿದೆ

ಸರ್ಬಿಯಾದ ಪೂರ್ವ ಸಮುದ್ರ ತೀರ (ಭೂ ಅಂತರಾಳ) ಮೀಥೇನ್ ನಿಂದ ಶ್ರೀಮಂತವಾದುದ್ದಾದರೂ ಇಷ್ಟು ಭಾರೀ ಪ್ರಮಾಣದ ಮೀಥೇನ್ ಹೊರಹೊಮ್ಮುವಿಕೆಯನ್ನು ಹಿಂದೆ ಯಾವಾಗಲೂ ಕಂಡಿಲ್ಲವೆಂದು ಹೇಳಲಾಗಿದೆ. ಪೂರ್ವ ಸರ್ಬಿಯಾದಲ್ಲೇ ಎರಡು ಮಿಲಿಯನ್ ಸ್ಕ್ವೇರ್ ಕಿಲೋಮೀಟರ್ ಗಳಷ್ಟು ವ್ಯಾಪ್ತಿಯ ಭೂತಳದಲ್ಲಿ ಮೀಥೇನ್ ಅಡಗಿದೆ ಎನ್ನಲಾಗಿದೆ. ಸರ್ಬಿಯಾದ ತೀರದಲ್ಲಿ ಹೊರಬರುತ್ತಿರುವ ಮೀಥೇನ್ ಇಡೀ ವಿಶ್ವದ ಎಲ್ಲಾ ಸಮುದ್ರಗಳಿಂದಲೂ ಹೊಮ್ಮುತ್ತಿರುವ ಮೀಥೇನ್ ಪ್ರಮಾಣಕ್ಕೆ ಸಮಾನವಾಗಿದೆ ಎಂದು ರಷಿಯಾದ ವಿಜ್ನಾನಿ ಡಾಕ್ಟರ್ ಇಗೋರ್ ಸೆಮಿಲೆತೋವ್ ಹೇಳುತ್ತಾರೆ 
 
ಮೀಥೇನ್ ಅನಿಲ, ಕಾರ್ಬಲ್ ಡೈಆಕ್ಸೈಡ್ ಗಿಂತಲೂ ೩೦ ಪಟ್ಟು ಹೆಚ್ಚು ಹಾನಿಕಾರಕ ಗ್ರೀನ್ ಹೌಸ್ ಗ್ಯಾಸ್ ಎನ್ನುವುದು ನಿಮಗೆ ಗೊತ್ತಿರಲಿ.
 
