ಅಂಗಳ      ಇನಿತೆನೆ
Print this pageAdd to Favorite

ನವಿಲು ಕುಣಿದಾವೆ-ನಗಾರಿ ಬಡಿದಾವೆ: ಕಿನ್ನರಿಜೋಗಿಗಳು

ಡಾ. ಚಕ್ಕೆರೆ ಶಿವಶಂಕರ್
 
 
 
 
 
ಕರ್ನಾಟಕದ ಜನಪ್ರಿಯ ವೃತ್ತಿಗಾಯಕರಾದ ಕಿನ್ನರಿಜೋಗಿಗಳು ಸೌಂದರ್ಯಕ್ಕೆ ಮತ್ತು ಆಕರ್ಷಣೆಗೆ ಹೆಸರಾದವರು. ಇವರ ವೇಷಭೂಷಣಗಳು ಮನಮೋಹಕವಾದುವು. ತಲೆಗೆ ಚಂದ್ರಬಿಲ್ಲೆ, ಮಣಿಕಟ್ಟು, ಗಳಾಪುಗಳಿಂದ ಅಲಂಕರಿಸಿದ ಮುಂಡಾಸು. ಅದಕ್ಕೊಂದು ಸಣ್ಣ ತ್ರಿಶೂಲ, ಕರಿಯ ನಿಲುವಂಗಿ, ಕಚ್ಚೆ ಪಂಚೆ, ಕೊರಳಿಗೆ ನೇತಡುವ ಮುತ್ತಿನ ಸರಗಳು, ರುದ್ರಾಕ್ಷಿ ಹಾರ , ಕಿವಿಗಳಿಗೆ ಕರ್ಣಕುಂಡಲ, ಕಾಪಾಲಿ, ಹಣೆಯಲ್ಲಿ ವಿಭೂತಿ ಮತ್ತು ಅರ್ಧ ಚಂದ್ರಾಕೃತಿಯ ನಾಮ, ಬಗಲಲ್ಲಿ ಜೋಳಿಗೆ, ಕಾಲಿಗೆ ಗೆಜ್ಜೆ, ಕೈಯಲ್ಲಿ ಕಿನ್ನರಿ.
 
ಕಿನ್ನರಿಯು ತಂತೀ ವಾದ್ಯ. ಸುಮಾರು ಮೂರು ಮೊಳ ಉದ್ದದ ಬಿದಿರಿನ ಗಳುವಿಗೆ ಮೂರು ಸೋರೆ ಬುರುಡೆಗಳು. ಎರಡು ದೊಡ್ಡದು, ಒಂದು ಚಿಕ್ಕದು. ಬಿದಿರಿನ ಹೊರಮೈಗೆ ಮುಳ್ಳುಹಂದಿಯ ಚಿಪ್ಪಿನಿಂದ ಮಾಡಿದ ಹತ್ತು ಇಲ್ಲವೆ ಹನ್ನೆರಡು ಮೆಟ್ಟಿಲುಗಳು. ಇವುಗಳನ್ನು ಸಾರಿ ಎಂದು ಕರೆಯುತ್ತಾರೆ. ಈ ಸಾರಿಗಳನ್ನು ಬಿದಿರಿನ ಗಳಕ್ಕೆ ಜೇನುಮೇಣದಿಂದ ಅಂಟಿಸುತ್ತಾರೆ. ಬಿದಿರಿನ ಒಂದು ತುದಿಯಲ್ಲಿ ತಿರುವುಳ್ಳ ಶೂಲದ ಕಡ್ಡಿಯನ್ನು ಬಂಧಿಸಿದ್ದು ಮತ್ತೊಂದು ತುದಿಯಲ್ಲಿ ಮರದ ಗಿಣಿಯನ್ನು ಸಿಕ್ಕಿಸಿರುತ್ತಾರೆ. ಸಾರಿಯ ಮೇಲಿನಿಂದ ಹಾಯ್ದು ಬರುವ ತಂತಿಗಳು ಈ ಮರದ ಗಿಣಿಯನ್ನು ಸುತ್ತುವರಿದಿರುತ್ತವೆ. ಶೂಲದ ಕಡ್ಡಿಗಳನ್ನು ತಿರುಗಿಸಿ ಶ್ರುತಿಗೆ ಸರಿಹೊಂದಿಸಿಕೊಳ್ಳುತ್ತಾರೆ. ತಮ್ಮ ವೇಷಭೂಷಣಗಳಷ್ಟೇ ಅಲ್ಲದೆ, ತಾವು ಬಾರಿಸುವ ಕಿನ್ನರಿ ವಾದ್ಯವೂ ಸಹ ಅಂದವಾಗಿ ಕಾಣಬೇಕೆನ್ನುವ ಸೌಂದರ್ಯಾರಾಧಕರು ಕಿನ್ನರಿಜೋಗಿಗಳು.
 

