ಅಂಗಳ      ಸಂಪಾದಕೀಯ
 


 ಬೇಕಾಗುವ ಪದಾರ್ಥಗಳು:
 
ಮೀನು-೧ ಕೆ ಜಿ (ಸ್ವಚ್ಚ ಮಾಡಿಕೊಂಡು, ಹೆಚ್ಚಿಟ್ಟುಕೊಂಡ ಸಿಹಿ ನೀರಿನ ಅಥವಾ ಹೊಳೆ ಮೀನು. ಇಲ್ಲಿ ಬಳಸಿರುವುದು ಕ್ಯಾಟ್ ಫಿಶ್ ಅನ್ನು)
ಈರುಳ್ಳಿ-೨ ಮಧ್ಯಮ ಗಾತ್ರದ್ದು
ಟೊಮ್ಯಾಟೊ-೧ ಚಿಕ್ಕದು
ತೆಂಗಿನ ತುರಿ-೧ ಬಟ್ಟಲು
ಹುಣಸೆ ರಸ-೨ ಚಮಚ
ಅಚ್ಚ ಮೆಣಸಿನ ಪುಡಿ-೨ ಚಮಚ
ಧನಿಯಾ ಪುಡಿ-೨ ಚಮಚ
ಗಸಗಸೆ-೧ ಟೀ ಚಮಚ
ಹುರಿಗಡಲೆ-೧ ಟೀ ಚಮಚ
ಚಕ್ಕೆ-೧
ಲವಂಗ-೨
ಶುಂಟಿ-ಕಾಲು ಇಂಚು (ಪೇಸ್ಟ್ ಮಾಡಿಟ್ಟುಕೊಳ್ಳಿ)
ಬೆಳ್ಳುಳ್ಳಿ-೨ ಹಿಕಳು (ಪೇಸ್ಟ್ ಮಾಡಿಟ್ಟುಕೊಳ್ಳಿ)
ಕೊತ್ತಂಬರಿ ಸೊಪ್ಪು-೭-೮ ಕಡ್ಡಿ
ನಿಂಬೆ ರಸ-೨ ಚಮಚ
ಎಣ್ಣೆ-೧ ಸಣ್ಣ ಬಟ್ಟಲು
ಉಪ್ಪು-ರುಚಿಗೆ ತಕ್ಕಷ್ಟು

  ಮೀನು ಸಾರು

ಶ್ರೀಮತಿ. ರಾಜಮ್ಮ ರಾಜಶೇಖರ್

 
 
ವಿಧಾನ:
  • ಶುಂಟಿ-ಬೆಳ್ಳುಳ್ಳಿ ಪೇಸ್ಟ್, ಎಣ್ಣೆ, ಉಪ್ಪನ್ನು ಹೊರತು ಪಡಿಸಿ ಉಳಿದೆಲ್ಲಾ ಪದಾರ್ಥಗಳನ್ನು ರುಬ್ಬಿಟ್ಟುಕೊಳ್ಳಿ.
  • ಒಲೆ ಮೇಲೆ ಮಧ್ಯಮ ಉರಿಯಲ್ಲಿ ದಪ್ಪ ತಳದ ಪಾತ್ರೆ ಇಟ್ಟು, ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಕಾದ ಮೇಲೆ ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದನ್ನು ಲಘುವಾಗಿ ಹುರಿದುಕೊಳ್ಳಿ.
    ನಂತರ ರುಬ್ಬಿರುವ ಮಸಾಲೆ ಸೇರಿಸಿ ಹುರಿದುಕೊಳ್ಳಿ. ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಕುದಿಸಿ.
  • ಮಸಾಲೆಯ ಹಸಿ ವಾಸನೆ ಕಡಿಮೆಯಾಗುವಷ್ಟು ಬೆಂದಾಗ, ಒಲೆಯ ಉರಿ ಕಡಿಮೆ ಮಾಡಿ, ಮೀನುಗಳ ಹೋಳುಗಳನ್ನು ನಿಧಾನವಾಗಿ ಮಸಾಲೆಯೊಳಗೆ ಮುಳುಗುವಂತೆ ಹಾಕಿ.
  • ಕಡಿಮೆ ಉರಿಯಲ್ಲಿಯೇ ೫ ರಿಂದ ೮ ನಿಮಿಷ ಬೇಯಿಸಿ, ಒಲೆ ಆರಿಸಿ(ಅತಿಯಾದ ಉರಿಯಲ್ಲಿ, ಹೆಚ್ಚು ಬೇಯಿಸಿದರೆ ಮೀನಿನ ಚೂರುಗಳು ಪುಡಿಯಾಗುತ್ತವೆ).
    ನಿಂಬೆ ಹಣ್ಣಿನ ರಸ ಸೇರಿಸಿ. ಅನ್ನ, ಘೀ ರೈಸ್ ಅಥವಾ ಕುಚ್ಚಕ್ಕಿ ಅನ್ನದ ಜೊತೆ ಆಸ್ವಾದಿಸಿ.