ಆರ್ಕ್ಟಿಕ್ ನಲ್ಲಿನ ನೀರ್ಗಲ್ಲುಗಳು ಭೂಮಿಯ ವಾತಾವರಣದ ಉಷ್ಣತೆಯ ಏರಿಕೆಯಿಂದ ಕ್ಷಿಪ್ರಗತಿಯಲ್ಲಿ ಕರಗುತ್ತಿರುವುದರಿಂದ ಅಲ್ಲಿನ ಸಮುದ್ರ ತಳದಲ್ಲಿ ಹುದುಗಿರುವ ಮೀಥೇನ್ ಸುಲಭವಾಗಿ ಹೊರಬರಲು ಕಾರಣವಾಗಿದೆ. ಸಾಧಾರಣವಾಗಿ, ಆಳ ಸಮುದ್ರದಲ್ಲಿ ಬಿಡುಗಡೆಯಾಗುವ ಮೀಥೇನ್ ಸಮುದ್ರತಳದಿಂದ ಸಮುದ್ರದ ಮೇಲ್ಮೈಗೆ ಹೊರಬರುವಷ್ಟರಲ್ಲಿ ಕಾರ್ಬನ್ ಡೈಆಕ್ಸೈಡ್ ಆಗಿರುತ್ತದೆ, ತನ್ನ ಬಲ ಕಳೆದುಕೊಂಡಿರುತ್ತದೆ. ಆದರೆ ಸರ್ಬಿಯಾದ ಪೂರ್ವ ತೀರದಲ್ಲಿನ ಸಮುದ್ರ ೫೦ ಮೀಟರ್ ನಷ್ಟು ಮಾತ್ರ ಆಳವಿರುವುದರಿಂದ ಮತ್ತು ಸಮುದ್ರವನ್ನು ಆವರಿಸಿರುವ ಹಿಮದ ಮೇಲ್ಮೈ ತೀವ್ರವಾಗಿ ಕರಗಿ ತೆಳುವಾಗುತ್ತಿರುವುದರಿಂದ ಮೀಥೇನ್ ಅನಿಲಕ್ಕೆ ಕಾರ್ಬನ್ ಡೈಆಕ್ಸೈಡ್ ಆಗಿ ಪರಿವರ್ತಿತವಾಗಲು ಸಮಯವೂ ಸಿಗದೇ ತೀಕ್ಷ್ಣವಾದ ಮೀಥೇನ್ ರೂಪದಲ್ಲಿಯೇ ಹೊರಗೆ ಬರುತ್ತಿದೆ. ಇಷ್ಟು ಭಾರೀ ಪ್ರಮಾಣದ ಮೀಥೇನ್ ಬಿಡುಗಡೆಯಾಗುತ್ತಿರುವುದು ವಾತಾವರಣದ ಮೇಲೆ ಯಾವ ರೀತಿಯ ಅಸಮತೋಲನ ಹುಟ್ಟು ಹಾಕಲಿದೆ ಎಂಬುದನ್ನು ಊಹಿಸಲೂ ಸಧ್ಯಕ್ಕೆ ಕಷ್ಟವೆಂದು ಸೆಮಿಲೆತೋವ್ ಅಭಿಪ್ರಾಯ ಪಟ್ಟಿದ್ದಾರೆ. ಸಂಶೋಧನೆ ಮುಂದುವರೆದಿದೆ.
  
 

 

ಬಹೂಪಯೋಗೀ ಪರಿಸರ ಸ್ನೇಹಿತ ವಿನೆಗರ್

 ಸಂಗ್ರಹ: ಶ್ರೀಮತಿ ಪ್ರತಿಭಾ ದಿವಾಕರ್
ಗೃಹೋಪಯೋಗೀ ರಾಸಾಯನಿಕ ವಸ್ತುಗಳ ಬಳಕೆಯಿಂದಲೂ ಕೂಡಾ ಗ್ರೀನ್ ಗ್ಯಾಸ್ ಗಳ ಉತ್ಪತ್ತಿ ಹೆಚ್ಚಾಗುತ್ತದೆ. ಈಗಾಗಲೇ ಭೂಮಿಯನ್ನು ಆವರಿಸಿಕೊಂಡಿರುವ ಗ್ರೀನ್ ಗ್ಯಾಸ್ ಗಳ ಅಪಾಯದ ಬಗ್ಗೆ ಹಿಂದೊಮ್ಮೆ ವಿವರವಾಗಿ ಬರೆದಿದ್ದೆವು. ಮನೆಗಳಲ್ಲಿನ ಗೃಹೋಪಯೋಗೀ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ಭೂಮಿಯ ಆರೋಗ್ಯಕ್ಕೆ ನಿಮ್ಮ ಕೈಲಾಗುವಷ್ಟು ಕರ್ತವ್ಯ ಮಾಡಲು ಸಹಾಯವಾಗಲು ಶ್ರೀಮತಿ ಪ್ರತಿಭಾ ದಿವಾಕರ್ ಅವರು ವಿನೆಗರ್ ನ ಬಹುಮುಖೀ ಉಪಯೋಗಗಳ ಪಟ್ಟಿಯನ್ನು ಕಳಿಸಿಕೊಟ್ಟಿದ್ದಾರೆ.