ಕನ್ನಡ ಸೊಗಡಿನ ಹುಡುಕಾಟ (ಹಿ.ಶಿ.ರಾ.)

ಮುಗ್ಗಲಮಕ್ಕಿಯ ಗುಡಿಸಲಿನಿಂದ... (ಬಿ.ಎಸ್. ನಾಗರತ್ನ) 

"ಆ ದಶಕ" -ಬಿಡುಗಡೆಯ ಮಾತು (ದೇವನೂರು)

ಗೀತಕ್ಕನ ಭಗವದ್ಗೀತೆ (ಜಾನಕಿ ಮಂಜುನಾಥಪುರ) 

ಗ್ರಾಮ ಪಂಚಾಯ್ತಿ ಎಲೆಕ್ಷನ್ ಗಳ ’ಆಪರೇಷನ್’ ಗೆ ಸಜ್ಜಾಗಿರುವ ಕಮಲ  

ನಿಮ್ಮೇರಿಯಾ ಕಾರ್ಪೋರೇಟರ್...ಕ್ವಾರ್ಟರ್ ಶಿವ (ಬಿ.ಎಸ್.ಎಸ್.)

ನಮಗೆ ಉಳಿದಿರುವ ಮಲೆನಾಡು (ಎಸ್.ಸಿರಾಜ್ ಅಹಮದ್) 

ಕಾವೇರಿ ನೀರು ಹಂಚಿಕೆ- ಜಗಳಕ್ಕೆ ಪರಿಹಾರವಿದೆಯೇ?-ಬಂಜಗೆರೆ 

 
 
ತಾವು ಪಾಂಡವ ಪರಂಪರೆಗೆ ಸೇರಿದವರು, ಅರ್ಜುನನೇ ತಮಗೆ ಮೂಲಗುರು, ಅರ್ಜುನನಿಂದ ಕಿನ್ನರಿ ವಾದ್ಯ ತಮಗೆ ಬಳುವಳಿ ಬಂದಿದೆ ಎಂದು ಹೇಳಿಕೊಳ್ಳುವ ಕಿನ್ನರಿ ಜೋಗಿಗಳು ಭೈರವನ ಆರಾಧಕರು. ಕಿವಿಗೆ 'ಕಪಾಲಿ' ತೊಡಿಸಿ ಕರ್ಣಕುಂಡಲವಿಟ್ಟು ಭೈರವನ ಸನ್ನಿದಿಯಲ್ಲಿ ದೀಕ್ಷೆ ಪಡೆಯುತ್ತಾರೆ. ಕುತ್ತಿಗೆಗೆ ಸಿಂಗಿನಾತ ಕಟ್ಟಿಕೊಳ್ಳುತ್ತಾರೆ.
 
ಕಿನ್ನರಿ ಜೋಗಿಗಳು ಮೂಲತಃ ಗಾಯನ ಸಂಪ್ರದಾಯಕ್ಕೆ ಸೇರಿದವರು. ಹಾಡುವಾಗ ಕಿನ್ನರಿ ಮತ್ತು ಚಿಟಕಿಯ ತಾಳಕ್ಕೆ ಅನುಗುಣವಾಗಿ ಲಘುವಾದ ಕುಣಿತ ಮಾಡುತ್ತಾರೆ. ಕಿನ್ನರಿ ದಂಬರಿಗೆ, ಪಿಳ್ಳಂಗೋವಿ, ಚಿಟಕಿ, ಗಗ್ಗರ, ಕಿರುಗೆಜ್ಜೆ ಇದು ಕಿನ್ನರಿ ಜೋಗಿಗಳು ಬಳಸುವ ವಾದ್ಯಗಳು. ಸಾಮಾನ್ಯವಾಗಿ ಮೂರರಿಂದ ಐದು ಮಂದಿ ಇರುವ ತಂಡದಲ್ಲಿ ಮುಮ್ಮೇಳದ ಹಾಡುಗಾರ ಹಾಡುತ್ತಾ ಕುಣಿಯುತ್ತಾನೆ. ಉಳಿದವರು ಹಿಮ್ಮೇಳ ಹಾಡುತ್ತಾ ಮುಮ್ಮೇಳದವನ ಕುಣಿತ ಅನುಸರಿಸಿ ಹೆಜ್ಜೆ ಹಾಕುತ್ತಾ ನರ್ತಿಸುತ್ತಾರೆ. ಕಿನ್ನರಿ ಜೋಗಿಗಳ ಹಾಡಿನ ಧಾಟಿಯೇ ವಿಶಿಷ್ಟವಾದುದು. ಸಂಗೀತ, ನೃತ್ಯ, ಸಾಹಿತ್ಯ ಮತ್ತು ಸಂಭಾಷಣೆಗಳಿಂದ ಕೂಡಿದ ಇವರ ಕಥನ ಕಲೆ ರಂಜನೀಯವಾದುದು.
 
