ಡಾ. ಪಂಡಿತಾರಾಧ್ಯ
ಶಿಕ್ಷಣದಲ್ಲಿ ಕನ್ನಡ' ಎಂದರೆ ಕನ್ನಡವನ್ನು ಒಂದು ವಿಷಯವಾಗಿ ಕಲಿಸುವುದು ಎಂದೂ, ಕನ್ನಡ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನೂ ಕಲಿಸುವುದು ಎಂದೂ ಅರ್ಥವಾಗುತ್ತದೆ. ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಬಳಸುವ ಬಗ್ಗೆ ನನ್ನ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
೧೯೮೦ರ ದಶಕದಲ್ಲಿ ಗೋಕಾಕ ವರದಿಯ ಜಾರಿಗಾಗಿ ನಡೆದ ಹೋರಾಟ ಮತ್ತು ಚಿಂತನೆಗಳ ಫಲವಾಗಿ ೨೯-೪-೧೯೯೪ ರಂದು ರಾಜ್ಯ ಸರಕಾರವು ತನ್ನ ಭಾಷಾನೀತಿಯ ಆದೇಶವನ್ನು ಹೊರಡಿಸಿತು. ಈ ಆದೇಶವನ್ನು ರಾಜ್ಯದ ಉಚ್ಚ ನ್ಯಾಯಾಲಯ ಮತ್ತು ಸರ್ವೋನ್ನತ ನ್ಯಾಯಾಲಯಗಳು ಎತ್ತಿ ಹಿಡಿದವು.