ವಿನೆಗರ್ ಅನ್ನು ನೀರು ಮತ್ತು ಅಸೆಟಿಕ್ ಆಮ್ಲವನ್ನು ಬುರುಗುಗೊಳಿಸಿ ಪಡೆಯಲಾಗುತ್ತದೆ. ಎಥೆನಾಲ್ ಎಂಬ ಸ್ವಾಭಾವಿಕ ಅನಿಲದಿಂದ ಅಸೆಟಿಕ್ ಆಮ್ಲವನ್ನು ಪಡೆಯುವುದರಿಂದ ವಿನೆಗರ್ ನಲ್ಲಿ ಪರಿಸರಕ್ಕೆ ಹಾನಿಯುಂಟುಮಾಡುವ ಯಾವ ರಾಸಾಯನಿಕವೂ ಇರುವುದಿಲ್ಲ. ವಿನೆಗರ್ ಅನ್ನು ಔಷಧಗಳಲ್ಲಿ, ಆಹಾರಗಳಲ್ಲಿ ಬಲ್ಳಸುತ್ತಾರೆ. ಕಡಿಮೆ ಬೆಲೆಯಲ್ಲಿ ದೊರೆಯುವ ವಿನೆಗರ್ ಅನ್ನು ಹಾನಿಕಾರಕ ರಾಸಯನಿಕಗಳ ಬದಲಿಗೆ ದಿನನಿತ್ಯದ ಕೆಲಸಗಳಲ್ಲಿ ಮನೆಗಳಲ್ಲಿ ಉಪಯೋಗಿಸಿದರೆ ಬಳಸುವವರಿಗೂ ಒಳ್ಳೆಯದು ಭೂಮಿಗೂ ಒಳ್ಳೆಯದು.
 • ಒಂದು ಸ್ಪ್ರೇ ಮಾಡುವ ಬಾಟಲಿಗೆ ಒಂದು ಕಪ್ ವಿನೇಗರ್, ೨ ಕಪ್ ನೀರು ಮತ್ತು ೨ ಹನಿ ಲ್ಯಾವೆಂಡರ್, ನೀಲಗಿರಿ ಅಥವಾ ನಿಂಬೆ ಎಣ್ಣೆ ಸೇರಿಸಿ ಕಲಕಿ ಆ ನೀರನ್ನು ಮನೆಯಲ್ಲಿ ಸ್ಪ್ರೇ ಮಾಡುವುದರಿಂದ ಗಾಳಿ ಸ್ವಚ್ಚವಾಗುತ್ತದೆ.
 • ಕಾಲು ಕೈಗಳಲ್ಲಿ ವಾರಿಕೋಸ್ (varicose veins) ಎದ್ದು ಕಾಣುತ್ತಿದ್ದರೆ ಅವುಗಳ ಮೇಲೆ ವಿನೇಗರ್ ಚಿಮುಕಿಸಿಕೊಂಡರೆ ನಿಧಾನಕ್ಕೆ ಊತ ಇಳಿಯುತ್ತದೆ.
  ಬಟ್ಟೆ ಸೋಪು ಬಳಸಿ ಕೈ ಒರಟಾಗಿದ್ದರೆ ಒಂದು ಹನಿ ವಿನೆಗರ್ ಜೊತೆ ಒಂದು ಹನಿ ಕೊಬ್ಬರಿ ಎಣ್ನೆ ಬೆರೆಸಿ ಕೈಗೆ ಹಚ್ಚಿಕೊಂಡರೆ ಕೈಗಳು ಮೃದು ಆಗುತ್ತವೆ.
 • ಗಂಟಲು ಇನ್ಫೆಕ್ಶನ್, ಗಂಟಲು ಕೆರೆತವಾದಾಗ ಒಂದು ದೊಡ್ದ ಲೋಟ ನೀರಿಗೆ ಒಂದು ಸ್ಪೂನ್ ವಿನೆಗರ್ ಹಾಕಿ ಗಾರ್ಗಲ್ ಮಾಡಿ ನಂತರ ಆ ನೀರನ್ನು ನುಂಗಬೇಕು. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದಲ್ಲಿ ಗಂಟಲು ನೋವು ಹೋಗುತ್ತದೆ.