ಕಿನ್ನರಿ ಜೋಗಿಗಳು ಬಸವಕುಮಾರ- ಲೋಹಿತಕುಮಾರ, ರಾಜಹಂಸ-ಪರಮಹಂಸ, ಚಿತ್ರಶೇಖರ- ಸೋಮಶೇಖರ, ಲಕ್ಷಾಪತಿ ರಾಜನ ಕಥೆ ಮುಂತಾದ ಹಾಡ್ಗಥೆಗಳನ್ನು ಹಾಡುವುದಲ್ಲದೆ, ಸಮಕಾಲೀನ ಸಂದರ್ಭದ ಪ್ರಚಲಿತ ವಿಷಯಗಳಿಗೂ ಸಹ ತಮ್ಮ ಹಾಡಿನ ರೀತಿಯನ್ನು ಒಗ್ಗಿಸಿಕೊಂಡಿದ್ದಾರೆ. ಆಧುನಿಕ ನಾಟಕಕಾರರು ಕಿನ್ನರಿಜೋಗಿಗಳ ಕಥನ ಕಲೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುತ್ತಾರೆ.
ಶಿವಮೊಗ್ಗ, ಧಾರವಾಡ, ಬಿಜಾಪುರ ಮತ್ತು ಬೆಳಗಾಂ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಕಲಾವಿದರನ್ನು 'ದೇವರ ಮಕ್ಕಳು' ಎಂದೂ ಕರೆಯುವುದುಂಟು. 
 
 
 

