|
|
|
|
ಬೇಕಾಗುವ ಪದಾರ್ಥಗಳು: |
| |
- ಮೊಟ್ಟೆ-೪-೫
- ಆಲೂಗಡ್ಡೆ-೧ ಅಥವ ೨ (ಬೇಕಿದ್ದಲ್ಲಿ ಮಾತ್ರ)
- ಎಣ್ಣೆ-೨ ಟೇಬಲ್ ಸೂನ್
- ಸಾಸಿವೆ-೧/೪ ಸ್ಪೂನ್
- ಕರಿಬೇವು-೨ ಕಡ್ಡಿ
ಮಸಾಲೆಗೆ:
- ಈರುಳ್ಳಿ-೩/೪ (ಸಣ್ಣದು)
- ಟೊಮ್ಯಾಟೋ-೧
- ಬೆಳ್ಳುಳ್ಳಿ-೩-೪ ಹಿಕಳು
- ಶುಂಟಿ-೧/೨ ಇಂಚು
- ಅರಿಶಿನ-ಒಂದು ಚಿಟಿಕೆ
- ಅಚ್ಚಮೆಣಸಿನಕಾಯಿಪುಡಿ-೧ ಟೀ ಸ್ಪೂನ್ ಅಥವಾ ಖಾರ ಬೇಕಾದಷ್ಟು
- ಕೊತ್ತಂಬರಿ ಬೀಜ-೧ ಟೇಬಲ್ ಸ್ಪೂನ್
- ಜೀರಿಗೆ-೧ ಟೀ ಸ್ಪೂನ್
- ಕಾಳು ಮೆಣಸು-೧೦ ಕಾಳು
- ತೆಂಗಿನ ತುರಿ-೧/೨ ಕಪ್ (ಒಣ ಕೊಬರಿ ತುರಿಯೂ ಆಗಬಹುದು)
- ಚಕ್ಕೆ-೧ ಇಂಚು
- ಲವಂಗ-೨-೩
- ಗಸಗಸೆ-೧ ಟೀ ಸ್ಪೂನ್
- ಕೊತ್ತಂಬರಿ ಸೊಪ್ಪು-೨ ಟೀ ಸ್ಪೂನ್ (ಸಣ್ಣಗೆ ಹೆಚ್ಚಿದ್ದು)
|
| | |
|
|
|
|
|
ಬಗೆ-೧
ಮೊಟ್ಟೆ ಸಾರು
ಶ್ರೀಮತಿ ಶ್ವೇತಾ ಧರಣೇಶ್
ವಿಧಾನ:
- ಮೊಟ್ಟೆಗಳನ್ನು ಬೇಯಿಸಿ ಇಟ್ಟುಕೊಳ್ಳಿ.
- ಕೊತ್ತಂಬರಿ ಬೀಜ, ಜೀರಿಗೆ, ಗಸಗಸೆ, ಕಾಳು ಮೆಣಸು, ಚಕ್ಕೆ ಮತ್ತು ಲವಂಗವನ್ನು ಎಣ್ಣೆ ಹಾಕದೆಯೇ ಬಾಣಲಿಯಲ್ಲಿ ಬೆಚ್ಚಗೆ ಹುರಿದುಕೊಳ್ಳಿ
- ಹುರಿದ ಪದಾರ್ಥಗಳ ಜೊತೆ ತೆಂಗಿನ ತುರಿ ಸೇರಿಸಿ, ಕಡಿಮೆ ನೀರು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
- ಪ್ಯಾನ್ ಒಂದನ್ನು ಬಿಸಿಗಿಟ್ಟು, ಎಣ್ಣೆ ಹಾಕಿ, ಸಾಸಿವೆ, ಕರಿಬೇವು ಹಾಕಿ ಒಗ್ಗರಿಸಿಕೊಳ್ಳಿ. ಇದಕ್ಕೆ ರುಬ್ಬಿದ ಮಸಾಲೆ, ಅರಿಶಿನ ಮತ್ತು ಉಪ್ಪು ಹಾಕಿ ಮಿಶ್ರ ಮಾಡಿ. ಸ್ವಲ್ಪ ಬೇಯಲು ಬಿಡಿ.