 • ಮಕ್ಕಳ ತಲೆಯಲ್ಲಿ ಹೇನು ಬಂದಿದ್ದರೆ, ವಿನೆಗರ್ ಅನ್ನು ಬೆಚ್ಚಗೆ ಮಾಡಿಕೊಂಡು ತಲೆಗೆ ಹಚ್ಚಿ ಕೂದಲನ್ನು ಬಾಚಿ ಕೆಲವು ಗಂಟೆಗಳ ಕಾಲ ಬಿಟ್ಟು ಕೂದಲನ್ನು ತೊಳೆದುಕೊಳ್ಳುವುದರಿಂದ ಹೇನುಗಳು ನಾಶವಾಗುತ್ತವೆ.
 • ಬಟ್ಟೆಗೆ ಅಥವಾ ವಸ್ತುಗಳಿಗೆ ಚೂಯಿಂಗ್ ಗಮ್ ಅಂಟಿದ್ದರೆ ಎರಡು ಸ್ಪೂನ್ ವಿನೇಗರ್ ಅನ್ನು ಬೆಚ್ಚಗೆ ಮಾಡಿ ಚೂಯಿಂಗ್ ಗಮ್ ಅಂಟಿದ ಜಾಗಕ್ಕೆ ಹಾಕಿ ಒರೆಸುವುದರಿಂದ ಅದರ ಕಲೆಯನ್ನು ಉಳಿಕೆಯನ್ನು ತೆಗೆಯಬಹುದು.
 • ಬಟ್ಟೆಗಳ ಮೇಲೆ ಕಾಫಿ, ಟೀ, ಹಣ್ಣುಗಳ ಕಲೆಯಾಗಿದ್ದರೆ ಆ ಬಟ್ಟೆಗಳನ್ನು ಒಂದು ಮಗ್ ವಿನೇಗರ್ ನಲ್ಲಿ ನೆನೆಸಿ ಒಗೆಯುವುದರಿಂದ ಕಲೆಗಳು ಹೋಗುತ್ತವೆ.
 • ಈರುಳ್ಳಿ ರಸ ಮತ್ತು ವಿನೆಗರ್ ಅನ್ನು ಸಮನಾದ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಅದನ್ನು ಮುಖದ ಮೇಲೆ ಕಾಣುವ ಏಜ್ ಸ್ಪಾಟ್ ಗಳಿಗೆ ನಿತ್ಯ ಹಚ್ಚುತ್ತಾ ಬಂದರೆ ಕಲೆಗಳು ಮಾಯವಾಗಿ ಮುಖ ಅಂದವಾಗುತ್ತದೆ.
 • ಕಾಲು ಕಪ್ ವಿನೇಗರ್ ಅನ್ನು ಒಂದು ಕಪ್ ನೀರಿಗೆ ಮಿಕ್ಸ್ ಮಾಡಿ ಅದರಿಂದ ಗಾಜಿನ ಕಿಟಕಿಗಳನ್ನು ಕ್ಲೀನ್ ಮಾಡಿ, ನಂತರ ನ್ಯೂಸ್ ಪೇಪರ್ನಿಂದ ಕಿಟಕಿಗಳನ್ನು ಒರೆಸಿದರೆ ಕಿಟಕಿಗಳು ಹೊಳೆಯುವಂತೆ ಕ್ಲೀನ್ ಆಗುತ್ತವೆ.
 • ಬಟ್ಟೆ ಒಗೆಯುವ ಲೋಡಿಗೆ ಸ್ಟ್ರಾಂಗ್ ಆದ ಡಿಟರ್ಜಂಟ್ ಬಳಸುವ ಬದಲು ಒಂದು ಕಪ್ ವಿನೇಗರ್ ಮತ್ತು ಒಂದು ಕಪ್ ಬೇಕಿಂಗ್ ಸೋಡಾ ಬಳಸಿದರೆ ಬಟ್ಟೆಗಳು ಶುಭ್ರವಾಗುತ್ತವೆ. ಒಗೆದ ಬಟ್ಟೆಗಳು ಒಳ್ಳೆಯ ವಾಸನೆ ಬರುತ್ತವೆ.
