-
ಸಕ್ಕರೆ ಮತ್ತು ನೀರನ್ನು ನಾನ್ ಸ್ಟಿಕ್ ಪಾತ್ರೆಯಲ್ಲಿ ತೆಗೆದುಕೊಂಡು ಮೀಡಿಯಂ ಹೀಟ್ ನಲ್ಲಿ ಕುದಿಸಿಕೊಳ್ಳಿ.
-
ಸಕ್ಕರೆ ಗುಳ್ಳೆಗುಳ್ಳೆಯಾಗುವಂತಾದಾಗ ಅದಕ್ಕೆ ಅರ್ಧದಷ್ಟು ಹಾಲನ್ನು ಹಾಕಿ ನಿಧಾನಕ್ಕೆ ಕಲಕಿ.
ಈ ಮಿಶ್ರಣವು ನೊರೆನೊರೆಯಾಗುತ್ತಾ (froth) ಬರುತ್ತದೆ.
-
ಈ ಸಮಯದಲ್ಲಿ ಮಿಶ್ರಣವನ್ನು ಹೀಟ್ ನಿಂದ ತೆಗೆದು ಸಣ್ಣದೊಂದು ಜಾಲರಿ ಉಪಯೋಗಿಸಿ ಬೇರೊಂದು ಪಾತ್ರೆಗೆ ಸೋಸಿಕೊಳ್ಳಿ. ಹೀಗೆ ಮಾಡುವುದರಿಂದ ಸಕ್ಕರೆಯಲ್ಲಿನ ಧೂಳನ್ನು ಸೋಸಿದಂತಾಗುತ್ತದೆ.
-
ಮತ್ತೆ ಮಿಶ್ರಣವನ್ನು ಅದೇ ನಾನ್ ಸ್ಟಿಕ್ ಪ್ಯಾನ್ ಗೆ ಸುರುವಿಕೊಳ್ಳಿ, ಮತ್ತೆ ಅದನ್ನು ಕುದಿಯಲು ಬಿಡಿ.
-
ಮತ್ತೊಮ್ಮೆ ಕುದಿ ಬಂದಾಗ ಉಳಿದ ಅರ್ಧ ಹಾಲನ್ನು ಬೆರೆಸಿ, ಮತ್ತೆ ನೊರೆಯಾಗಲು ಬಿಡಿ.
-
ಸೋಸುವ ಕ್ರಿಯೆಯನ್ನು ಇನ್ನೊಮ್ಮೆ ಪುನರಾವರ್ತಿಸಿ, ಮತ್ತೆ ಮಿಶ್ರಣವನ್ನು ಕುದಿಯಲು ಬಿಡಿ.
-
ಸಕ್ಕರೆ ಅಚ್ಚು ಮಾಡುವಾಗ ಮಿಶ್ರಣವನ್ನು ಸದಾ ಕೈಯ್ಯಾಡುತ್ತಲೇ ಇರಬೇಕು.
-
ಮಿಶ್ರಣ ಗಟ್ಟಿ ಮತ್ತು ಅಪಾರದರ್ಶಕವಾದಾಗ (opaque) ಅದನ್ನು ಸ್ವಲ್ಪ ತೆಗೆದುಕೊಂಡು ಸ್ವಲ್ಪ ಎಣ್ಣೆ ಹಚ್ಚಿದ ಪಾರ್ಚ್ಮೆಂಟ್ ಪೇಪರ್ ಮೇಲೆ ಹಾಕಿನೋಡಿ.
-
ಪೇಪರ್ ಮೇಲೆ ಹಾಕಿದ ಮಿಶ್ರಣ ತಕ್ಷಣ ಗಟ್ಟಿಯಾದರೆ ಅದು ಸರಿಯಾದ ಹದಕ್ಕೆ ಬಂದಿದೆ ಎಂದು ಅರ್ಥ.
-
ಈಗ ಮಿಶ್ರಣವನ್ನು ಯಾವುದೇ ನೊರೆ ಅಥವಾ ಗಾಳಿಯ ಗುಳ್ಳೆಗಳಿಲ್ಲದಂತೆ ಕೈಯ್ಯಾಡಿಸಿ.
ನಿಮಗಿಷ್ಟ ಬಂದ ಅಚ್ಚು(ಮೌಲ್ಡ್)ಗಳಿಗೆ ಸಮನಾಗಿ ತುಂಬಿಸಿ.
-
ಹತ್ತು-ಹದಿನೈದು ನಿಮಿಷ ಸಕ್ಕರೆಯನ್ನು ಸರಿಯಾಗಿ ಗಟ್ಟಿಯಾಗಲು ಬಿಡಿ.
-
ಅಚ್ಚುಗಳು ಗಟ್ಟಿಯಾದಾಗ ನಿಧಾನಕ್ಕೆ ಅವನ್ನು ಬೋರಲು ಮಾಡಿ ಸಕ್ಕರೆ ಅಚ್ಚುಗಳನ್ನು ಬಿಡಿಸಿಡಿ.