- ಇದಕ್ಕೆ ಹೆಚ್ಚಿದ ಆಲೂಗಡ್ಡೆ ಹಾಕಿ ೧೦ -೧೨ ನಿಮಿಷ ಬೇಯಿಸಿ. (ಅಲೂ ಸಂಪೂರ್ಣ ಬೇಯಬೇಕು ಮತ್ತು ಮಸಾಲೆಯ ಹಸಿ ವಾಸನೆ ಹೋಗಬೇಕು).
- ಇದಕ್ಕೆ ಬೇಯಿಸಿ ಸಿಪ್ಪೆ ತೆಗೆದಿಟ್ಟುಕೊಂಡ ಮೊಟ್ಟೆಗಳನ್ನು ಅರ್ಧ ಭಾಗಕ್ಕೆ ಕತ್ತರಿಸಿ ಸೇರಿಸಿ, ೨-೩ ನಿಮಿಷ ಬೇಯಿಸಬೇಕು.
- ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ. ಅನ್ನ, ಚಪಾತಿ ಅಥವಾ ಘೀ ರೈಸ್ ಜೊತೆಯಲ್ಲಿ ತಿನ್ನಬಹುದು.
| |
|
|
|
| |
| |
ಬಗೆ ೨ ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
|
ಬೇಕಾಗುವ ಪದಾರ್ಥಗಳು: |
| |
- ಕಿನ್ವಾ-೨ ಸಣ್ಣ ಬಟ್ಟಲು (ಅಳತೆಗೆ ಒಂದೇ ಬಟ್ಟಲನ್ನು ಉಪಯೋಗಿಸಿ)
- ಕಾಡಕ್ಕಿ-೧ ಸಣ್ಣ ಬಟ್ಟಲು
- ಅಮರಾಂತ-೧ ಸಣ್ಣ ಬಟ್ಟಲು
- ಚಿಯಾ-೧/೨ ಬಟ್ಟಲು
- ಹೆಸರು ಬೇಳೆ-೧ ಬಟ್ಟಲು
- ಶುಂಟಿ-ಅರ್ಧ ಇಂಚು
- ಬೆಳ್ಳುಳ್ಳಿ-೨ ಮೊಗ್ಗು ಮೀಡಿಯಂ ಗಾತ್ರದ್ದು
- ಜೀರಿಗೆ ಪುಡಿ- ೧/೨ ಟೀ ಸ್ಪೂನ್
- ಬಡೇ ಸೋಂಪು- ೧/೪ ಟೀ ಸ್ಪೂನ್
- ಕಾಳು ಮೆಣಸಿನ ಪುಡಿ- ೧/೨ ಟೀ ಸ್ಪೂನ್
- ಅರಿಶಿನ-೧/೪ ಟೀ ಸ್ಪೂನ್
- ಕೆಂಪುಮೆಣಸಿನಕಾಯಿ-೩ ರಿಂದ ೪ (ಹೆಚ್ಚು
- ಖಾರ ಬೇಕಾದಲ್ಲಿ ೧ ಹಸಿಮೆಣಸಿನಕಾಯಿಯನ್ನು ಸೀಳಿ ಬಳಸಿ)
- ಇಂಗು-೧ ಚಿಟಿಕೆ
- ಸಾಸಿವೆ-೧/೪ ಟೀ ಸ್ಪೂನ್
- ಆಲಿವ್ ಎಣ್ಣೆ ಅಥವಾ ತುಪ್ಪ-೧ ಟೇಬಲ್ ಸ್ಪೂನ್
- ಉಪ್ಪು-ರುಚಿಗೆ ಬೇಕಾದಷ್ಟು
- ಕರಿಬೇವು-೨ ಕಡ್ಡಿ
- ಕೊತ್ತಂಬರಿ-ಅರ್ಧ ಕಟ್ಟು
|
|
| | |
|
|
|
|
|
ಕಿನ್ವಾ ಮತ್ತು ಕಾಡಕ್ಕಿ (ವೈಲ್ಡ್ ರೈಸ್) ಕಿಚಡಿ
ವಿಧಾನ:
- ಚಿಯಾ, ಕಿನ್ವಾ ಮತ್ತು ಅಮರಾಂತ ಧಾನ್ಯಗಳನ್ನು ನೀರಿಗೆ ಹಾಕಿ ತೊಳೆಯಲು ಸುಲಭವಾಗುವುದಿಲ್ಲ. ಹಾಗಾಗಿ ಅವನ್ನು ಸೋಸಿ, ಸ್ವಚ್ಚ ಮಾಡಿಟ್ಟುಕೊಳ್ಳಿ. ವೈಲ್ಡ್ ರೈಸ್ ಅನ್ನು ಚನ್ನಾಗಿ ತೊಳೆಯಿರಿ.