 • ಒಂದು ಕಪ್ ವಿನೇಗರ್ ಅನ್ನು ಎರಡು ಕಪ್ ನೀರಿನಲ್ಲಿ ಬೆರೆಸಿ ಅದಕ್ಕೆ ಒಂದು ಹನಿ ನಿಂಬೆ ರಸ ಹಾಕಿ ಇದರಿಂದ ಅಡಿಗೆ ಮನೆಯ ಕೌಂಟರ್ ಗಳನ್ನು ಕ್ಲೀನ್ ಮಾಡಿದರೆ ಬ್ಯಾಕ್ಟೀರಿಯಾಗಳಿಂದ ಕ್ಲೀನ್ ಆಗುತ್ತದೆ ಮತ್ತು ಒಳ್ಳೆಯ ವಾಸನೆ ಬರುತ್ತದೆ.
 • ತಲೆ ಸ್ನಾನ ಮಾಡಿದ ಮೇಲೆ ಒಂದು ಕಪ್ ವಿನೇಗರ್ ನಿಂದ ತಲೆಕೂದಲನ್ನು ತೊಳೆಯುವುದರಿಂದ ಶಾಂಪೂವಿನ ಉಳಿಕೆ ಕ್ಲೀನ್ ಆಗಿ ಕೂದಲಿಗೆ ಹೊಳಪು ಬರುತ್ತದೆ.
 • ಟಾಯ್ಲೆಟ್ಟನ್ನು ಕ್ಲೀನ್ ಮಾಡಲು ಬ್ಲೀಚ್ ಉಪಯೋಗಿಸುವುದಕ್ಕಿಂತ ವಿನೇಗರ್ ಉಪಯೋಗಿಸಿ ತೊಳೆದರೆ ಕ್ರಿಮಿ ನಾಶವಾಗುತ್ತದೆ, ಟಾಯ್ಲೆಟ್ ಹೊಳೆಯುತ್ತದೆ ಮತ್ತು ಬ್ಲೀಚ್ ನಿಂದ ಏಳುವ ವಿಷಕಾರೀ ಹೋಗೆ ಮನೆಯನ್ನು ತುಂಬುವುದಿಲ್ಲ.
 • ಟಾಯ್ಲೆಟ್ ತುಂಬಾ ಕೊಳಕಾಗಿದ್ದರೆ ವಿನೆಗರ್ ಅನ್ನು ರಾತ್ರಿ ಹಚ್ಚಿಟ್ಟು ಬೆಳಗ್ಗೆ ಕ್ಲೀನ್ ಮಾಡಬಹುದು.
 • ಮನೆಯಲ್ಲಿ ಮುಗ್ಗಲು ವಾಸನೆ ಬರುತ್ತಿದ್ದರೆ ಅಂತಹ ಜಾಗದಲ್ಲಿ ಒಂದು ಅಗಲ ಬಾಯಿಯ ಬಟ್ಟಲಿನಲ್ಲಿ ಸ್ವಲ್ಪ ವಿನೆಗರ್ ತುಂಬಿಸಿಟ್ಟರೆ ಮುಗ್ಗಲು ವಾಸನೆ ಕಡಿಮೆಯಾಗುವುದು.
 • ಮನೆಯಲ್ಲಿ ಸಣ್ಣ ಸೊಳ್ಳೆಗಳ ಕಾಟ ಹೆಚ್ಚಾದಾಗಲೂ ಹೀಗೆ ಮಾಡುವುದರಿಂದ ಸೊಳ್ಳೆಗಳು ವಿನೆಗರ್ ಗೆ ಆಕರ್ಷಿತವಾಗಿ ಟ್ರಾಪ್ ಆಗುತ್ತವೆ.