ಕಾವೇರಿ ಕಥನ-೬-ನ್ಯಾಯ ಮಂಡಳಿಯ ಮಧ್ಯಂತರ ಹಾಗೂ ಅಂತಿಮ ತೀರ್ಪುಗಳ ವಿವರ

 
ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್
 
ದಶಕಗಳ ಕಾಲ ಕರ್ನಾಟಕಕ್ಕೆ ಸಲ್ಲಬೇಕಾದ ಕಾವೇರಿ ನದಿಯ ನೀರಿನ ಪಾಲನ್ನು ಕಬಳಿಸುತ್ತಲೇ ಬಂದ ತಮಿಳುನಾಡು ಅಂತಿಮವಾಗಿ ೨-೫-೧೯೯೦ ರಂದು ರಚಿತವಾದ ಕಾವೇರಿ ನ್ಯಾಯ ಮಂಡಳಿಯ ಮುಂದೆಯೂ ತನ್ನ ವಿತಂಡ ವಾದವನ್ನೇ ಮುಂದಿಡತೊಡಗಿತು. ೩೧-೫-೧೯೭೨ ರಂದು ಇದ್ದಂತೆ ಅಂದರೆ ನ್ಯಾಯ ಮಂಡಳಿ ರಚನೆಯಾದ ದಿನಾಂಕದಿಂದ ೧೮ ವರ್ಷಗಳ ಹಿಂದಿನ ಲೆಕ್ಕಾಚಾರವನ್ನು ಪರಿಗಣಿಸಬೇಕೆಂದು ಹೇಳತೊಡಗಿತ್ತು. ೧೯೭೨ ರಲ್ಲಿ ೧೯೨೪ ರ ಬ್ರಿಟೀಷರ ಕಾಲದ ಕರಾಳ ಒಪ್ಪಂದ ಊರ್ಜಿತವಾಗಿತ್ತೆಂಬುದೇ ತಮಿಳುನಾಡಿನ ವಾದವಾಗಿತ್ತು. ಅಂತೆಯೇ ೧೯೭೨ ರ ಹಿಂದೆ ಇದ್ದಂತೆ ಕರ್ನಾಟಕ ತಾನು ಬಳಸಿದ್ದ ಅಥವಾ ತಾನು ಸಂಗ್ರಹ ಮಾಡಿದ್ದ ನೀರಿನ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರನ್ನು ೧೯೯೦ ರ ನಂತರವೂ ಸಂಗ್ರಹ ಮಾಡದಂತೆ ನಿರ್ಬಂಧಿಸಬೇಕೆಂದೂ, ತಮಿಳುನಾಡು ಮತ್ತು ನ್ಯಾಯ ಮಂಡಳಿಯ ಅನುಮತಿಯನ್ನು ಪಡೆಯದೇ ಕರ್ನಾಟಕವು ಯಾವುದೇ ಹೊಸ ನೀರಾವರಿ ಯೋಜನೆಗಳನ್ನೂ ಕೈಗೆತ್ತಿಕೊಳ್ಳದಂತೆ ನಿರ್ಬಂಧಿಸಬೇಕೆಂದೂ ಒತ್ತಾಯಿಸಿತು. ಈಗಾಗಲೇ ಕರ್ನಾಟಕದಲ್ಲಿ ನಿರ್ಮಾಣ ಹಂತದಲ್ಲಿರುವ ಹಲವಾರು ನೀರಾವರಿ ಯೋಜನೆಗಳನ್ನು ಮುಂದುವರೆಸದಂತೆಯೂ ನಿರ್ಬಂಧಿಸುವಂತೆ ನ್ಯಾಯ ಮಂಡಳಿಯ ಮುಂದೆ ತನ್ನ ವಾದವನ್ನು ಮಂಡಿಸಿತ್ತು. ಅಲ್ಲದೆ ತನಗೆ ತುರ್ತಾಗಿ ನೀರಿನ ಅವಶ್ಯಕತೆ ಇರುವುದರಿಂದ ಮಧ್ಯಂತರ ಅದೇಶ ನೀಡಿ ತಮಿಳುನಾಡಿಗೆ ಮತ್ತು ಪಾಂಡಿಚೆರಿ ರಾಜ್ಯಗಳಿಗೆ ೩೦೨ ಟಿ.ಎಮ್.ಸಿ.ಗಳಷ್ಟು ನೀರನ್ನು ಕರ್ನಾಟಕದ ಜಲಾಶಯಗಳಿಂದ ಬಿಡಿಸಬೇಕೆಂದು ಆಗ್ರಹಿಸಿತು. ಅದಕ್ಕೆ ಮಾನದಂಡವಾಗಿ ೨೫ ವರ್ಷಗಳಷ್ಟು ಹಿಂದಿನ ಲೆಕ್ಕಾಚಾರವನ್ನು ನೀಡಿ ಅದರಂತೆ ಪ್ರತೀ ತಿಂಗಳೂ ಇಂತಿಷ್ಟು ಎಂಬಂತೆ ನೀರು ಬಿಡಬೇಕೆಂದು ತನ್ನ ವಾದದಲ್ಲಿ ಒತ್ತಾಯಿಸಿತು. ಆದರೆ ಕರ್ನಾಟಕ ತಮಿಳುನಾಡಿನ ಈ ವಾದವನ್ನು ತೀರ್ವವಾಗಿ ವಿರೋಧಿಸಿ, ಅಂತರ ರಾಜ್ಯ ಜಲಕಾಯ್ದೆಯ ಅನ್ವಯ ನ್ಯಾಯಮಂಡಳಿಗೆ ಮಧ್ಯಂತರ ಅದೇಶವನ್ನು ಹೊರಡಿಸುವಂತಹ ಯಾವುದೇ ಅಧಿಕಾರವೂ ಇಲ್ಲವೆಂದು ತನ್ನ ವಾದದಲ್ಲಿ ಪುಷ್ಟೀಕರಿಸಿತು. ತಮಿಳುನಾಡು ಹಾಗೂ ಪಾಂಡಿಚೆರಿ ರಾಜ್ಯಗಳು ಸಲ್ಲಿಸಿರುವ ಬೇಡಿಕೆ ವಾಸ್ತವತೆಯಿಂದ ಕೂಡಿಲ್ಲವೆಂಬುದನ್ನೂ ಅಂಕಿ ಅಂಶಗಳನ್ನು ನಿಖರವಾಗಿ ನೀಡುವುದರ ಮೂಲಕ ವಾದಿಸಿತ್ತು. ತಾನು ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳು ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿಕ್ಕಾಗಿರುವುದರಿಂದ, ಅದಕ್ಕೆ ತನ್ನ ಪಾಲಿನ ನೀರನ್ನಷ್ಟೇ ಬಳಸಿಕೊಂಡು ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿರುವುದರಿಂದ ತಮಿಳುನಾಡಿಗೆ ಈ ಯೋಜನೆಗಳನ್ನು ವಿರೋಧಿಸಲು ಯಾವುದೇ ಸಕಾರಣವಿಲ್ಲವೆಂದೂ ವಾದಿಸಿತು. ಕರ್ನಾಟಕದ ವಾದದಲ್ಲಿದ್ದ ಸತ್ಯಾಸತ್ಯತೆಯ ಅಂಶಗಳನ್ನು ಮನಗಂಡ ನ್ಯಾಯ ಮಂಡಳಿಯು ಮಧ್ಯಂತರ ಅದೇಶವನ್ನು ನೀಡುವುದು ತನ್ನ ವ್ಯಾಪ್ತಿಯಲ್ಲಿ ಬಾರದಿರುವುದರಿಂದ ತಮಿಳುನಾಡು ಮತ್ತು ಪಾಂಡಿಚೆರಿ ರಾಜ್ಯಗಳ ಅರ್ಜಿಗಳನ್ನು ವಜಾಗೊಳಿಸಿತ್ತು.
 