- ಪ್ರೆಶರ್ ಕುಕ್ಕರ್ ಪ್ಯಾನ್ ಅನ್ನು ಸ್ಟವ್ ಮೇಲಿಟ್ಟು ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿಯಾಗಲು ಬಿಡಿ.
- ಬಿಸಿಯಾದನಂತರ ಸಾಸಿವೆ ಹಾಕಿ ಸಿಡಿಸಿಕೊಳ್ಳಿ. ಕರಿಬೇವು, ಕೆಂಪುಮೆಣಸಿನಕಾಯಿ ಮತ್ತು ಇಂಗು ಹಾಕಿ ಮಿಕ್ಸ್ ಮಾಡಿ.
- ಸ್ಟವ್ ನ ಉರಿಯನ್ನು ಕಡಿಮೆ ಮಾಡಿಕೊಂಡು ಪ್ಯಾನ್ ಗೆ ಜೀರಿಗೆ ಪುಡಿ, ಮೆಣಸಿನ ಪುಡಿ, ಸೋಂಪನ್ನು ಹಾಕಿ ಮಿಶ್ರ ಮಾಡಿ.
- ಅದು ಹುರಿಯುತ್ತಿರುವಂತೆಯೇ ಜಜ್ಜಿಟ್ಟ ಶುಂಟಿ-ಬೆಳ್ಳುಳ್ಳಿಯ ಪೇಸ್ಟ್ ಸೇರಿಸಿ.
ಎಲ್ಲವನ್ನು ಸೇರಿಸಿ ಕಯ್ಯಾಡಿಸಿ.
- ಇದಕ್ಕೆ ಕಿನ್ವಾ, ಕಾಡಕ್ಕಿ, ಚಿಯಾ, ಅಮರಾಂತ ಧಾನ್ಯವನ್ನು ಸೇರಿಸಿ ಎರಡು ನಿಮಿಷ ಚನ್ನಾಗಿ ಮಿಶ್ರ ಮಾಡಿ.
- ಧಾನ್ಯವನ್ನು ಅಳತೆ ಮಾಡಿದ ಬಟ್ಟಲಿನಲ್ಲಿ ೧೧ ಬಟ್ಟಲು ನೀರು ಸೇರಿಸಿ, ಎಲ್ಲವನ್ನು ಚನ್ನಾಗಿ ಬೆರೆಸಿ.
- ಇದಕ್ಕೆ ಚನ್ನಾಗಿ ಹೆಚ್ಚಿಟ್ಟ ಅರ್ಧ ಕಟ್ಟು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
- ರುಚಿಗೆ ಬೇಕಾದಷ್ಟು ಉಪ್ಪು ಹಾಕಿ.ಎಲ್ಲವನ್ನೂ ಮತ್ತೊಮ್ಮೆ ಸರಿಯಾಗಿ ಮಿಶ್ರ ಮಾಡಿ ಕುಕ್ಕರ್ ಪ್ಯಾನ್ ನ ಮುಚ್ಚಳ ಮುಚ್ಚಿ.
- ಮೀಡಿಯಂ ಶಾಖದಲ್ಲಿ ಒಂದು ಸಿಳ್ಳೆ ಬರುವವರೆಗೆ ಮಾತ್ರ ಬೇಯಿಸಿ.
ಬಿಸಿಯಿದ್ದಾಗಲೇ ತುಪ್ಪ, ಉಪ್ಪಿನಕಾಯಿಯ ಜೊತೆ ಆನಂದಿಸಿ.
(ವಿಸೂ-ಬೇಕಾದಲ್ಲಿ ಈ ಖಾದ್ಯಕ್ಕೆ, ಧಾನ್ಯಗಳ ಜೊತೆಗೇ ಕ್ಯಾರೆಟ್, ಬ್ರಾಕ್ಲಿ, ಹುರುಳಿಕಾಯಿ, ಹಸಿ ಬಟಾಣಿ ಮುಂತಾದ ತರಕಾರಿಗಳನ್ನು ಸಣ್ಣಗೆ ಕತ್ತರಿಸಿ ಸೇರಿಸಬಹುದು) | |
|
|
|
| |
| |
|
|
|
|
Copyright © 2011 Neemgrove Media
All Rights Reserved
|
|
|
|