 • ಮೀನು ಮತ್ತಿತರ ಅತಿಯಾದ ವಾಸನೆಯಿರುವ ಅಡಿಗೆಗಲನ್ನು ಮಾಡುವಾಗ ಒಂದು ಸಣ್ಣ ಟವಲ್ ಅನ್ನು ವಿನೆಗರ್ ನಲ್ಲಿ ನೆನೆಸಿ ಅಡಿಗೆ ಮಾಡುವಲ್ಲಿ ನೇತುಹಾಕಿದರೆ ವಾಸನೆ ಇಡೀ ಮನೆಗೆ ಹರಡುವುದು ತಪ್ಪುತ್ತದೆ.
 • ಗೋಡೆಗೆ ಅಂಟಿಸಿದ್ದ ಅಂಟಿನ (ಗಮ್) ಕರೆ ತೆಗೆಯಲು ವಿನೆಗರ್ ಬಳಸಬಹುದು.
 • ಒಂದೇ ಸಮನೆ ಬಿಕ್ಕಳಿಕೆ ಬರುತ್ತಿದ್ದರೆ ಒಂದು ದೊಡ್ಡ ಲೋಟ ನೀರಿಗೆ ಒಂದು ಸ್ಪೂನ್ ವಿನೆಗರ್ ಸೇರಿಸಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
 • ಒಂದು ಸ್ಪೂನ್ ವಿನೆಗರ್ ಗೆ ಒಂದು ಚಿಟಿಕೆ ಉಪ್ಪು ಮಿಕ್ಸ್ ಮಾಡಿ ಇದರಿಂದ ತಾಮ್ರವನ್ನು ಹೊಳೆಯುವಂತೆ ತೊಳೆಯಬಹುದು.
 • ಅಡಿಗೆ ಮನೆ ಬಾತ್ ರೂಮಿನ ನಲ್ಲಿಗಳ ಮೇಲೆ ಕ್ಯಾಲ್ಸಿಯಂ ಸೇರಿದ್ದರೆ ಅವಕ್ಕೆ ವಿನೇಗರ್ ಹಚ್ಚಿಟ್ಟು ಕೆಲವು ಗಂಟೆಗಳು ಬಿಟ್ಟು ತೊಳೆಯುವುದರಿಂದ ಅವು ಹೊಳೆಯುತ್ತವೆ.
 • ಒಂದು ಸ್ಪೂನ್ ವಿನೆಗರ್ ೫ ಸ್ಪೂನ್ ನೀರನ್ನು ಮಿಕ್ಸ್ ಮಾಡಿ ಇದರಿಂದ ಕನ್ನಡಿಗಳನ್ನು ಒರೆಸಿದರೆ ಕನ್ನಡಿಗಳಲ್ಲಿರುವ ಕಲೆ ಹೋಗಿ ಸ್ವಚ್ಚವಾಗುತ್ತವೆ.
 • ಮೊಟ್ಟೆಗಳನ್ನು ಬೇಯಿಸುವಾಗ ನೀರಿಗೆ ಒಂದು ಸ್ಪೂನ್ ವಿನೆಗರ್ ಹಾಕುವುದರಿಂದ ಮೊಟ್ಟೆಗಳು ಬಿರುಕು ಬಿಡುವುದಿಲ್ಲ ಮತ್ತು ಸುಲಭವಾಗಿ ಸಿಪ್ಪೆ ತೆಗೆಯಬಹುದು.
 • ಕಾಲು-ಕೈ ಬೆರಳುಗಳ ಸಂದಿಗಲಲ್ಲಿ ಸೆಲೆತ ಅಥವಾ ಫಂಗಸ್ ಆದಾಗ ಕೈಕಾಲನ್ನು ವಿನೆಗರ್ ಮಿಶ್ರಿತ ನೀರಿನಲ್ಲಿ ನೆನೆಸುವುದರಿಂದ ಫಂಗಸ್ ಹೊರಟುಹೋಗುತ್ತದೆ.

 

 

 
 
 
 
 
 
 
 
Copyright © 2011 Neemgrove Media
All Rights Reserved