 
 

 ಕರ್ನಾಟಕದ ಹರ್ನಿಯಾ ಸರಕಾರಕ್ಕೆ ಮದ್ದು-ಪಕ್ಷಾಂತರ ಕಾಯ್ದೆಗೆ ಸರ್ಜರಿಯ ಅನಿವಾರ್ಯತೆ

’ಸಹನಾ’            
               
ಕರ್ನಾಟಕದ ರಾಜಕಾರಣ ಇತ್ತೀಚಿನ ದಿನಗಳಲ್ಲಿ ಅತ್ಯಂತ ವರ್ಣರಂಜಿತವಾಗಿದೆ. ರಾಜಕೀಯ ಎಂದರೆ ಅಸಹ್ಯ ಹುಟ್ಟಿಸುವಂತ ವಾತಾವರಣವನ್ನ ಕರ್ನಾಟಕದ ಜನ ನೋಡುವಂತಾಗಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ. ಯಡಿಯೂರಪ್ಪ ಸರ್ಕಾರದ ನಾಟಕೀಯ ರಾಜಕೀಯ ಬೆಳವಣಿಗೆಗಳು ಈಗ ದೇಶದ ಮೂಲೆ ಮೂಲೆಗಳಲ್ಲಿ, ಮಾದ್ಯಮಗಳಲ್ಲಿ ದಿನನಿತ್ಯ ಚರ್ಚೆಗೆ ಗ್ರಾಸವಾಗಿರುವುದೇ ಇದಕ್ಕೆ ಸಾಕ್ಷಿ. ೧೯೮೫ ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ತಂದ ಮಹತ್ವದ ಪಕ್ಷಾಂತರ ನಿಷೇಧ ಕಾಯ್ದೆ ಇಪ್ಪತೈದು ವರ್ಷಗಳಲ್ಲೇ ತನ್ನ ಸತ್ವ ಕಳೆದುಕೊಳ್ಳುವಂತೆ ಮಾಡಿದ ಕೀರ್ತಿ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ, ಅವರ ’ಆಪರೇಷನ್ ಕಮಲ’ಕ್ಕೆ ಸಲ್ಲುತ್ತದೆ! ಪಕ್ಷಾಂತರ ನಿಷೇಧ ಕಾಯ್ದೆ ಈಗ ಹಾಸ್ಯಾಸ್ಪದವಾಗಿದ್ದು ಅದಕೊಂದು ತಿದ್ದುಪಡಿಯ ತೀವ್ರ ಅಗತ್ಯ ಕಾಣುತ್ತಿದೆ. ಸರ್ಕಾರದ ರಚನೆ ಹಾಗು ಅಧಿಕಾರ ಹಿಡಿಯುವ ನೆಪದಲ್ಲಿ ಆರಂಭವಾದ ಬಿಜೆಪಿಯ ’ಆಪರೇಷನ್ ಕಮಲ’ ಈಗ ಬೃಹದಾಕಾರವಾಗಿ ಬೆಳೆದು ಅದೇ ಪಕ್ಷದ ಬುಡ ಅಲ್ಲಾಡಿಸುತ್ತಿದೆ. ಕರ್ನಾಟಕ ರಜಕೀಯದ ಈ ದೊಂಬರಾಟ ಗೌರವಯುತ ರಾಜಕಾರಣಿಗಳ (ಅಂಥವರು ಇದ್ದರೆ!) ನೆಮ್ಮದಿ ಕೆಡಿಸಿದೆ ಅಂತಾನೆ ಹೇಳ್ಬೇಕು.